Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಶುಕ್ರವಾರ 84 ಪಾಸಿಟಿವ್ ದೃಢ. ಒಟ್ಟು 7 ಮಂದಿ ಮೃತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜು.17ರ ಶುಕ್ರವಾರ 84 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ.  ಈ ಪೈಕಿ ಕುಂದಾಪುರ ತಾಲೂಕಿನ 40, ಉಡುಪಿ ತಾಲೂಕಿನ 33 ಹಾಗೂ ಕಾರ್ಕಳ ತಾಲೂಕಿನ 11 ಮಂದಿಗೆ ಪಾಸಿಟಿವ್ ಬಂದಿದೆ.

ಒಟ್ಟು ಪ್ರಕರಣಗಳಲ್ಲಿ 50 ಪುರುಷರು, 34 ಮಹಿಳೆಯರು ಸೇರಿದ್ದಾರೆ. ಇವರಲ್ಲಿ 7 ಮಂದಿ ಮಂಬೈ ಪ್ರಯಾಣದ ಹಿನ್ನೆಲೆ, 6 ಮಂದಿ ಬೆಂಗಳೂರು, 3 ಮಂದಿ ಮಂಗಳೂರು, ತಲಾ ಓರ್ವ ವ್ಯಕ್ತಿ ದುಬೈ ಹಾಗೂ ಅಬಿದಾಬಿ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಉಳಿದ ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಹಾಗೂ ILI ಪ್ರಕರಣಗಳಾಗಿವೆ.

489 ನೆಗೆಟಿವ್:
ಈ ತನಕ ಒಟ್ಟು 23,858 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 21,465 ನೆಗೆಟಿವ್, 1,979 ಪಾಸಿಟಿವ್ ಬಂದಿದ್ದು, 414 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 309 ನೆಗೆಟಿವ್, 84 ಪಾಸಿಟಿವ್ ಬಂದಿದೆ. ಒಟ್ಟು 2,124 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ.

429 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 1,979 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,543 ಮಂದಿ ಬಿಡುಗಡೆಯಾಗಿದ್ದು, 429 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ 7 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ:
► ಕುಂದಾಪುರದ ಉದ್ಯಮಿ ಕುವೈತ್‌ನಲ್ಲಿ ಕೊರೋನಾ ಸೊಂಕಿಗೆ ಬಲಿ – https://kundapraa.com/?p=39669 .
► ಸ್ವಯಂ ಸೇವೆಗೆ ವೈದ್ಯರು, ನರ್ಸ್‌ಗಳು ಮತ್ತು ಲ್ಯಾಬ್ ಟೆಕ್ನೀಷಿಯನ್ಸ್ ನೊಂದಾಯಿಸಿ: ಜಿಲ್ಲಾಧಿಕಾರಿ – https://kundapraa.com/?p=39666 .

 

Exit mobile version