ಹೇ ಮನುಜ ನೀನೆಷ್ಟು ಕ್ರೂರಿ?! ಅತಿಯಾದರೆ ಅಮೃತವೂ ವಿಷವಾಗುತ್ತದಂತೆ. ಮಾಡಬಾರದನ್ನೆಲ್ಲಾ ಮಾಡಿ ತೀರಿದೆ. ಕಂಡ ಕಂಡದನ್ನೆಲ್ಲಾ ಕಿತ್ತು ತೆಗೆದುಕೊಂಡೆ. ಆ ನಿನ್ನ ಆಸೆಗೆ ಕೊನೆ ಎನ್ನುವುದೇ ಇಲ್ಲವಾಗಿ ಹೊಗಿತ್ತು. ಒಂದು ಮಾತು ಕೇಳದೆ ನಮ್ಮ ಕುಲಕ್ಕೆ ಕೊಡಲಿ ಹಾಕಿದೆ. ಕಡಿದ ಮರದಿಂದ ಮನೆಯನ್ನು ಶೃಂಗಾರ ಮಾಡಿಕೊಂಡೆ ಆದರೆ ಈಗ ನಿನಗೆ ಆ ಮನೆಯಲ್ಲಿ ಉಳಿಯಲು ಆದಿತೇ, ಇಲ್ಲ. ಕ್ವಾರನ್ಟೈನ್ ಎನ್ನೋ ಜೈಲು ಇಲ್ಲ ಯಾಮಾರಿದ್ರೆ ನೇರ ಮೇಲಕ್ಕೆ.
ಹಿರಿಯರು ಸುಮ್ಮನೆ ಹೇಳಿಲ್ಲ ತಾನೊಂದು ಬಗೆದರೆ ದೈವವೊಂದು ಬಗೆಯಿತಂತೆ ಅಂತ. ನಾವು ಯಾವುದೇ ಕಾರಣಕ್ಕೂ ನಿಮ್ಮ ವಿನಾಶವನ್ನೂ ಬಯಸುವುದಿಲ್ಲ ನೀವಾಗಿಯೇ ನಿಮ್ಮ ಚಿತೆಗೆ ಬೆಂಕಿ ಇಟ್ಟುಕೊತ್ತಿದ್ದೀರಿ. ಕಂಡ ಕಂಡ ಜೀವಿಗಳನೆಲ್ಲ ಕೊಂದು ತಿಂದು ಕಾಣದ ಜೀವಿಯ ಬರಮಾಡಿಕೊಂಡೆಯೆಲ್ಲ ಮನುಜ. ಎಷ್ಟೊಂದು ವಿಪರ್ಯಾಸ ನೋಡಿ ಒಂದು ಕ್ರಿಮಿ ನಿಮ್ಮನ್ನೆಲ್ಲಾ ಎಷ್ಟೊಂದು ಆಟ ಆಡಿಸ್ತಾ ಇದೆ. ಇದು ನೊಂದ ನನ್ನ ಕಣ್ಣೀರಿನ ಪ್ರತಿ ಫಲವೂ ಇರಬಹುದು.
ಕೈಯಲ್ಲಾಗದ ನಿಶಕ್ತರೂ, ಬಡವರು ಮಾತ್ರ ಸಾಯುತ್ತಾರೆ ನನಗೇನೂ ಆಗದು ಎಂದು ಬೀಗಬೇಡ. ನಿಮ್ಮಂತಹ ಉಳ್ಳವರ ಮನೆಯ ಪ್ರತೀ ಕೆಲಸಕ್ಕೂ ಕೂಲಿಗಳೇ ಬೇಕು, ಬಡವರೇ ಬೇಕು. ಅವರಿಲ್ಲದಿದ್ದರೆ ನಿಮ್ಮ ಮನೆಯ ಒಂದು ಪಾತ್ರೆ ಕೂಡ ಅಲುಗಾಡದು. ನೀವು ಮಾಡಿರುವ ದೊಡ್ಡ ಹೋಟೆಲುಗಳಿಗೆ ಇದೇ ಕಾರ್ಮಿಕರು ಬೇಕು. ಆದರೆ ಈಗ ಅವರ ಅಳಲು ಕೇಳಲೂ ಯಾರು ಇಲ್ಲ ಒಂದು ಮಾತ್ರ ನೆನಪಿರಲಿ ಅವರಿದ್ದರೆ ನೀವು ನೀವಿದ್ದರೆ ಅವರಲ್ಲ.
ನೀ ತಲೆಬಾಗಿದರೆ ತೋಳಿನಲ್ಲಿ ಜಾಗಕೊಡುವೆ
– ಇಂತಿ ನಿನ್ನ ಪ್ರಕೃತಿ ಮಾತೆ
- ಮಹೇಶ್ ಕೊಠಾರಿ, ಕಂಬದಕೋಣೆ
