ಸ್ವಯಂ ಸೇವೆಗೆ ವೈದ್ಯರು, ನರ್ಸ್‌ಗಳು ಮತ್ತು ಲ್ಯಾಬ್ ಟೆಕ್ನೀಷಿಯನ್ಸ್ ನೊಂದಾಯಿಸಿ: ಜಿಲ್ಲಾಧಿಕಾರಿ ಜಿ. ಜಗದೀಶ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ರೋಗಿಗಳ ಚಿಕಿತ್ಸೆ ಬಗ್ಗೆ ಹಾಲಿ ಇರುವ ವ್ಯವಸ್ಥೆಯನ್ನು ಉನ್ನತಿಕರಿಸಬೇಕಾದ ಅಗತ್ಯತೆ ಇದೆ. ಅದೇ ರೀತಿ ವೈದ್ಯರು/ಸ್ಟಾಫ್ ನರ್ಸ್‌ಗಳ ಅಗತ್ಯವಿದೆ.

Call us

Click Here

ಅಲ್ಲದೇ ಲ್ಯಾಬ್‌ಗಳಲ್ಲಿ ಲ್ಯಾಬ್ ಟೆಕ್ನೀಶೀಯನಗಳ ಕೆಲಸ ಅವಶ್ಯಕತೆ ಇರುತ್ತದೆ. ಆದುದರಿಂದ ಸ್ವಯಂ ಪ್ರೇರಿತರಾಗಿ ಕಾರ್ಯನಿರ್ವಹಿಸಲು ಇಚ್ಚಿಸುವ ವೈದ್ಯರು, ಸ್ಟಾಫ್ ನರ್ಸ್‌ಗಳು ಮತ್ತು ಲ್ಯಾಬ್ ಟೆಕ್ನಿಶಿಯನ್‌ಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಉಡುಪಿ ಇವರನ್ನು ಸಂಪರ್ಕಿಸಬಹುದಾಗಿದೆ.

ಜಿಲ್ಲೆಯ ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ವೆಂಟಿಲೇಟರ್‌ಗಳು ಮತ್ತು ಹೈ ಪ್ರೆಜರ್ ಆಕ್ಸಿಜನ್ ಸಿಸ್ಟಮ್‌ಗಳ ತೀರಾ ಅವಶ್ಯಕತೆ ಇರುವುದರಿಂದ ವೆಂಟಿಲೇಟರ್ ಹಾಗೂ ಹೈ ಪ್ರೆಜರ್ ಆಕ್ಸಿಜನ್ ಸಿಸ್ಟಮ್‌ಗಳನ್ನು ನೀಡಲು ಇಚ್ಚಿಸುವ ದಾನಿಗಳು /ಸಂಘ ಸಂಸ್ಥೆಗಳು ಜಿಲ್ಲಾಧಿಕಾರಿ ಕಚೇರಿಗೆ ಹಸ್ತಾಂತರಿಸಿ ಕೋವಿಡ್ -೧೯ ನಿಯಂತ್ರಣದಲ್ಲಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಸಹಕರಿಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಕ್ವಾರಂಟೈನ್ ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ:
ಜಾಗತಿಕ ಸೋಂಕಾಗಿರುವ ಕೋವಿಡ್-19 ರೋಗವು ಹರಡುವುದನ್ನು ನಿಯಂತ್ರಣ ಮಾಡುವ ಹಾಗೂ ಇದರಿಂದಾಗಿ ಉಂಟಾಗುವ ಅನಾರೋಗ್ಯ ಸ್ಥಿತಿ ಮತ್ತು ಮರಣಗಳನ್ನು ತಡೆಗಟ್ಟುವ ಸಲುವಾಗಿ ಕೋವಿಡ್ ಪಾಸಿಟಿವ್ ಆಗಿರುವ ವ್ಯಕ್ತಿಗಳನ್ನು ,ಪ್ರಥಮ ಸಂಪರ್ಕಿಸಿರುವ (Primary Contact) ವ್ಯಕ್ತಿಗಳನ್ನು ಹಾಗೂ ಹೊರ ರಾಜ್ಯ/ದೇಶ ದಿಂದ ಬರುವ ವ್ಯಕ್ತಿಗಳನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಹೋಂ ಕ್ವಾರಂಟೈನ್ ನಲ್ಲಿ ಇಡಲಾಗುತ್ತದೆ.

ಸಾರ್ವಜನಿಕ ಆರೋಗ್ಯ ಮತ್ತು ಕ್ಷೇಮದ ಹಿತದೃಷ್ಟಿಯಿಂದ ಹೊರ ರಾಜ್ಯ/ದೇಶ ಪ್ರಯಾಣಿಕರು, ಕೋವಿಡ್-19 ಸೋಂಕಿತರು ಮತ್ತು ಪ್ರಥಮ ಸಂಪರ್ಕಿತರು ಕಡ್ಡಾಯವಾಗಿ ಹೋಂ ಕ್ವಾರಂಟೈನ್ಗೆ ಒಳಪಡುವುದನ್ನು ಖಾತ್ರಿಪಡಿಸಲು ಮತ್ತು ನೀಡಲಾದ ಸೂಚನೆಗಳನ್ನು ಅನುಸರಣೆ ಮಾಡುವ ಸಲುವಾಗಿ ಹಾಗೂ ಹೋಂ ಕ್ವಾರಂಟೈನ್ನ್ನು ಕಟ್ಟು ನಿಟ್ಟಾಗಿ ಪಾಲಿಸುವ ಸಲುವಾಗಿ ಹೋಂ ಕ್ವಾರಂಟೈನ್ ನ್ನು ಉಲ್ಲಂಘನೆ ಮಾಡಿರುವ ವ್ಯಕ್ತಿಯ ವಿರುದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ-2005 ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂ ತೆ ಸರಕಾರದಿಂದ ನಿರ್ದೇಶನ ಇರುತ್ತದೆ.

Click here

Click here

Click here

Click Here

Call us

Call us

Home Quarantine Watch App ತಂತ್ರಶಾದ ಮುಖಾಂತರ ಹೋಂ ಕ್ವಾರಂಟೈನ್ ನಲ್ಲಿ ಇರುವವರನ್ನು ಪ್ರತಿದಿನ ನಿಗದಿತ ಅಧಿಕಾರಿಗಳ ಮುಖಾಂತರ ಭೌತಿಕವಾಗಿ ಪರಿಶೀಲನೆ ನಡೆಸಲಾಗುತ್ತಿದೆ ,ಅಲ್ಲದೇ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಗಳು ತಮ್ಮ ಸೆಲ್ಫಿಯನ್ನು Upload ಮಾಡಬೇಕಿದೆ. ಅಲ್ಲದೇ Quarantine Geo Fencing Breach ಮುಖಾಂತರ ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಗಂಘಿಸಿರುವವರನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚಲಾಗುತ್ತಿದೆ. ಇಂತಹವರ ವಿರುದ್ಧ ಈಗಾಗಲೇ 11 FIR ದಾಖಲಿಸಲಾಗಿದೆ.

ಆದ್ದರಿಂದ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ಗೆ ಒಳಪಟ್ಟ ಯಾವುದೇ ವ್ಯಕ್ತಿಗಳು ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲು ಆಯಾ ತಾಲೂಕಿನ ತಹಶೀಲ್ದಾರರು , ಕಾರ್ಯ ನಿರ್ವಾಹಣಾಧಿಕಾರಿಗಳು ಮತ್ತು Flying Squad ಇವರುಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸಾರ್ವಜನಿಕರ ಸ್ವಾಸ್ಥ್ಯ ದ ಹಿತದೃಷ್ಠಿಯಿಂದ ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡಿದಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

Leave a Reply