Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂಕಿನ 44 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೂನ್‌ನಲ್ಲಿ ಅಧಿಕಾರಾವಧಿ ಮುಗಿದ ಕುಮದಾಪುರ ತಾಲ್ಲೂಕಿನ 44 ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾಧಿಕಾರಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜೂನ್ ೨೯ರಂದು ಆದೇಶ ಹೊರಡಿಸಿದ್ದಾರೆ. ಇವುಗಳಿಗೆ ಅವಧಿ ಮುಕ್ತಾಯ ಪೂರ್ವದಲ್ಲಿ ಚುನಾವಣೆ ನಡೆಸಬೇಕು ಎಂಬ ವಿಧಿ ಇದೆಯಾದರೂ ಕೋವಿಡ್ -19 ಹರಡುತ್ತಿರುವ ಕಾರಣ ರಾಜ್ಯ ಚುನಾವಣಾ ಆಯೋಗವು ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಆ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಗಳಿಗೆ ನೇಮಕಗೊಂಡ ಆಡಳಿತಾಧಿಕಾರಿಗಳು:

ನಿರ್ವಹಣೆಗೆ ಸೂಚನೆ:
ಆಡಳಿತಾಧಿಕಾರಿಗಳು ಕ್ರಮಬದ್ಧವಾಗಿ ರಚಿಸಿದ ಗ್ರಾಮ ಪಂಚಾಯಿತಿ ಎಂದು ಭಾವಿಸಿ ಗ್ರಾಮ ಪಂಚಾಯಿತಿಯ ಎಲ್ಲ ಸಾಮಾನ್ಯ ಅಧಿಕಾರ, ಕರ್ತವ್ಯ ಮತ್ತು ಪ್ರಕಾರ್ಯಗಳನ್ನು ನಿರ್ವಹಿಸಬೇಕು. ಕ್ರಮದಂತೆ ಪಂಚಾಯಿತಿ ಸಭೆ, ವಾರ್ಡ್‌ಸಭೆ, ಗ್ರಾಮಸಭೆಗಳನ್ನು ನಡೆಸಬೇಕು. ಅಧ್ಯಕ್ಷನ ಅಧಿಕಾರವನ್ನು ನಿರ್ವಹಿಸುವುದರ ಜತೆಗೆ ಅಭಿವೃದ್ಧಿ ಅಧಿಕಾರಿ ಜತೆ ಜಂಟಿಯಾಗಿ ಹಣಕಾಸಿನ ವ್ಯವಹಾರ ನಡೆಸಬೇಕು. ಪಂಚಾಯಿತಿ ಮತ್ತು ಗ್ರಂಥಾಲಯ ಸಿಬ್ಬಂದಿಗೆ ವೇತನ, ಗೌರವಧನ ಪಾವತಿಸಬೇಕು. ಆದರೆ ನೌಕರರನ್ನು ನೇಮಕ ಮಾಡಿಕೊಳ್ಳಬಾರದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್-೧೯ ಹರಡುವುದನ್ನು ತಡೆಯಲು ಪಂಚಾಯಿತಿ ಕಾರ್ಯಪಡೆಯ ಅಧ್ಯಕ್ಷ ಆಗಿ ಕಾರ್ಯ ನಿರ್ವಹಿಸಬೇಕು ಎಂದು ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ಬೈಂದೂರು ತಾಲೂಕಿನ 16 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ – https://kundapraa.com/?p=39183 .

Exit mobile version