Site icon Kundapra.com ಕುಂದಾಪ್ರ ಡಾಟ್ ಕಾಂ

ಡಿ.6ರಂದು ಆನ್‌ಲೈನ್ ಸಾಂಸ್ಕೃತಿಕ ಸಮ್ಮೇಳನ: ಹಾಂಪರಿ – 2020

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಇವರ ಸಹಯೋಗದಲ್ಲಿ ಡಾ. ಶಿವರಾಮ ಕಾರಂತರ ಪುಣ್ಯತಿಥಿ ಅಂಗವಾಗಿ ರಾಜ್ಯದ ಮೊದಲ ಆನ್ ಲೈನ್ ಸಾಹಿತ್ಯಿಕ – ಸಾಂಸ್ಕೃತಿಕ ಸಮ್ಮೇಳನ ಹಾಂಪರಿ – 2020 (ಬದಲಾವಣೆಯ ಕರೆಗಾಳಿ ) ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಿಸೆಂಬರ್ 6 ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5ರ ತನಕ ನಡೆಯಲಿದೆ.

ವಿಚಾರಗೋಷ್ಠಿ, ಪ್ರಬಂಧ ಮಂಡನೆ, ಕವಿಗೋಷ್ಠಿ, ನಾಟಕಾಂಶ ಪ್ರದರ್ಶನ, ಜನಪದ ಗುಂಜನ, ಕನ್ನಡ ಗೀತ ಗಾಯನ, ಯಕ್ಷನೃತ್ಯ, ಬಹುವಿಧ ಅಭಿವ್ಯಕ್ತಿ, ಏಕವ್ಯಕ್ತಿ ಸ್ವರಾಂಜಲಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಡಾ. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ.ಅರುಣ್ ಕುಮಾರ್ ಶೆಟ್ಟಿ, ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ಶೈಲಾ ಎಸ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version