Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ ತಾಲೂಕಿನ 44 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ
    ಊರ್ಮನೆ ಸಮಾಚಾರ

    ಕುಂದಾಪುರ ತಾಲೂಕಿನ 44 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ: ಜೂನ್‌ನಲ್ಲಿ ಅಧಿಕಾರಾವಧಿ ಮುಗಿದ ಕುಮದಾಪುರ ತಾಲ್ಲೂಕಿನ 44 ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾಧಿಕಾರಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜೂನ್ ೨೯ರಂದು ಆದೇಶ ಹೊರಡಿಸಿದ್ದಾರೆ. ಇವುಗಳಿಗೆ ಅವಧಿ ಮುಕ್ತಾಯ ಪೂರ್ವದಲ್ಲಿ ಚುನಾವಣೆ ನಡೆಸಬೇಕು ಎಂಬ ವಿಧಿ ಇದೆಯಾದರೂ ಕೋವಿಡ್ -19 ಹರಡುತ್ತಿರುವ ಕಾರಣ ರಾಜ್ಯ ಚುನಾವಣಾ ಆಯೋಗವು ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಆ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

    Click Here

    Call us

    Click Here

    ಗ್ರಾಮ ಪಂಚಾಯಿತಿಗಳಿಗೆ ನೇಮಕಗೊಂಡ ಆಡಳಿತಾಧಿಕಾರಿಗಳು:

    • ಆಲೂರು – ನಾಗೇಶ್ ನಾಯ್ಕ್, ಮುಖ್ಯೋಪಧ್ಯಾಯರು, ಆಲೂರು ಸರಕಾರಿ ಪ್ರೌಢಶಾಲೆ
    • ಕೆರಾಡಿ – ಮಾಲತೇಶ್, ಸಹಾಯಕ ಅಭಿಯಂತರರು, ಸಿದ್ಧಾಪುರ
    • ಚಿತ್ತೂರು, ವಂಡ್ಸೆ – ಮಮತಾ, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ವಂಡ್ಸೆ
    • ಹಕ್ಲಾಡಿ – ಅಶೋಕ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ಕುಂದಾಪುರ
    • ತ್ರಾಸಿ, ಹೊಸಾಡು, ಇಡೂರು ಕುಂಜ್ಞಾಡಿ – ಪ್ರೀತಮ್, ಎಇ, ವರಾಹಿ ಸಿದ್ಧಾಪುರ
    • ಗುಜ್ಜಾಡಿ – ಅಂಜನಾದೇವಿ ಪಿ., ಎ.ಡಿ, ಮೀನುಗಾರಿಕಾ ಇಲಾಖೆ ಗಂಗೊಳ್ಳಿ
    • ಹೆಮ್ಮಾಡಿ, ಕಟ್‌ಬೆಲ್ತೂರು – ಅರುಣಕುಮಾರ್ ಶೆಟ್ಟಿ, ಎಡಿ, ಅಕ್ಷರದಾಸೋಹ ಕುಂದಾಪುರ
    • ತಲ್ಲೂರು – ಶ್ವೇತ ಎನ್., ಶಿಶು ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಕುಂದಾಪುರ
    • ಹಟ್ಟಿಯಂಗಡಿ – ಸಿ ರಘುರಾಮ ಶೆಟ್ಟಿ, ಸಹಾಯಕ ಕೃಷಿ ಅಧಿಕಾರಿ ವಂಡ್ಸೆ
    • ಕರ್ಕುಂಜೆ – ರೂಪಾ ಮಾಡ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಕುಂದಾಪುರ
    • ಆಜ್ರಿ – ರಾಜೇಂದ್ರ ವಿಸ್ತರಣಾಧಿಕಾರಿ, ರೇಷ್ಮೆ ಇಲಾಖೆ ಕುಂದಾಪುರ
    • ಹೊಸಂಗಡಿ – ಭಾನು ನಾಯ್ಕ್, ಸಹಾಯಕ ಅಭಿಯಂತರರು, ವಾರಾಹಿ, ಸಿದ್ಧಾಪುರ
    • ಸಿದ್ಧಾಪುರ – ದುರ್ಗಾದಾಸ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ, ಕುಂದಾಪುರ
    • ಶಂಕರನಾರಾಯಣ, ಅಂಪಾರು – ಚಿದಾನಂದ, ವಲಯ ಅರಣ್ಯಾಧಿಕಾರಿ, ಶಂಕರನಾರಾಯಣ
    • ಕಾವ್ರಾಡಿ, ಬಳ್ಕೂರು – ಚಂದ್ರಶೇಖರ್, ಎ.ಡಿ. ಮೀನುಗಾರಿಕಾ ಇಲಾಖೆ ಕುಂದಾಪುರ
    • ಬಸ್ರೂರು – ಸಂಜೀವ ನಾಯ್ಕ್ ಎ.ಡಿ, ತೋಟಗಾರಿಕಾ ಇಲಾಖೆ ಕುಂದಾಪುರ
    • ಆನಗಳ್ಳಿ – ಯಶವಂತ್, ಎಇಇ, ಶಂಕರನಾರಾಯಣ ಕುಂದಾಪ್ರ ಡಾಟ್ ಕಾಂ ಸುದ್ದಿ.
    • ಹಂಗಳೂರು, ಕೋಣಿ – ಡಾ. ಸೂರ್ಯನಾರಾಯಣ ಉಪಾಧ್ಯ, ಎ.ಡಿ, ಪಶು ಸಂಗೋಪನಾ ಇಲಾಖೆ ಕುಂದಾಪುರ
    • ಕೋಟೇಶ್ವರ – ಮಧುಕರ, ಸಹಾಯಕ ತೋಟಕಾರಿಕಾ ಅಧಿಕಾರಿ ಕುಂದಾಪುರ
    • ಬೀಜಾಡಿ – ಪ್ರಭಾಕರ ಕುಲಾಲ್, ವಲಯ ಅರಣ್ಯಾಧಿಕಾರಿ ಕುಂದಾಪುರ
    • ಕುಂಭಾಶಿ – ದೀಪ್ತಿ ಎಸ್., ಕಾರ್ಯದರ್ಶಿ ಎಪಿಎಂಸಿ ಕುಂದಾಪುರ
    • ತೆಕ್ಕಟ್ಟೆ, ಬೆಳೂರು – ಹರ್ಷವರ್ಧನ್, ಎಇ, ಲೋಕೋಪಯೋಗಿ ಕುಂದಾಪುರ
    • ಕೆದೂರು, ಅಮಾಸೆಬೈಲು – ರಾಘವೇಂದ್ರ ನಾಯ್ಕ್, ಎಇ, ಲೋಕೋಪಯೋಗಿ ಕುಂದಾಪುರ
    • ಕಾಳಾವರ, ಹೆಂಗವಳ್ಳಿ – ಲೋಹಿತ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ
    • ಹೊಂಬಾಡಿ ಮಂಡಾಡಿ – ಶಂಕರ ಶೇರೆಗಾರ್, ಸಹಾಯಕ ಕೃಷಿ ಅಧಿಕಾರಿ ಕುಂದಾಪುರ
    • ಮೊಳಹಳ್ಳಿ, ಹಾರ್ದಳ್ಳಿ ಮಂಡಳ್ಳಿ, ಗುಲ್ವಾಡಿ – ಕುಸುಮಾಕರ ಶೆಟ್ಟಿ, ಯುವಜನ ಸೇವಾ ಕ್ರೀಡಾಧಿಕಾರಿ ಕುಂದಾಪುರ
    • ಹಾಲಾಡಿ – ರಾಘವೇಂದ್ರ ಆರ್. ವಿ., ಎ.ಡಿ, ಸಮಾಜ ಕಲ್ಯಾಣ ಇಲಾಖೆ ಕುಂದಾಪುರ
    • ಯಡಮೊಗೆ – ನಾಗರಾಜ ಗೊಂಡ, ಎಡಿ, ಕ್ವಾಲಿಟಿ ಕಂಟ್ರೋಲ್, ವರಾಹಿ ಸಿದ್ದಾಪುರ
    • ಉಳ್ಳೂರು – ದುರ್ಗಾದಾಸ್, ಎಇಇ ಲೋಕೋಪಯೋಗಿ, ಕುಂದಾಪುರ
    • ಕಂದಾವರ – ಅಶೋಕ್ ಎಇಇ, ಮೆಸ್ಕಾಂ ಕುಂದಾಪುರ ಕುಂದಾಪ್ರ ಡಾಟ್ ಕಾಂ ಸುದ್ದಿ.
    • ಗೋಪಾಡಿ – ಅಜಿತ್ ಅಕ್ಕೋಳ್ಳಿ, ಸಹಾಯಕ ತೋಟಗಾರಿಕಾ ಅಧಿಕಾರಿ ಬೈಂದೂರು
    • ಕೊರ್ಗಿ – ಅಶೋಕ್, ಎಇಇ ಮೆಸ್ಕಾಂ ಕುಂದಾಪುರ

    ನಿರ್ವಹಣೆಗೆ ಸೂಚನೆ:
    ಆಡಳಿತಾಧಿಕಾರಿಗಳು ಕ್ರಮಬದ್ಧವಾಗಿ ರಚಿಸಿದ ಗ್ರಾಮ ಪಂಚಾಯಿತಿ ಎಂದು ಭಾವಿಸಿ ಗ್ರಾಮ ಪಂಚಾಯಿತಿಯ ಎಲ್ಲ ಸಾಮಾನ್ಯ ಅಧಿಕಾರ, ಕರ್ತವ್ಯ ಮತ್ತು ಪ್ರಕಾರ್ಯಗಳನ್ನು ನಿರ್ವಹಿಸಬೇಕು. ಕ್ರಮದಂತೆ ಪಂಚಾಯಿತಿ ಸಭೆ, ವಾರ್ಡ್‌ಸಭೆ, ಗ್ರಾಮಸಭೆಗಳನ್ನು ನಡೆಸಬೇಕು. ಅಧ್ಯಕ್ಷನ ಅಧಿಕಾರವನ್ನು ನಿರ್ವಹಿಸುವುದರ ಜತೆಗೆ ಅಭಿವೃದ್ಧಿ ಅಧಿಕಾರಿ ಜತೆ ಜಂಟಿಯಾಗಿ ಹಣಕಾಸಿನ ವ್ಯವಹಾರ ನಡೆಸಬೇಕು. ಪಂಚಾಯಿತಿ ಮತ್ತು ಗ್ರಂಥಾಲಯ ಸಿಬ್ಬಂದಿಗೆ ವೇತನ, ಗೌರವಧನ ಪಾವತಿಸಬೇಕು. ಆದರೆ ನೌಕರರನ್ನು ನೇಮಕ ಮಾಡಿಕೊಳ್ಳಬಾರದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್-೧೯ ಹರಡುವುದನ್ನು ತಡೆಯಲು ಪಂಚಾಯಿತಿ ಕಾರ್ಯಪಡೆಯ ಅಧ್ಯಕ್ಷ ಆಗಿ ಕಾರ್ಯ ನಿರ್ವಹಿಸಬೇಕು ಎಂದು ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

    ಇದನ್ನೂ ಓದಿ:
    ► ಬೈಂದೂರು ತಾಲೂಕಿನ 16 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ – https://kundapraa.com/?p=39183 .

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ

    21/05/2026

    ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು

    21/05/2026

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026
    Leave A Reply Cancel Reply

    11 − four =

    Call us

    Click Here

    Call us

    Call us

    Call us
    Highest Viewed Recently
    • ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ
    • ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.