Kundapra.com ಕುಂದಾಪ್ರ ಡಾಟ್ ಕಾಂ

ಕೋಟ : ’ಕಾರಂತ ಸಿರಿ’ ಮಾರಾಟ ಪುಸ್ತಕ ಲಭ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ :  ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಕೋಟದಲ್ಲಿರುವ ಕಾರಂತ ಸಿರಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸ್ಥಾಪಿಸಲಾಗಿರುವ ಪುಸ್ತಕ ಮಳಿಗೆಯಲ್ಲಿ ಕನ್ನಡದ ಪ್ರಸಿದ್ಧ ಸಾಹಿತಿ ಡಾ. ಶಿವರಾಮ ಕಾರಂತರು, ನಾಡೋಜ ಎಸ್.ಎಲ್ ಭೈರಪ್ಪ, ಪೂರ್ಣಚಂದ್ರ ತೇಜಸ್ವಿ , ಸೇರಿದಂತೆ ಇನ್ನಿತರ ಸಾಹಿತಿಗಳ ಕಾದಂಬರಿ , ಮಕ್ಕಳ ಕಥೆ ಪುಸ್ತಕ, ಧಾರ್ಮಿಕ ಸಂಬಂಧಿಸಿದ ಹಾಗೂ ವ್ಯಕ್ತಿತ್ವ ವಿಕಸನದ ಪುಸ್ತಕಗಳು ಮಾರಾಟಕ್ಕೆ ಲಭ್ಯವಿದೆ.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತವಾದ ಪುಸ್ತಕಗಳನ್ನು ವಿಶೇಷ ಸಂದರ್ಭಗಳಾದ ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ನಡೆಯುವ ಜನವರಿ , ಆಗಸ್ಟ್ ಹಾಗೂ ನವೆಂಬರ್ ಮಾಹೆಗಳಲ್ಲಿ ಅಲ್ಲದೆ ರಾಜ್ಯದಲ್ಲಿ ವಿಶೇಷವಾಗಿ ನಡೆಯುವ ವಿಶ್ವ ಕನ್ನಡ ಸಮ್ಮೇಳನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ 50 % ರಿಯಾಯಿತಿ ದರದಲ್ಲಿ ಉಳಿದ ದಿನಗಳಲ್ಲಿ 15% ರಿಯಾಯಿತಿ ದರದಲ್ಲಿ ಪುಸ್ತಕಗಳು ದೊರೆಯಲಿದೆ ಎಂದು ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮ , ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version