ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜೂ.22: ತಾಲೂಕಿನ ಬೈಂದೂರು ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್, ಶಿರೂರು ಆರೋಗ್ಯ ಕೇಂದ್ರದ ಓರ್ವ ಎ.ಎನ್.ಎಂ ಹಾಗೂ ಇತರೆ ಇಬ್ಬರು ವ್ಯಕ್ತಿಗಳಿಗೆ ಕೋರೋನಾ ಪಾಸಿಟಿವ್ ದೃಢವಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಜೂನ್ 21ರ ಕೋವಿಡ್-19 ವರದಿಯಲ್ಲಿ ಕಾನ್ಸ್ಟೇಬಲ್ ಓರ್ವರಿಗೆ ಪಾಸಿಟಿವ್ ಬಂದಿತ್ತು. ಇಂದು ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದ ಈರ್ವರಿಗೆ ಪಾಸಿಟಿವ್ ದೃಡವಾಗಿದ್ದು, ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಮಾಹಿತಿ ದೊರೆತಿದೆ. ಶಿರೂರು ಆರೋಗ್ಯ ಕೇಂದ್ರದ ಎ.ಎನ್.ಎಂ ಓರ್ವರಿಗೂ ಪಾಸಿಟಿವ್ ಬಂದಿದ್ದು ಅವರನ್ನು ಈಗಾಗಲೇ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಿರೂರು ಆರೋಗ್ಯ ಕೇಂದ್ರ, ಬೈಂದೂರು ಪೊಲೀಸ್ ಠಾಣೆ ಬಂದ್:
ಬೈಂದೂರು ಪೊಲೀಸ್ ಠಾಣೆ ಹಾಗೂ ವೃತ್ತ ನಿರೀಕ್ಷಕರ ಕಛೇರಿಯನ್ನು ಮುಚ್ಚಲಾಗಿದ್ದು, ಸ್ಯಾನಿಟೈಜೇಷನ್ ಮಾಡಿದ ಬಳಿಕ ಒಂದೆರಡು ದಿನಗಳಲ್ಲಿ ಮತ್ತೆ ಠಾಣೆಯನ್ನು ಪುನರಾರಂಭಿಸಲಾಗುತ್ತದೆ. ಕಛೇರಿಯ ಎಲ್ಲಾ ಸಿಬ್ಬಂದಿಗಳನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡಲಾಗಿದೆ, ಹಳೆಯ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಈಗಾಗಲೇ ಕ್ವಾರಂಟೈನ್ ಇದ್ದ ಪೊಲೀಸ್ ಸಿಬ್ಬಂದಿಗಳು ಸದ್ಯ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಶಿರೂರು ಆರೋಗ್ಯ ಕೇಂದ್ರವನ್ನೂ ಕೂಡ ಬಂದ್ ಮಾಡಲಾಗಿದ್ದು, ಸ್ಯಾನಿಟೈನ್ ಮಾಡಿ ಎರಡು ದಿನದ ಬಳಿಕ ತೆರೆಯಲಾಗುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಪಾಸಿಟಿವ್ ಬಂದಿರುವ ಸಿಬ್ಬಂದಿಗಳ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಅವರನ್ನು ಹೋಂ ಕ್ವಾರಂಟೈನ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. 7 ದಿನಗಳ ಬಳಿಕ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಸ್ವ್ಯಾಬ್ ತೆಗೆದು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
ಸಾರ್ವಜನಿಕರ ಅಜಾಗೃತೆ, ಅಪಾಯದ ಮುನ್ನೆಚ್ಚರಿಕೆ:
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹೊತ್ತಿನಲ್ಲಿಯೇ ಜನರು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡುಬರುತ್ತಿದೆ. ಅನಗತ್ಯವಾಗಿ ಪೇಟೆಯಲ್ಲಿ ತಿರುಗಾಡುವುದು, ಅಂಗಡಿ ಮುಂಗಟ್ಟುಗಳಲ್ಲಿ ನಿಲ್ಲುವುದು ಹೆಚ್ಚುತ್ತಿದೆ. ಮಾಸ್ಕ್ ಧರಿಸದೇ ತಿರುಗಾಡುವುದು, ಸಾಮಾಜಿಕ ಅಂತರ ಪಾಲಿಸದೇ ಇರುವುದು, ಸ್ಯಾನಿಟೈಸರ್ ಬಳಸದಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕೊರೋನಾ ವೈರಸ್ಸಿನ ಹೊಸ ಲಕ್ಷಣಗಳು ಕಂಡುಬರುತ್ತಿರುವುದಿಂದ ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇರುವುದು ಅಗತ್ಯವಾಗಿದ್ದು, ಇನ್ನೂ ಕೆಲವು ದಿನಗಳ ಕಾಲ ಸ್ವಯಂ ನಿರ್ಬಂಧ ಹಾಕಿಕೊಂಡು ಅನಗತ್ಯವಾಗಿ ತಿರುಗಾಡದಿರುವುದು ನಿಲ್ಲಿಸಬೇಕಿದೆ. ಸಮಾಜ ಜಾಗೃತವಾಗದಿದ್ದರೇ ಸಮುದಾಯಕ್ಕೆ ಸುಲಭವಾಗಿ ಹರಡುವ ಸಾಧ್ಯತೆ ಹೆಚ್ಚಿರುವುದಲ್ಲದೇ, ಅವರೆಲ್ಲರಿಗೂ ಚಿಕಿತ್ಸೆ ನೀಡುವುದು ಕೂಡ ಅಸಾಧ್ಯವಾಗಲಿದೆ ಎಂಬುದನ್ನು ಮನಗಾಣಬೇಕಿದೆ.
ಇದನ್ನೂ ಓದಿ:
► ಮುಳುಗಿದ್ದ ಕಾರಿನಲ್ಲಿದ್ದ ಯುವತಿಗೆ 10 ತರಗತಿ ವಿದ್ಯಾರ್ಥಿನಿ ನೀಡಿದ ಪ್ರಥಮ ಚಿಕಿತ್ಸೆಗೆ ಶ್ಲಾಘನೆ – https://kundapraa.com/?p=38856 .
► ಬೈಂದೂರು ಠಾಣೆಯ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢ – https://kundapraa.com/?p=38799 .
► ಗಂಗೊಳ್ಳಿಯಲ್ಲಿ ಗೋಕಳ್ಳತನ ಮಾಡಿದ್ದ ಆರೋಪಿ ಬಂಧನ – https://kundapraa.com/?p=38849 .