Kundapra.com ಕುಂದಾಪ್ರ ಡಾಟ್ ಕಾಂ

ಅಧ್ಯಯನದಿಂದ ಸಾಹಿತ್ಯ ರಚನೆ ಕೌಶಲ್ಯ ಗಟ್ಟಿ: ಜನಾರ್ದನ ಮರವಂತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟ ಕಲಾ ಸೌರಭ ಸಂಸ್ಕೃತಿಕ ಸಂಘಟನೆ, ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜು ಆಶ್ರಯದಲ್ಲಿ ಕಾಲೇಜು ವೇದಿಕೆಯಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಪದವಿ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಎಸ್. ಜನಾರ್ದನ ಮರವಂತೆ ಮಾತನಾಡಿ ಸಾಹಿತ್ಯ, ಶಿಲ್ಪ ಕಲೆಗೆ ಸಾಮ್ಯತೆ ಇದೆ. ಶಿಲ್ಪಿ ತುಂಡುಕಲ್ಲಿಗೆ ಪ್ರತಿಭೆ, ಧ್ಯಾನದ ಮೂಲಕ ಸುಂದರ ಮೂರ್ತಿ ಕೊಟ್ಟರೆ ಸಾಹಿತಿ ತನಗೆ ಸಿಕ್ಕ ವಸ್ತುವಿಗೆ ತನಗೆ ಬೇಕಾದ ಹಾಗೆ ರೂಪ ಕೊಡಲು ಭಾಷೆ, ಜ್ಞಾನ ಬಳಸುತ್ತಾನೆ. ಸಾಹಿತ್ಯ ಕ್ಷೇತ್ರಕ್ಕೆ ಬರುವ ಎಲ್ಲರಿಗೂ ಭಾಷೆ ಬಳಕೆ, ನಿರೂಪಿಸುವ ತಾಕತ್ತು ಇರಬೇಕಾಗುತ್ತದೆ. ಭಾಷೆ ಹೇಗೆ ಬಳಸಬೇಕು ಹೇಗೆ ಪ್ರಸ್ತುತ ಪಡಿಸಬೇಕು ಎನ್ನುವುದು ಕೊರತೆಯಾಗಿದ್ದು, ಅಧ್ಯಯನದ ಮೂಲಕ ಕೊರೆತೆ ನೀಗಿಸಿಕೊಳ್ಳಬೇಕು ಎಂದರು.

ಭಾಷಾ ಜ್ಞಾನ ಹಿಡಿತ ಇಲ್ಲದಿದ್ದಾಗ ನಾವು ಹೇಳಬೇಕಾದ ಸಂಗತಿ ಹೊರಗಿಡಲು ಆಗದು. ಭಾಷೆ ಮತ್ತು ಜ್ಞಾನದ ಸಂಪಾದನೆಗೆ ತಕ್ಕಮಟ್ಟಿಗಿನ ಅಧ್ಯಯನ ಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಆಯ್ಕೆ ಹಲವಿದ್ದು, ಕವನ, ಕತೆಗಳು, ಕಾದಂಬರಿ, ಪ್ರವಾಸಕಥನಾ ಸಾಹಿತ್ಯ ಬರವಣಿಗೆಗೆ ಬೇಕಾದ ಭಾಷಾ ಜ್ಞಾನ ಪಡೆಯದಿದ್ದರೆ ನಾವು ಹೇಳಬೇಕದ ವಿಷಯ ಹೇಳೋದಕ್ಕೆ ಆಗೋದಿಲ್ಲ ಎಂದರು.

ಕುಂದಾಪುರ ಡಾ ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಉಮೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಭಾವನಾ ಆರ್. ಭಟ್ ಕೆರೆಮಠ, ಕೋಟ ಕಲಾ ಸೌರಭ ಸಾಂಸ್ಕೃತಿಕ ಸಂಘದ ಸುದರ್ಶನ ಉರಾಳ ಕೋಟ, ಡಾ. ಬಿ. ಬಿ. ಹೆಗ್ಡೆ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಚೇತನ ಕುಮಾರ್ ಶೆಟ್ಟಿ ಕೊವಾಡಿ ಇದ್ದರು.

ತೆಕ್ಕಟ್ಟೆ ಕೊಮೆ ಯಶಸ್ವಿ ಕಲಾವೃಂದ ವೆಂಕಟೇಶ ವೈದ್ಯ ಸ್ವಾಗತಿಸಿದರು. ಗಂಗೊಳ್ಳಿ ಸರಸ್ವತಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಸುಜಯೀಂದ್ರ ಹಂದೆ ಹೆಚ್. ಪ್ರಾಸ್ತಾವಿಕ ಮಾತನಾಡಿದರು. ಭಾಗವತ ಲಂಬೋಧರ ಹೆಗ್ಡೆ ನಿಟ್ಟೂರು ನಿರೂಪಿಸಿದರು. ರಾಘವೇಂದ್ರ ತುಂಗ ಪಿ. ವಂದಿಸಿದರು.

ಇದನ್ನೂ ಓದಿ:
► ಬಳಕೆಯಿಂದ ಮಾತ್ರ ಕನ್ನಡ ಉಳಿವು ಸಾಧ್ಯ: ಭಾವನಾ ಆರ್. ಭಟ್ – https://kundapraa.com/?p=35291  .

ವಿಚಾರಗೊಷ್ಠಿ:
ಕುಂದಾಪುರ ಡಾ. ಬಿ. ಬಿ. ಹೆಗ್ಡೆ ಕಾಲೇಜು ವೇದಿಕೆಯಲ್ಲಿ ನಡೆದ ಜಿಲ್ಲಾ ವಿದ್ಯಾರ್ಥಿ ಸಾಹಿತ್ಯ ಸಮ್ಮೆಳನದಲ್ಲಿ ಗಂಗೊಳ್ಳಿ ಸರಸ್ವತಿ ಮಹಾವಿದ್ಯಾಲಯ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿ ಚೈತ್ರಾ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಮಂಡಿಸಿದರು.

ಕಂಬದಕೋಣೆ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ಪ್ರತಿಮಾ ಎನ್.ಆರ್. ಗೋಪಾಲಕೃಷ್ಣ ಅಡಿಗ, ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ವಿದ್ಯಾರ್ಥಿನಿ ಶ್ವೇತಾ ಪಿ. ಕುವೆಂಪು, ಕಿದಿಯೂರು ಶ್ಯಾಮಿಲಿ ಪದವಿಪೂರ್ವ ಕಾಲೇಜು ಪ್ರಜ್ಞಾ ಗೋಪಾಲಕೃಷ್ಣ ಅಡಿಗರ ಕುರಿತು ಮಾತನಾಡಿದರು.

ವಿದ್ಯಾರ್ಥಿ ಸಾಹಿತ್ಯ ಸಮ್ಮೆಳನ ಅಧ್ಯಕ್ಷೆ ಭಾವನಾ ಆರ್.ಭಟ್ ಕೆರೆಮನೆ ಇದ್ದರು. ಬಿ.ಬಿ.ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಾದ ಭಾಸ್ಕರ ಸ್ವಾಗತಿಸಿದರು. ಸಮೀಕ್ಷಾ ನಿರೂಪಿಸಿ, ಶ್ವೇತಾ ವಂದಿಸಿದರು. ಬಿಬಿ ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಾದ ದೀಕ್ಷಾ, ಸುಜಾತಾ ಖಾರ್ವಿ ಕನ್ನಡ ಗೀತೆ ಹಾಡಿದರು.

ಕಥಾಗೋಷ್ಠಿ:
ಕಂಬದಕೋಣೆ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ವೀಣಾ ಮೇಸ್ತ ಅಧ್ಯಕ್ಷತೆಯಲ್ಲಿ ಕಥಾ ವೇದಿಕೆ ಕಾರ‍್ಯಕ್ರಮ ನಡೆಯಿತು.

ಕುಂದಾಪುರ ಡಾ. ಬಿ. ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿ ವಿಶ್ವನಾಥ್ ಅವರ ಕ್ಷಣದ ನಿರ್ಧಾರ, ಕಿದಿಯೂರು ಶ್ಯಾಮಿಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಸುಜಾತಾ ಅವರ ಮನವೀಕೃತ ಅಭಿವೃದ್ಧಿ ಮಾರಕ, ಸಮ್ಮೆಳನಾಧ್ಯಕ್ಷೆ ಭಾವನಾ ಆರ್. ಭಟ್ ಕೆರೆಮಠ ಅವರ ಸ್ಮಿತ ಅಸ್ಮಿತ ಕತೆಗಳು ಸಾಹಿತ್ಯಾಸಕ್ತರ ಸೆಳೆಯಿತು.

ಡಾ. ಬಿ. ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಾದ ಸುಪ್ರೀತಾ ಶೆಟ್ಟಿ ಸ್ವಾಗತಿಸಿದರು. ಶ್ರೀರಾಮ್ ನಿರೂಪಿಸಿ, ಸುಶ್ಮಿತಾ ವಂದಿಸಿದರು. ಸಾಯಿ ವಿಜೇತ ಕನ್ನಡ ಗೀತೆ ಹಾಡಿದರು.

ಕಾವ್ಯಗೋಷ್ಠಿ:
ಕುಂದಾಪುರ ಡಾ. ಬಿ. ಬಿ ಹೆಗ್ಡೆ ಕಾಲೇಜು ವಿದ್ಯಾರ್ಥಿ ಶರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಕಾವ್ಯ ವೇದಿಕೆ ಕಾರ‍್ಯಕ್ರಮ ನಡೆಯಿತು.

ಕಂಬದಕೋಣೆ ಸಂವೇದನ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿನಿ ರೇಶ್ಮಾ, ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ವಿದ್ಯಾರ್ಥಿ ನವೀನ್ ಆರ್.ಭಟ್, ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜ್ ವಿದ್ಯಾರ್ಥಿನಿ ಅರುಂಧತಿ, ಕುಂದಾಪುರ ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿನಿ ವಂದ್ಯಾ ಕಾಮತ್, ಡಾ. ಬಿ. ಬಿ. ಹೆಗ್ಡೆ ಕಾಲೇಜು ಮಹೇಶ್ ಕೊಠಾರಿ, ಉಡುಪಿ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅನಿತಾ, ಕಿದಿಯೂರು ಶ್ಯಾಮಿಲಿ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿನಿ ಅನಿಷಾ ಕ್ರಿಸ್ತ ಜ್ಯೋತಿ ಕವನ ವಾಚನ ಮಾಡಿದರು.

ಡಾ. ಬಿ. ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಾದ ಪ್ರೀತಿ ಸ್ವಾಗತಿಸಿ, ಶ್ವೇತಾ ನಿರ್ವಹಸಿ, ಪೂರ್ಣಿಮಾ ವಂದಿಸಿದರು.

 

 

Exit mobile version