Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಮಂಗಳವಾರ 72 ಪಾಸಿಟಿವ್ ದೃಢ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜು.14ರ ಮಂಗಳವಾರ 72 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಉಡುಪಿ ತಾಲೂಕಿನ 16, ಕುಂದಾಪುರ ತಾಲೂಕಿನ 41 ಹಾಗೂ ಕಾರ್ಕಳ ತಾಲೂಕಿನ 15 ಮಂದಿಗೆ ಪಾಸಿಟಿವ್ ಬಂದಿದ್ದು, ಒಟ್ಟು ಪ್ರಕರಣದಲ್ಲಿ 51 ಪುರುಷರು, 19 ಮಹಿಳೆಯರು ಹಾಗೂ 2 ಮಕ್ಕಳು ಇದ್ದಾರೆ. ಇಂದು 80 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಪೈಕಿ 7 ಮಂದಿ ಬೆಂಗಳೂರು ಪ್ರಯಾಣದ ಹಿನ್ನೆಲೆ, ಇಬ್ಬರು ಮಂಗಳೂರು ಪ್ರಯಾಣದ ಹಿನ್ನೆಲೆ ಹೊಂದಿದ್ದು, ಉಳಿದ ಪ್ರಕರಣಗಳು ಪ್ರಾಥಮಿಕ ಸಂಕರ್ಪದಿಂದ ಬಂದಿದೆ.

712 ನೆಗೆಟಿವ್:
ಈ ತನಕ ಒಟ್ಟು 22,648 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 19,835 ನೆಗೆಟಿವ್, 1,733 ಪಾಸಿಟಿವ್ ಬಂದಿದ್ದು, 1,080 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 712 ನೆಗೆಟಿವ್, 72 ಪಾಸಿಟಿವ್ ಬಂದಿದೆ. ಒಟ್ಟು 1,559 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ.

370 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 1,733 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,360 ಮಂದಿ ಬಿಡುಗಡೆಯಾಗಿದ್ದು, 370 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ನಾಲ್ವರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

ಇದನ್ನೂ ಓದಿ:
► ಜುಲೈ 15ರಿಂದ ಉಡುಪಿ ಜಿಲ್ಲೆಯ ಗಡಿ ಸೀಲ್‌ಡೌನ್: ಯಾವುದಕ್ಕೆಲ್ಲಾ ನಿರ್ಬಂಧ-ವಿನಾಯಿತಿ ನೋಡಿ – https://kundapraa.com/?p=39538 .

 

Exit mobile version