Kundapra.com ಕುಂದಾಪ್ರ ಡಾಟ್ ಕಾಂ

ಕೋವಿಡ್-19: ಮಂಗಳವಾರ 9 ಪಾಸಿಟಿವ್ ದೃಢ, ಕಾಲ್ತೋಡು ಗ್ರಾಮದ ಓರ್ವ ವ್ಯಕ್ತಿ ಮೃತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜೂ.30ರ ಮಂಗಳವಾರ 9 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಮುಂಬೈನಿಂದ ಬಂದಿದ್ದ ಕಾಲ್ತೋಡು ಗ್ರಾಮ 48 ವರ್ಷದ ವ್ಯಕ್ತಿ ಭಾನುವಾರ ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತ ವ್ಯಕ್ತಿಗೂ ಕೋವಿಡ್ ಪಾಸಿಟಿವ್ ಇರುವುದು ಇಂದು ದೃಢವಾಗಿದೆ.

ಮೃತ ವ್ಯಕ್ತಿ ಅನಾರೋಗ್ಯದಿಂದ ಬಳಲಿ ಮುಂಬೈನ ಆಸ್ಪತ್ರೆಗೂ ದಾಖಲಾಗಿದ್ದರು. ಶನಿವಾರ ಪತ್ನಿ ಹಾಗೂ ಪುತ್ರಿಯೊಂದಿಗೆ ಮುಂಬೈನಿಂದ ಕಾಲ್ತೋಡು ಗ್ರಾಮದ ತನ್ನ ನಿವಾಸಕ್ಕೆ ಆಗಮಿಸಿದ್ದು, ಭಾನುವಾರ ಮೃತಪಟ್ಟಿದ್ದರು. ಅವರು ಮನೆಗೆ ಬಂದಿರುವ ಮಾಹಿತಿ ಆರೋಗ್ಯ ಇಲಾಖೆಗೆ ನೀಡಿರಲಿಲ್ಲ. ವಿಷಯ ತಿಳಿದು ಅವರ ಸ್ವ್ಯಾಬ್ ಪರೀಕ್ಷೆಗೆ ಕಳುಹಿಸಿದಾಗ ಪಾಸಿಟಿವ್ ಇರುವುದು ದೃಢವಾಗಿದೆ. ಕೋವಿಡ್ ನಿಯಮಾವಳಿಯಂತೆ ಅಂತ್ಯ ಸಂಸ್ಕಾರ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಸಿಟಿವ್ ಬಂದಿರುವವರಲ್ಲಿ ಮೂವರು ಮುಂಬೈ, ಓರ್ವ ಹೈದರಾಬಾದ್ ಹಾಗೂ ಇನ್ನಿಬ್ಬರಿಗೆ ಪ್ರಾಥಮಿಕ ಸಂಪರ್ಕ ಬಂದಿದೆ. ಈ ಪೈಕಿ ಕುಂದಾಪುರ ಬೆಂಗಳೂರು ಸಂಚರಿಸುವ ಇಬ್ಬರು ಬಸ್ ಚಾಲಕ, ಬಟ್ಟೆ ಅಂಗಡಿಯ ಮಾಲಿಕನಿಗೆ ಪಾಸಿಟಿವ್ ದೃಢವಾಗಿದೆ.

ಇದನ್ನೂ ಓದಿ: ► ಕುಂದಾಪುರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಮರವಂತೆಯ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ದೃಢ – https://kundapraa.com/?p=39104 .

ಇಂದು 114 ನೆಗೆಟಿವ್:
ಈ ತನಕ ಒಟ್ಟು 14,556 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 12,976 ನೆಗೆಟಿವ್, 1,206 ಪಾಸಿಟಿವ್ ಬಂದಿದ್ದು, 374 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 114 ನೆಗೆಟಿವ್, 9 ಪಾಸಿಟಿವ್ ಬಂದಿದೆ.

136 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 1,206 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1067 ಮಂದಿ ಬಿಡುಗಡೆಯಾಗಿದ್ದು, 136 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

 

Exit mobile version