ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶ್ರೀ ಜಟ್ಟಿಗೇಶ್ವರ ಮತ್ತು ಸಹಪರಿವಾರ ದೈವಗಳ ಸೇವಾಸಮಿತಿ (ರಿ) ಮತ್ತು ಶ್ರೀ ಜಟ್ಟಿಗೇಶ್ವರ ಯುವಕ ಮಂಡಳಿ ಬಪ್ಪನಬೈಲು ಇವರ ಜಂಟಿ ಸಹಯೋಗದಲ್ಲಿ ಬಪ್ಪನಬೈಲಿನ ಜಟ್ಟಿಗೇಶ್ವರ ದೇವರನ್ನು ನಂಬಿಕೊಂಡು ಬಂದಿರುವ ಸುಮಾರು ೯೩ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‌ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ತಾನದ ಆಡಳಿತ ಮಂಡಳಿಯ ಗೌರವಾದ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ, ಯುವಕ ಮಂಡಲದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಏರಡೂ ಮಂಡಳಿಯ ಸರ್ವಸದಸ್ಯರು ಮತ್ತು ಊರಿನ ನಾಗರಿಕರು ಹಾಜರಿದ್ದರು. ಆಹಾರ ಸಾಮಾಗ್ರಿ ವಿತರಿಸಲು ಧನ ಸಹಾಯ ಮಾಡಿದ ಊರಿನ ಮಹನೀಯರನ್ನು ಅಭಿನಂದಿಸಲಾಯಿತು.