ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ವತಿಯಿಂದ ನವೆಂಬರ್ 29 ರಂದು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಬೆಳಿಗ್ಗೆ 10 ಗಂಟೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಯತೆಯನ್ನು ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಲಿದ್ದು, ಹಿರಿಯ ವಕೀಲ ಎ.ಎಸ್.ಎನ್ ಹೆಬ್ಬಾರ್ ಸಾಹಿತ್ಯ ಸುಧೆ ಪ್ರಕಾಶನ ಪ್ರಕಟಿಸಿದ ಮುಷ್ತಾಕ್ ಹೆನ್ನಾಬೈಲ್ ಅವರ ಪ್ರಥಮ ಕೃತಿ ಪರಿಭ್ರಮಣ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ, ಮಂಗಳೂರು ವಿ.ವಿ ನಿರ್ದೇಶಕ ಮುದ್ದು ಮೂಡುಬೆಳ್ಳೆ, ಮಲೆನಾಡು ಪ್ರಕಾಶನ ಪ್ರಕಟಿಸಿದ ನಾರಾಯಣ ಶೇವಿರೆ ಅವರ ದೇಶೀ ದಿಶೆ , ಪ್ರಸಾದ್ ನಾರ್ಣಕಜೆ , ಇತಿಹಾಸ ಅಧ್ಯಾಪಕರು ಮಲೆನಾಡು ಪ್ರಕಾಶನ ಪ್ರಕಟಿಸಿದ ನಾರಾಯಣ ಶೇವಿರೆ ಅವರ ಉಪಾಸನೆ ಕ್ಯಾಥರೀನ್ ರೋಡ್ರಿಗಸ್, ಶಿಕ್ಷಣ ಚಿಂತಕರು ಅವರು ಸಾಹಿತ್ಯ ಸುಧೆ ಪ್ರಕಾಶನ ಪ್ರಕಟಿಸಿದ ಪ್ರೊ.ನರಹರಿ ಎ.ಎಮ್. ಅವರ ಪ್ರಥಮ ಕೃತಿ ಶಿಕ್ಷಣ ಮನ್ವಂತರ-ರಾಷ್ಟ್ರೀಯ ಶಿಕ್ಷಣ ನೀತಿ -2020 ಅನಾವರಣಗೊಳಿಸಿ ಮಾತಾನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ.ಜಿ.ಜಗದೀಶ್ ಶೆಟ್ಟಿ, ಚಿಂತಕರು ,ಕುಂದಾಪುರ, ಗೌರವ ಉಪಸ್ಥಿತಿಯಲ್ಲಿ ಅರವಿಂದ ಚೊಕ್ಕಾಡಿ, ಸಾಹಿತಿಗಳು-ಚಿಂತಕರು ಭಾಗವಹಿಸಲಿದ್ದು, ನಿರೂಪಣೆಯನ್ನು ಲಕ್ಷ್ಮೀ ಮಚ್ಚಿನ, ಪತ್ರಕರ್ತರು ನಡೆಸಿಕೊಡಲಿದ್ದಾರೆ ಎಂದು ಕ.ಸಾ.ಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ ಗೌರವ ಕೋಶಾದ್ಯಕ್ಷ ವಲೇರಿಯನ್ ಮೆನೇಜಸ್, ಸಂಘಟನಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.