Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು ಬಪ್ಪನಬೈಲು ಶ್ರೀ ಜಟ್ಟಿಗೇಶ್ವರ ಮತ್ತು ಸಹಪರಿವಾರ ದೈವಸ್ಥಾನ: ಆಹಾರ ಸಾಮಾಗ್ರಿ ಕಿಟ್ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶ್ರೀ ಜಟ್ಟಿಗೇಶ್ವರ ಮತ್ತು ಸಹಪರಿವಾರ ದೈವಗಳ ಸೇವಾಸಮಿತಿ (ರಿ) ಮತ್ತು ಶ್ರೀ ಜಟ್ಟಿಗೇಶ್ವರ ಯುವಕ ಮಂಡಳಿ  ಬಪ್ಪನಬೈಲು ಇವರ ಜಂಟಿ ಸಹಯೋಗದಲ್ಲಿ ಬಪ್ಪನಬೈಲಿನ ಜಟ್ಟಿಗೇಶ್ವರ ದೇವರನ್ನು ನಂಬಿಕೊಂಡು ಬಂದಿರುವ ಸುಮಾರು ೯೩ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‌ನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ತಾನದ ಆಡಳಿತ ಮಂಡಳಿಯ ಗೌರವಾದ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ, ಯುವಕ ಮಂಡಲದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಏರಡೂ ಮಂಡಳಿಯ ಸರ್ವಸದಸ್ಯರು ಮತ್ತು ಊರಿನ ನಾಗರಿಕರು ಹಾಜರಿದ್ದರು. ಆಹಾರ ಸಾಮಾಗ್ರಿ ವಿತರಿಸಲು ಧನ ಸಹಾಯ ಮಾಡಿದ ಊರಿನ ಮಹನೀಯರನ್ನು ಅಭಿನಂದಿಸಲಾಯಿತು.

Exit mobile version