Site icon Kundapra.com ಕುಂದಾಪ್ರ ಡಾಟ್ ಕಾಂ

ನಿವೃತ್ತಿಯ ದಿನವೇ ಬ್ರೈನ್ ಹ್ಯಾಮರೇಜ್: ಚಿಕಿತ್ಸೆ ಫಲಿಸದೇ ಕೋಟ ಎಎಸ್‌ಐ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಿವೃತ್ತಿ ದಿನದ ಬೀಳ್ಕೋಡುಗೆ ಸಮಾರಂಭದಂದು ಠಾಣೆಯಲ್ಲಿ ಊಟ ಮಾಡುತ್ತಿದ್ದಾಗಲೇ ಬ್ರೈನ್ ಹ್ಯಾಮರೇಜ್‌ಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೋಟ ಪೊಲೀಸ್ ಠಾಣೆ ಎಎಸ್‌ಐ ಆನಂದ ವೆಂಕಟ್ ದೇವಾಡಿಗ (60) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಎಎಸ್‌ಐ ಆನಂದ ವೆಂಕಟ್ ಅವರು ಮೇ ೩೧ರಂದು ನಿವೃತ್ತಿಯಾಗಬೇಕಿತ್ತು. ಅದೇ ಸಂಭ್ರಮದಲ್ಲಿ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಭಾನುವಾರ ಮಧ್ಯಾಹ್ನ ಠಾಣೆಯೊಳಗೆ ಊಟ ಮಾಡುತ್ತಿದ್ದಾಗಲೇ ಆನಂದ ವೆಂಕಟ್ ಕುಸಿದು ಬಿದ್ದಿದ್ದಾರೆ. ತಕ್ಷಣ ವಾಹನದಲ್ಲಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯದ್ದು ಹೆಚ್ಚಿನ ಚಿಕಿತ್ಸೆಗೆ ತಕ್ಷಣ ಮಣಿಪಾಲ ಆಸತ್ರೆಗೆ ಕರೆದೊಯ್ಯಲಾಯಿತು.

ಮೃತರು ಪತ್ನಿ ಒಬ್ಬ ಮಗ ಹಾಗೂ ಒಬ್ಬಳು ಮಗಳನ್ನು ಅಗಲಿದ್ದಾರೆ.

Exit mobile version