Kundapra.com ಕುಂದಾಪ್ರ ಡಾಟ್ ಕಾಂ

ಕಾರಂತೋತ್ಸವ: ಆಲ್ಮೋರ -2020 ’ಮರೆಯಲಾಗದ ಶಬ್ಧತೀರ’ ಅನಾವರಣ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ , ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಇವರ ಆಶ್ರಯದಲ್ಲಿ ನಡೆಯುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಹತ್ತು ದಿನಗಳ ಕಾಲ ನಡೆಯುವ ಆನಲೈನ್ ಸಾಹಿತ್ಯಿಕ – ಸಾಂಸ್ಕೃತಿಕ ದಿಬ್ಬಣ ಕಾರ್ಯಕ್ರಮದ ಆಲ್ಮೋರ – 2020 ’ಮರೆಯಲಾಗದ ಶಬ್ಧತೀರ’ ಹೆಸರನ್ನು ಗೀತಾನಂದ ಫೌಂಢೇಶನ್‌ನ ಪ್ರವರ್ತಕ, ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಅನಾವರಣಗೊಳಿಸಿದರು.

ಅನಾವರಣಗೊಳಿಸಿ ಮಾತನಾಡಿ, ಕಾರಂತರ ಬದುಕಿನ ಚಿತ್ರಣವನ್ನು ಇಂದಿನ ಸಮಾಜಕ್ಕೆ ಪ್ರಸ್ತುತಿ ಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಆದ್ದರಿಂದ ಕಾರಂತರ ವಿಷಯಾಧರಿತ ಕಾರ್ಯಕ್ರಮಗಳನ್ನು ಇನ್ನಷ್ಟೂ ಕಾರಂತ ಥೀಮ್ ಪಾರ್ಕ್‌ನಲ್ಲಿ ಆಯೋಜನೆಗೊಳ್ಳಲಿದೆ ಎಂದರು.

ಆಯ್ಕೆ ಸಮಿತಿಯ ಯು. ಎಸ್ ಶೆಣೈ ಮಾತಾನಾಡಿ, ಈ ವರ್ಷ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ನಾಡೋಜ ಡಾ. ಎಸ್ .ಎಲ್. ಭೈರಪ್ಪ ಅವರನ್ನು ಹುಟ್ಟೂರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಕಾರಂತರಂತೆ ಇವರ ಬದುಕು ಆದರ್ಶನೀಯ ಎಂದರು.

ಕಾರ್ಯದರ್ಶಿ ನರೇಂದ್ರ ಕುಮಾರ್ ಮಾತನಾಡಿ, ಹತ್ತು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಸಾಹಿತ್ಯಿಕ ಕಾರ್ಯಕ್ರಮ ರೂಪುರೇಷೆಗಳನ್ನು ತಿಳಿಸಿದರು. ಕೋವಿಡ್ ಮುಂಜಾಗ್ರತ ಕ್ರಮದಿಂದ ಹತ್ತು ದಿನಗಳ ಕಾರ್ಯಕ್ರಮ ಆನ್‌ಲೈನ್ ಪ್ರಸಾರದ ಮೂಲಕ ನಡೆಸಲಾಗುವುದೆಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ಅರುಣ್ ಕುಮಾರ್ ಶೆಟ್ಟಿ, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕೋಟತಟ್ಟು ನಿಕಟಪೂರ್ವ ಅಧ್ಯಕ್ಷ ರಘು ತಿಂಗಳಾಯ, ಪಿ. ಡಿ. ಓ ಶೈಲಾ ಎಸ್ ಪೂಜಾರಿ, ಟ್ರಸ್ಟಿನ ಸದಸ್ಯರು, ಪಂಚಾಯತ್ ಪೂರ್ವ ಸದಸ್ಯರು, ಥೀಮ್ ಪಾರ್ಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version