ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೋವಿಡ್-19 ವಿರುದ್ದ ಜಿಲ್ಲಾಡಳಿತ ಕೈಗೊಂಡಿರುವ ಕಾರ್ಯಗಳ ಕುರಿತು ಸುಖಾ ಸುಮ್ಮನೇ , ಯಾವುದೇ ಆಧಾರವಿಲ್ಲದೇ , ಸಾಮಾಜಿಕ ಮಾದ್ಯಮದಲ್ಲಿ ಅವಹೇಳನವಾಗಿ ಅಪವಾದ ಪ್ರಕಟಿಸುವವರ ವಿರುದ್ದ ಎಪಿಡಮಿಕ್ ಆಕ್ಟ್ ಅನ್ವಯ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಕಂಡು ಬಂದಿರುವ 947 ಪಾಸಿಟಿವ್ ಪ್ರಕರಣ ಪೈಕಿ ಎಲ್ಲಾ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಿದ್ದು, ಜಿಲ್ಲಾಡಳಿತ ಹಾಗೂ ಯಾವುದೇ ಸಂಸ್ಥೆಯ ವಿರುದ್ದ ಇಲ್ಲಸಲ್ಲದ ಕಲ್ಪನೆ ಮಾಡಿಕೊಂಡು ಆಧಾರರಹಿತ ಅಪವಾದ ಮಾಡಿ, ಪ್ರಕಟಿಸುವುದು ಸಹಿಸಲು ಅಸಾಧ್ಯವಾದ ಅಪವಾದವಾಗಿದ್ದು, ಯಾರೇ ಆದರೂ ಸಾಮಾಜಿಕ ಮಾಧ್ಯಮದಲ್ಲಿ ಮನಸ್ಸಿಗೆ ಬಂದದ್ದು ಬರೆಯಬಹುದು ಎಂಬುದು ಅವರ ತಪ್ಪು ಕಲ್ಪನೆ,ಅಂತಹವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:
► ಜಿಲ್ಲೆಯಲ್ಲಿ ನೂತನ ಕ್ವಾರಂಟೈನ್ ನಿಯಮ ಜಾರಿ: ಜಿಲ್ಲಾಧಿಕಾರಿ ಜಿ. ಜಗದೀಶ್ – https://kundapraa.com/?p=38518 .
► ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಠ ಮಾಡಿದ ಮಾದರಿ ಶಿಕ್ಷಕ ಬಾಬು ಶೆಟ್ಟಿ – https://kundapraa.com/?p=38485 .
► ಉಡುಪಿ ಜಿಲ್ಲೆ: ಎಸ್.ಎಸ್.ಎಲ್.ಸಿ ಪರೀಕ್ಷೆ ಮಾಹಿತಿಗಾಗಿ ಸಹಾಯವಾಣಿ – https://kundapraa.com/?p=38453 .
► ಮನೆಯಲ್ಲಿಯೇ ಕುಳಿತು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸೇವೆ ಪಡೆಯುವ ನೂತನ ಯೋಜನೆ ಜಾರಿ – https://kundapraa.com/?p=38501 .