ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜೂ.22ರ ಸೋಮವಾರ 14 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢವಾಗಿದೆ. ಇವುಗಳಲ್ಲಿ ಮಹಾರಾಷ್ಟ್ರದಿಂದ ಬಂದ 8 ಮಂದಿಗೆ, ಪಿ-6843 ಸಂಪರ್ಕದಿಂದ 4 ಮಂದಿಗೆ ಹಾಗೂ ಪಾಸಿಟಿವ್ ಬಂದಿದ್ದು, ಉಳಿದ ಎರಡು ಪ್ರಕರಣಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಈ ಪೈಕಿ 6 ಮಂದಿ ಪುರುಷರು, 6 ಮಂದಿ ಮಹಿಳೆಯರು 7 ಹಾಗೂ 15 ವರ್ಷದ ಮಕ್ಕಳು ಸೇರಿದ್ದಾರೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಜೂನ್ 21ರ ಕೋವಿಡ್-19 ವರದಿಯಲ್ಲಿ ಕಾನ್ಸ್ಟೇಬಲ್ ಓರ್ವರಿಗೆ ಪಾಸಿಟಿವ್ ಬಂದಿತ್ತು. ಇಂದು ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದ ಈರ್ವರಿಗೆ ಪಾಸಿಟಿವ್ ದೃಡವಾಗಿದ್ದು, ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಮಾಹಿತಿ ದೊರೆತಿದೆ.
► ಬೈಂದೂರು ಪೊಲೀಸ್ ಠಾಣೆ, ಶಿರೂರು ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಕೊರೋನಾ ಸೊಂಕು ದೃಢ- https://kundapraa.com/?p=38863 .
ಇಂದು 53 ನೆಗೆಟಿವ್:
ಈ ತನಕ ಒಟ್ಟು 13,424ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 12,135ನೆಗೆಟಿವ್, 1077 ಪಾಸಿಟಿವ್ ಬಂದಿದ್ದು, 212 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 53 ನೆಗೆಟಿವ್, 14 ಪಾಸಿಟಿವ್ ಬಂದಿದೆ.
106 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಸದ್ಯ ಒಟ್ಟು 1077ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 969 ಮಂದಿ ಬಿಡುಗಡೆಯಾಗಿದ್ದು, 106 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಇದನ್ನೂ ಓದಿ:
► ಬೈಂದೂರು ಪೊಲೀಸ್ ಠಾಣೆ, ಶಿರೂರು ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಕೊರೋನಾ ಸೊಂಕು ದೃಢ- https://kundapraa.com/?p=38863 .
► ಮುಳುಗಿದ್ದ ಕಾರಿನಲ್ಲಿದ್ದ ಯುವತಿಗೆ 10 ತರಗತಿ ವಿದ್ಯಾರ್ಥಿನಿ ನೀಡಿದ ಪ್ರಥಮ ಚಿಕಿತ್ಸೆಗೆ ಶ್ಲಾಘನೆ – https://kundapraa.com/?p=38856 .