Kundapra.com ಕುಂದಾಪ್ರ ಡಾಟ್ ಕಾಂ

ಕಾರಂತ ಥೀಮ್ ಪಾರ್ಕ್ ಮೂಲಕ ಕಾರಂತರ ಕನಸು ನನಸು: ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕಾರಂತ ಥೀಮ್ ಪಾರ್ಕ್‌ನಲ್ಲಿ ಜಗದೋದ್ದಾರ – ನಾ ಆಡಳಿತ ಕಛೇರಿಯನ್ನು ಧಾರ್ಮಿಕ ದತ್ತಿ ದ. ಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇತ್ತಿಚೆಗೆ ಉದ್ಘಾಟಿಸಿದರು.

ಉದ್ಘಾಟಿಸಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಕ್ಕಳೆಂದರೆ ಕಾರಂತರಿಗೆ ಅಚ್ಚು ಮೆಚ್ಚು ಮಕ್ಕಳಿಗೋಸ್ಕರ ಬಾಲ ಪ್ರಪಂಚದಂತಹ ಪುಸ್ತಕಗಳನ್ನು ಬರೆದಿರುವುದು ಮಾತ್ರವಲ್ಲದೇ ಮಕ್ಕಳ ಭೌತಿಕ ವಿಕಸನಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳನ್ನು ಕಾರಂತರು ಮಾಡಿದ್ದಾರೆ, ಅದೇ ಪ್ರಕಾರ ಥೀಮ್ ಪಾರ್ಕ್‌ನಲ್ಲಿ ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆ, ತರಬೇತಿ ಭೌತಿಕ ವಿಕಸನಕ್ಕೆ ಸಂಬಂಧಿಸಿದ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿರುವುದರಿಂದ ಆಸಕ್ತ ಮಕ್ಕಳ ಕಲಿಯುವಿಕೆಯ ಹಸಿವಿನ ದಾಹ ನೀಗಿಸಿದಂತಾಗುತ್ತದೆ ಕಾರಂತ ಥೀಮ್ ಪಾರ್ಕ್ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿದ್ದು ಸಂಗೀತ ಕಾರಂಜಿ , ಯುದ್ಧ ವಿಮಾನದಂತಹ ಆಕರ್ಷಣೆ ಮುಂದಿನ ದಿನಗಳಲ್ಲಿ ಅಳವಡಿಸಿ ಕಾರಂತ ಥೀಮ್ ಪಾರ್ಕ್‌ನ ಸೊಬಗು ಇನ್ನಷ್ಟು ಹೆಚ್ಚಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕೋಟತಟ್ಟು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ಅರುಣ್ ಕುಮಾರ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರಘು ತಿಂಗಳಾಯ, ಪಿ. ಡಿ. ಓ ಶೈಲಾ ಎಸ್ ಪೂಜಾರಿ , ಟ್ರಸ್ಟಿಗಳಾದ ಸುಬ್ರಾಯ್ ಆಚಾರ್ಯ, ರಾಜಶೇಖರ್, ಗ್ರಂಥಾಲಯ ಮೇಲ್ವಿಚಾರಕಿ ಶೈಲಜಾ ಕೆ ಎನ್, ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಉಪಸ್ಥಿತರಿದ್ದರು.

Exit mobile version