ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿನಿ ಕುಂದಾಪುರದ ಸ್ವಾತಿ ಪೈ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 594 (99%) ಅಂಕ ಪಡೆದು ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಸ್ವಾತಿ ಪೈ ಕುಂದಾಪುರ ಹೊಸ ಬಸ್ ನಿಲ್ದಾಣ ಬಳಿ ಜವಳಿ ಉದ್ಯಮಿ ನಡೆಸುತ್ತಿರುವ ಶಿವಾನಂದ ಪೈ ಮತ್ತು ಶಿಲ್ಪಾ ಪೈ ಅವರ ಪುತ್ರಿ. ರ‍್ಯಾಂಕ್ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾತಿ, ರ‍್ಯಾಂಕ್ ಬರಲು ಕಾಲೇಜು ಹಾಗೂ ಮನೆಯವರಿಂದ ಉತ್ತಮ ಪ್ರೋತ್ಸಾಹ ಕಾರಣ. ನಿರಂತರವ ಅಭ್ಯಾಸ ಮಾಡಿದ್ದೆ. ಮುಂದೆ ನಾನು ಸಿ.ಎ ಮಾಡುವ ಹಂಬಲವಿದೆ ಎಂದಿದ್ದಾರೆ.
ಇದನ್ನೂ ಓದಿ:
► ಜುಲೈ 15ರಿಂದ ಉಡುಪಿ ಜಿಲ್ಲೆಯ ಗಡಿ ಸೀಲ್‌ಡೌನ್: ಯಾವುದಕ್ಕೆಲ್ಲಾ ನಿರ್ಬಂಧ-ವಿನಾಯಿತಿ ನೋಡಿ – https://kundapraa.com/?p=39538 .
► ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಮಂಗಳವಾರ 72 ಪಾಸಿಟಿವ್ ದೃಢ – https://kundapraa.com/?p=39547 .