ಜುಲೈ 15ರಿಂದ ಉಡುಪಿ ಜಿಲ್ಲೆಯ ಗಡಿ ಸೀಲ್‌ಡೌನ್: ಯಾವುದಕ್ಕೆಲ್ಲಾ ನಿರ್ಬಂಧ-ವಿನಾಯಿತಿ ನೋಡಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಗಡಿಗಳನ್ನು ಜುಲೈ 15ರ ಬುಧವಾದಿಂದ 14 ದಿನಗಳ ಕಾಲ ಸೀಲ್‌ಡೌನ್ ಮಾಡುವ ತೀರ್ಮಾನವನ್ನು ಉಡುಪಿ ಜಿಲ್ಲಾಡಳಿಯ ಕೈಗೊಂಡಿದ್ದು , ಕೆಲವೊಂದು ನಿರ್ಬಂಧಗಳನ್ನು ವಿಧಿಸಿ ಕೆಲವೊಂದು ವಿನಾಯಿತಿ ನೀಡಿದೆ.

Call us

Click Here

ಸೀಲ್‌ಡೌನ್ ಸಂದರ್ಭದಲ್ಲಿ ಸಾರ್ವಜನಿಕ ಬಸ್ ಸಂಚಾರ ಇರುವುದಿಲ್ಲ. ಹಾಗೆಯೇ ಯಾವುದೇ ಸಂತೆಗಳು ಕೂಡಾ ಇರುವುದಿಲ್ಲ. ಯಾವುದೇ ಧಾರ್ಮಿಕ, ರಾಜಕೀಯ, ಸಾಮಾಜಿಕ ಸಭೆ, ಸಮಾರಂಭಗಳು ಕೂಡಾ ನಡೆಸಲು ಅನುಮತಿ ಇಲ್ಲ. ಸಾರ್ವಜನಿಕವಾಗಿ ಹಬ್ಬ ಆಚರಣೆಗಳಿಗೂ ಅವಕಾಶವಿಲ್ಲ. ಮೊದಲೇ ನಿರ್ಧರಿಸಲಾಗಿರುವ ವಿವಾಹ ಕಾರ್ಯಕ್ರಮಕ್ಕಾಗಿ ತಹಶೀಲ್ದಾರರಿಂದ ಕಡ್ಡಾಯವಾಗಿ ಅನುಮತಿ ಪಡೆದು 50ಕ್ಕೂ ಅಧಿಕ ಮಂದಿ ಸೇರದೆ ಕಾರ್ಯಕ್ರಮ ನಡೆಸಬಹುದಾಗಿದೆ. ಹಾಗೆಯೇ ಈಗಾಗಲೇ ಸರ್ಕಾರ ನೀಡಿರುವ ಆದೇಶದಂತೆ ಅಂತ್ಯ ಸಂಸ್ಕಾರದಲ್ಲಿ 20 ಜನರು ಮಾತ್ರ ಭಾಗವಹಿಸಬಹುದಾಗಿದೆ.

ಹೊರ ರಾಜ್ಯ ಅಥವಾ ಜಿಲ್ಲೆಯಿಂದ ಬರುವವರಿಗೆ ಹಾಗೂ ಹೋಗುವವರಿಗೆ ಜುಲೈ 15ರ ಸಂಜೆ 8 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಜಿಲ್ಲೆಯ ಒಳಗೆ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದ್ದು ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಸರಕು ಸಾಗಾಣಿಕೆ ಅಥವಾ ವಸ್ತುಗಳ ಸಾಗಾಣಿಕೆಗೂ ಅವಕಾಶ ನೀಡಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು ಈ ಸಂದರ್ಭದಲ್ಲಿ ಅರ್ಚಕರು, ಮೌಲ್ವಿ, ಧರ್ಮಗುರುಗಳು ಸೇರಿದಂತೆ 20 ಜನರು ಮಾತ್ರ ಇರಬೇಕು. ಅದಕ್ಕಿಂತ ಹೆಚ್ಚಿನ ಜನರು ಸೇರಲು ಅವಕಾಶವಿಲ್ಲ. ಹಾಗೆಯೇ ಯಾವುದೇ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ. ಇನ್ನು ಅಂಗಡಿ ಮುಗ್ಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ತೀರ್ಮಾನ ಕೈಗೊಳ್ಳಬಹುದಾಗಿದೆ. ಆದರೆ ಸರ್ಕಾರದ ಆದೇಶದ ಪ್ರಕಾರ ಎಲ್ಲಾ ಆರ್ಥಿಕ ಚಟುವಟಿಕೆ ನಡೆಸಬಹುದಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸರಕಾರದ ನಿರ್ದೇಶನದಂತೆ ಭಾನುವಾರಗಳಂದು ಸಂಪೂರ್ಣ ಲಾಕ್ಡೌನ್ ಇರಲಿದ್ದು, ಕೇವಲ ಮೆಡಿಕಲ್, ಕ್ಲಿನಿಕಲ್ ಲ್ಯಾಬ್, ಆಸ್ಪತ್ರೆ, ಹಾಲು, ದಿನಪತ್ರಿಕೆ ಮಾರಾಟಕ್ಕೆ ನಿರ್ಭಂದವಿಲ್ಲ, ಹೋಟೆಲ್ ಗಳಿಂದ ಪಾರ್ಸೆಲ್ ಗಳಿಗೆ , ಫುಡ್ ಡೆಲಿವರಿಗೆ ಅವಕಾಶವಿದೆ, ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಡಿಸಿ ಜಿ. ಜಗದೀಶ್ ಹೇಳಿದರು.

Click here

Click here

Click here

Click Here

Call us

Call us

ಸೀಲ್ ಡೌನ್ ಏಕೆ :
ಜಿಲ್ಲೆಯಲ್ಲಿ ಹೊರಗಿನಿಂದ ಬಂದವರಿಂದದಲೇ ಹೆಚ್ಚಿನ ಸೋಂಕು ಪ್ರಕರಣಗಳು ಕಂಡುಬರುತ್ತಿದ್ದು, ಕೋವಿಡ್ ಪಾಸಿಟಿವ್ ಸೋಂಕಿತರ ಪೈಕಿ ಪ್ರಯಾಣ ಹಿನ್ನಲೆಯವರು 8.86% ಹಾಗೂ ಅವರ ಪ್ರಾಥಮಿಕ ಸಂಪರ್ಕಿತರು 14.2% ಹಾಗೂ ಸ್ಥಳೀಯ ಸೋಂಕಿತತು 2% ಮಾತ್ರ ಇದ್ದು, ಜಿಲ್ಲೆಯ ಗಡಿಯನ್ನು ಬಂದ್ ಮಾಡುವುದರಿಂದ , ಕೋವಿಡ್-19 ಸೋಂಕಿತರ ಜಿಲ್ಲೆಯ ಒಳ ಮತ್ತು ಹೊರ ಪ್ರವೇಶವನ್ನು ತಡೆಯಬಹುದು ಹಾಗೂ ಸೋಂಕಿನ ಹರಡುವಿಕೆಯನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಪ್ರತೀ ಮಿಲಿಯನ್ ಜನರಿಗೆ 5166 ಮಂದಿಯ ಕೋವಿಡ್-19 ಪರೀಕ್ಷೆ ಮಾಡಿದ್ದು, ಇದು ರಾಜ್ಯದ ಒಟ್ಟು ಸರಾಸರಿ ಸೇರಿದಂತೆ ಯಾವುದೇ ಜಿಲ್ಲೆಗಳಿಗಿಂತ ಅತ್ಯಧಿಕ, ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ದುಪ್ಪಟ್ಟು ಪ್ರಮಾಣ 39 ದಿನಗಳಿದ್ದರೆ , ದ.ಕನ್ನಡ ಜಿಲ್ಲೆ ಮತ್ತು ರಾಜ್ಯದಲ್ಲಿ 10 ಇದೆ, ಸಾವಿನ ಪ್ರಮಾಣ ರಾಜ್ಯದಲ್ಲಿ 1.80%, ದ.ಕನ್ನಡ ಜಿಲ್ಲೆಯಲ್ಲಿ 1.70% ಆದರೆ ಜಿಲ್ಲೆಯಲ್ಲಿ ಕೇವಲ 0.20% ಇದೆ , ಜಿಲ್ಲೆಯಲ್ಲಿ 390 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ ಇಂದು 80 ಮಂದಿ ಬಿಡುಗಡೆ ಹೊಂದಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಲಾಕ್ ಡೌನ್ ನಿಂದ ಕೋವಿಡ್-19 ನಿಯಂತ್ರಣ ಸಾಧ್ಯವಿಲ್ಲ, ನಮಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಇಲ್ಲದಿದಲ್ಲಿ ಮಾತ್ರ ಲಾಕ್ ಡೌನ್ ಅಂತಿಮ ನಿರ್ಧಾರವಾಗಬೇಕು ಎಂದು ತಜ್ಞರ ಸಮಿತಿ ತಿಳಿಸಿದ್ದು, ಜಿಲ್ಲೆಯಲ್ಲಿ ಪ್ರಸ್ತುತ 1100 ಬೆಡ್ ಗಳು ಚಿಕಿತ್ಸಗೆ ಲಭ್ಯವಿದ್ದು, ಅಲ್ಲದೆ ಕೋವಿಡ್ ಕೇರ್ ಕೇಂಧ್ರಗಳಿಗಾಗಿ 1800 ಬೆಡ್ ಗಳನ್ನು ಗುರುತಿಸಿ ಅದನ್ನು ಸಕ್ರಿಯಗೊಳಿಸಲು ಸೌಲಭ್ಯ ಹೊಂದಿದ್ದೇವೆ. ಅಲ್ಲದೇ ಜಿಲ್ಲೆಯ 21 ಖಾಸಗಿ ಆಸ್ಪತ್ರೆಗಳಲ್ಲಿನ ಶೇ.50 ಹಾಸಿಗೆಗಳನ್ನು ಚಿಕಿತ್ಸೆಗೆ ಮೀಸಲಿಡಲಾಗಿದೆ. ಪ್ರಸ್ತುತ ಸರ್ಕಾರಿ ವ್ಯವಸ್ಥೆಯಲ್ಲಿನ ಆಸ್ಪತ್ರೆಗಳಲ್ಲಿ ಶೇ.70 ರಷ್ಟು ಬಳಕೆಯಾದರೆ ಮಾತ್ರ ಖಾಸಗಿ ಆಸ್ಪತ್ರೆಯ ಬೆಡ್ ಗಳನ್ನು ಬಳಸಿಕೊಳ್ಳಲಾಗುವುದು ಎಂದು ಡಿಸಿ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್-19 ಗೆ ಸರ್ಕಾರಿ ವ್ಯವಸ್ಥೆಯಲ್ಲಿ ಎಪಿಲ್ ಬಿಪಿಎಲ್ ಭೇದವಿಲ್ಲದೇ ಎಲ್ಲರಿಗೂ ಚಿಕಿತ್ಸೆ ಉಚಿತವಾಗಿದ್ದು, ಜಿಲ್ಲಾಡಳಿತದಿಂದ ರೆಫರ್ ಆಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿದಲ್ಲಿ ಸಹ ಚಿಕಿತ್ಸೆ ಉಚಿತವಾಗಿದೆ. ಜಿಲ್ಲಾಡಳಿತದ ರೆಫರ್ ಇಲ್ಲದೇ ನೇರವಾಗಿ ತಮಗೆ ಇಷ್ಟಬಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರು , ಸರ್ಕಾರ ನಿಗಧಿಪಡಿಸಿದ ಶುಲ್ಕವನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಿಲ್ಲೆಯಲ್ಲಿ ಹೋಂ ಐಸೋಲೇಷನ್ ನಲ್ಲಿ ಪ್ರಸ್ತುತ 20 ಮಂದಿ ಇದ್ದು, 10 ವರ್ಷದಿಂದ 50 ವರ್ಷ ವಯೋಮಿತಿಯವರಿಗೆ ಈ ಸೌಲಭ್ಯವಿದೆ, ವೈದ್ಯರ ತಂಡ ಸೋಂಕಿತರ ಮನೆಯನ್ನು ಪರಿಶೀಲಿಸಿ, ಅಗತ್ಯ ಸೌಲಭ್ಯಗಳಿದ್ದಲ್ಲಿ ಮಾತ್ರ ಹೋಂ ಐಸೋಲೇಷನ್ ಗೆ ಅನುಮತಿ ನೀಡಲಿದ್ದು, ಪ್ರತಿನಿತ್ಯ ಸೋಂಕಿತರ ಆರೋಗ್ಯ ದ ಕುರಿತು ವರದಿ ಪಡೆಯಲಿದ್ದು, ಅರೋಗ್ಯದಲ್ಲಿ ಏರು ಪೇರಾದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಡಿಸಿ ತಿಳಿಸಿದರು.

ಬೆಂಗಳೂರಿನಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಬೆಂಗಳೂರಿನಿAದ ಜಿಲ್ಲೆಗೆ ಬಂದವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗುವುದು , ಮನೆಯವರ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು ಎಂದು ಡಿಸಿ ಹೇಳಿದರು.

ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗಹ್ಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಉಪಸ್ಥಿತರಿದ್ದರು.

One thought on “ಜುಲೈ 15ರಿಂದ ಉಡುಪಿ ಜಿಲ್ಲೆಯ ಗಡಿ ಸೀಲ್‌ಡೌನ್: ಯಾವುದಕ್ಕೆಲ್ಲಾ ನಿರ್ಬಂಧ-ವಿನಾಯಿತಿ ನೋಡಿ

  1. ಬಸ್ ಇಲ್ಲದಿದ್ದರೆ ಬಡವರು ಕೆಲಸಕ್ಕೆ ಹೋಗುವುದು ಹೇಗೆ? ಕೇವಲ ಸ್ವಂತ ವಾಹನ ಇರುವ ಶ್ರಿಮಂತರು ಮಾತ್ರ ಸಂಪಾದನೆ ಮಾಡ ಬೇಕೆ?

Leave a Reply