ಪ್ರಕೃತಿಯಿಂದ ಮನುಜನಿಗೊಂದು ಪತ್ರ!

Call us

Call us

Call us

Call us

ಹೇ ಮನುಜ ನೀನೆಷ್ಟು ಕ್ರೂರಿ?! ಅತಿಯಾದರೆ ಅಮೃತವೂ ವಿಷವಾಗುತ್ತದಂತೆ. ಮಾಡಬಾರದನ್ನೆಲ್ಲಾ ಮಾಡಿ ತೀರಿದೆ. ಕಂಡ ಕಂಡದನ್ನೆಲ್ಲಾ ಕಿತ್ತು ತೆಗೆದುಕೊಂಡೆ. ಆ ನಿನ್ನ ಆಸೆಗೆ ಕೊನೆ ಎನ್ನುವುದೇ ಇಲ್ಲವಾಗಿ ಹೊಗಿತ್ತು. ಒಂದು ಮಾತು ಕೇಳದೆ ನಮ್ಮ ಕುಲಕ್ಕೆ ಕೊಡಲಿ ಹಾಕಿದೆ. ಕಡಿದ ಮರದಿಂದ ಮನೆಯನ್ನು ಶೃಂಗಾರ ಮಾಡಿಕೊಂಡೆ ಆದರೆ ಈಗ ನಿನಗೆ ಆ ಮನೆಯಲ್ಲಿ ಉಳಿಯಲು ಆದಿತೇ, ಇಲ್ಲ. ಕ್ವಾರನ್ಟೈನ್ ಎನ್ನೋ ಜೈಲು ಇಲ್ಲ ಯಾಮಾರಿದ್ರೆ ನೇರ ಮೇಲಕ್ಕೆ.

Call us

Click Here

ಹಿರಿಯರು ಸುಮ್ಮನೆ ಹೇಳಿಲ್ಲ ತಾನೊಂದು ಬಗೆದರೆ ದೈವವೊಂದು ಬಗೆಯಿತಂತೆ ಅಂತ. ನಾವು ಯಾವುದೇ ಕಾರಣಕ್ಕೂ ನಿಮ್ಮ ವಿನಾಶವನ್ನೂ ಬಯಸುವುದಿಲ್ಲ ನೀವಾಗಿಯೇ ನಿಮ್ಮ ಚಿತೆಗೆ ಬೆಂಕಿ ಇಟ್ಟುಕೊತ್ತಿದ್ದೀರಿ. ಕಂಡ ಕಂಡ ಜೀವಿಗಳನೆಲ್ಲ ಕೊಂದು ತಿಂದು ಕಾಣದ ಜೀವಿಯ ಬರಮಾಡಿಕೊಂಡೆಯೆಲ್ಲ ಮನುಜ. ಎಷ್ಟೊಂದು ವಿಪರ್ಯಾಸ ನೋಡಿ ಒಂದು ಕ್ರಿಮಿ ನಿಮ್ಮನ್ನೆಲ್ಲಾ ಎಷ್ಟೊಂದು ಆಟ ಆಡಿಸ್ತಾ ಇದೆ. ಇದು ನೊಂದ ನನ್ನ ಕಣ್ಣೀರಿನ ಪ್ರತಿ ಫಲವೂ ಇರಬಹುದು.

ಕೈಯಲ್ಲಾಗದ ನಿಶಕ್ತರೂ, ಬಡವರು ಮಾತ್ರ ಸಾಯುತ್ತಾರೆ ನನಗೇನೂ ಆಗದು ಎಂದು ಬೀಗಬೇಡ. ನಿಮ್ಮಂತಹ ಉಳ್ಳವರ ಮನೆಯ ಪ್ರತೀ ಕೆಲಸಕ್ಕೂ ಕೂಲಿಗಳೇ ಬೇಕು, ಬಡವರೇ ಬೇಕು. ಅವರಿಲ್ಲದಿದ್ದರೆ ನಿಮ್ಮ ಮನೆಯ ಒಂದು ಪಾತ್ರೆ ಕೂಡ ಅಲುಗಾಡದು. ನೀವು ಮಾಡಿರುವ ದೊಡ್ಡ ಹೋಟೆಲುಗಳಿಗೆ ಇದೇ ಕಾರ್ಮಿಕರು ಬೇಕು. ಆದರೆ ಈಗ ಅವರ ಅಳಲು ಕೇಳಲೂ ಯಾರು ಇಲ್ಲ ಒಂದು ಮಾತ್ರ ನೆನಪಿರಲಿ ಅವರಿದ್ದರೆ ನೀವು ನೀವಿದ್ದರೆ ಅವರಲ್ಲ.

ದೊಡ್ಡ ದೊಡ್ಡ ಕಾರ್ಖಾನೆಯನ್ನು ತೆರೆದು ಅಂತಹ ಪವಿತ್ರವಾದ ಗಂಗೆಯನ್ನೇ ಮಲಿನ ಮಾಡಿ ಅದಕ್ಕೆ ಸಾವಿರ ಕೋಟಿ ಸ್ವಚ್ಛ ಮಾಡಲೆಂದು ಬಿಡುಗಡೆ ಮಾಡುತ್ತೀರಿ ಎಷ್ಟೊಂದು ಮೂರ್ಖತನ. ಈಗ ನೋಡು ಮನುಜ ,ಗಂಗೆ ಎಷ್ಟೋ ವರ್ಷಗಳ ಹಿಂದೆ ಹೇಗೆ ಸ್ವಚ್ಛಂದವಾಗಿದ್ದಳೋ ಹಾಗೇ ಇದ್ದಾಳೆ. ನಿನಗೆ ಹೇಳುತ್ತಾ ಹೋದರೆ ವರ್ಷಗಳೇ ಸಾಲದು. ಇನ್ನು ತುಂಬ ಹೇಳಲಿಕ್ಕಿದೆ, ಇದು ಕೇವಲ ಆರಂಭ ಅಷ್ಟೇ. ಹೀಗೆ ಪ್ರಕೃತಿಯ ಎದುರೂ ಮುಂದುವರಿದರೆ ಅಂತ್ಯ ಇನ್ನೂ ಭಯಾನಕವಾಗಿರುತ್ತದೆ. ಪ್ರಕೃತಿಯೊಂದಿಗೆ ಅನುಸರಿಸಿಕೊಂಡು ಹೋಗುವುದನ್ನ ಅಭ್ಯಾಸ ಮಾಡಿಕೋ ನಿನ್ನನ್ನ ಹಸಿರು ತೊಟ್ಟಿಲಲ್ಲಿ ಇಟ್ಟು ತೂಗುತ್ತೆನೆ.

ನೀ ತಲೆಬಾಗಿದರೆ ತೋಳಿನಲ್ಲಿ ಜಾಗಕೊಡುವೆ

Click here

Click here

Click here

Click Here

Call us

Call us

– ಇಂತಿ ನಿನ್ನ ಪ್ರಕೃತಿ ಮಾತೆ

  • ಮಹೇಶ್ ಕೊಠಾರಿ, ಕಂಬದಕೋಣೆ

 

 

Leave a Reply

Your email address will not be published. Required fields are marked *

four × 1 =