Kundapra.com ಕುಂದಾಪ್ರ ಡಾಟ್ ಕಾಂ

ಕೊಡೇರಿ ದೋಣಿ ದುರಂತ: ನಾಪತ್ತೆಯಾಗಿದ್ದ ನಾಲ್ವರ ಮೃತದೇಹ ಪತ್ತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ.17: ಸಮುದ್ರದಲೆಗಳ ಹೊಡೆತಕ್ಕೆ ಸಿಲುಗಿ ಮುಗುಚಿ ಬಿದ್ದಿದ್ದ ದೋಣಿಯಲ್ಲಿ ನಾಪತ್ತೆಯಾಗಿದ್ದ ನಾಲ್ವರ ಪೈಕಿ ಎಲ್ಲಾ ಮೃತದೇಹಗಳು ಇಂದು ಬೆಳಿಗ್ಗೆ ಹಾಗೂ ರಾತ್ರಿಯ ವೇಳೆಗೆ ಪತ್ತೆಯಾಗಿದೆ. ರಾತ್ರಿ ಶೇಖರ ಖಾರ್ವಿ(39) ಹಾಗೂ ಲಕ್ಷಣ ಖಾರ್ವಿ(34) ಹಾಗೂ ಮಂಜುನಾಥ ಖಾರ್ವಿ (40) ಎಂದು ಗುರುತಿಸಲಾಗಿದೆ.

ಶೇಖರ ಖಾರ್ವಿ ಅವರ ಮೃತದೇಹ ಕಿರಿಮಂಜೇಶ್ವರ ಹೊಸಹಕ್ಲು ಬಳಿ, ಲಕ್ಷಣ ಖಾರ್ವಿ ಅವರ ಮೃತದೇಹ ಆದ್ರಗೋಳಿ ಹಾಗೂ ಮಂಜುನಾಥ ಖಾರ್ವಿ ಅವರ ಮೃತದೇಹ ಗಂಗಿಬೈಲು ಬಳಿ ದೊರೆತಿದೆ. ಇಂದು ಬೆಳಿಗ್ಗೆ ನಾಗ ಖಾರ್ವಿ ಎಂಬುವವರ ಮೃತದೇಹ ಹೊಸಹಕ್ಲುವಿನಲ್ಲಿ ಪತ್ತೆಯಾಗಿತ್ತು.

ಕೊಡೇರಿಯಲ್ಲಿ ಸಾಗರಶ್ರೀ ಎಂಬ ಹೆಸರಿನ ದೋಣಿ ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭ ನಡೆದ ಅವಘಡದಲ್ಲಿ ಬಿ. ನಾಗ, ಲಕ್ಷಣ, ಶೇಖರ ಜಿ., ಮಂಜುನಾಥ ಖಾರ್ವಿ ಸೇರಿ ಒಟ್ಟು ನಾಲ್ವರು ವ್ಯಕ್ತಿಗಳು ನಾಪತ್ತೆಯಾಗಿದ್ದರು. ದೋಣಿಯಲ್ಲಿದ್ದ ಎಂಟು ಮಂದಿ ಅಪಾಯದಿಂದ ಪಾರಾಗಿದ್ದರು. ಅವರಿಗಾಗಿ ರಾತ್ರಿಯ ತನಕ ಶೋಧ ಕಾರ್ಯ ಮುಂದುವರಿದಿತ್ತು. ಇಂದು ರಾತ್ರಿಯ ಹೊತ್ತಿಗೆ ಎಲ್ಲಾ ಮೃತದೇಹಗಳು ಪತ್ತೆಯಾಗಿವೆ.

ಮೃತರಿಗೆ ಸಂತಾಪ ಸೂಚಿಸಲು ಇಂದು ಬೈಂದೂರು ತಾಲೂಕಿನಲ್ಲಿ ಬಹುಪಾಲ ಮೀನು ವಹಿವಾಟು ಸ್ಥಗಿತಗೊಂಡಿತ್ತು. ರಾಣಿ ಬಲೆ ಒಕ್ಕೂಟದಿಂದ ತಲಾ ಒಂದು ಲಕ್ಷ ರೂ. ಪರಿಹಾರ ಘೋಷಿಸಲಾಗಿದ್ದು, ಸರಕಾರದಿಂದ ಹೆಚ್ಚಿನ ಪರಿಹಾರವನ್ನು ನಿರೀಕ್ಷಿಸಲಾಗಿದೆ.

Follow-Up
► ಕೊಡೇರಿ ದೋಣಿ ದುರಂತ: ನಾಗ ಖಾರ್ವಿ ಶವ ಪತ್ತೆ – https://kundapraa.com/?p=40380 .
► ಕೊಡೇರಿ ದೋಣಿ ದುರಂತ: ಮುಂದುವರಿದ ಶೋಧ ಕಾರ್ಯ. ಘಟನಾ ಸ್ಥಳಕ್ಕೆ ಡಿಸಿ, ಎಸ್ಪಿ ಭೇಟಿ – https://kundapraa.com/?p=40362 .
► ಕೊಡೇರಿಯಲ್ಲಿ ದೋಣಿ ದುರಂತ: ನಾಲ್ವರು ಮೀನುಗಾರರ ಮುಂದುವರಿದ ಶೋಧ ಕಾರ್ಯಾಚರಣೆ – https://kundapraa.com/?p=40347 .

Exit mobile version