Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ, ಬೈಂದೂರಿನಲ್ಲಿ ಅರೆಭಾಷೆ ’ನಾಟಕ ಸಾಹೇಬ್ರು ಬಂದವೇ’ ಪ್ರದರ್ಶನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ರಂಗ ಪ್ರಸ್ತುತಿ ’ಸಾಹೇಬ್ರು ಬಂದವೇ’ ನಾಟಕವು ಕುಂದಾಪುರ ಕಾಗೇರಿ ಹಾಗೂ ಬೈಂದೂರಿನ ಶಾರದಾ ವೇದಿಕೆಯಲ್ಲಿ ಪ್ರದರ್ಶನಗೊಂಡಿತು.

ಆಳ್ವಾಸ್ ನುಡಿಸಿರಿ ಘಟಕ ಕುಂದಾಪುರ, ಯುವ ಮೆರೀಡಿಯನ್ ಹಾಗೂ ಉಡುಪಿ ಜಿಲ್ಲಾ ಕಸಾಪ ಆಶ್ರಯದಲ್ಲಿ ಕುಂದಾಪುರದಲ್ಲಿ ನಡೆದ ಕಾರ್ಯಕ್ರಮವನ್ನು ಕ್ಯಾಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ ಉದ್ಘಾಟಿಸಿದರು. ಈ ಸಂದರ್ಭ ಯುವ ಮೆರೀಡಿಯನ್‌ನ ಉದಯಕುಮಾರ್ ಶೆಟ್ಟಿ, ವಿನಯಕುಮಾರ್ ಶೆಟ್ಟಿ, ಕರ್ನಾಟಕ ಅರೆಭಾಷೆ ಅಕಾಡೆಮಿಯ ಸದಸ್ಯ ಎ. ಟಿ. ಕುಸುಮಾಕರ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ರಂಗ ನಿರ್ದೇಶಕರಾದ ರವಿರಾಜ್ ಹೆಚ್.ಪಿ, ಜೀವನರಾಂ ಸುಳ್ಯ, ಸಂಘಟಕ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ನರೇಂದ್ರಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.ಸುರಭಿ ರಿ. ಬೈಂದೂರು, ಜೆಸಿಐ ಬೈಂದೂರು ಸಿಟಿ ಹಾಗೂ ಸಂಚಲನ ರಿ. ಹೊಸೂರು ನೇತೃತ್ವದಲ್ಲಿ ಬೈಂದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹೇಬ್ರು ಬಂದವೇ ನಾಟಕದ ನಿರ್ದೇಶಕ ನಿರ್ದೇಶಕ ಜೀವನರಾಂ ಸುಳ್ಯ ಕರ್ನಾಟಕ ಅರೆಭಾಷೆ ಅಕಾಡೆಮಿಯ ಸದಸ್ಯ ಎ. ಟಿ. ಕುಸುಮಾಕರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಜೆಸಿಐ ಬೈಂದೂರು ಸಿಟಿಯ ಸ್ಥಾಪಕಾಧ್ಯಕ್ಷ ಮಣಿಕಂಠ ದೇವಾಡಿಗ, ಸಂಚಲನ ಹೊಸೂರಿನ ಅಧ್ಯಕ್ಷ ಮಹದೇವ ಮರಾಠಿ, ಸುರಭಿ ಕಾರ್ಯದರ್ಶಿ ಭಾಸ್ಕರ ಬಾಡ ಉಪಸ್ಥಿತರಿದ್ದರು.ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಸ್ವಾಗತಿಸಿ, ಸಂಚಲನದ ರಾಜು ಮರಾಠಿ ವಂದಿಸಿದರು. ಸುರಭಿ ನಿರ್ದೇಶಕ ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು. ನೇಹಿಗ ಜೀವನರಾಂ ಪ್ರಾರ್ಥಿಸಿದರು.

ಸಭಾ ಕಾರ್ಯಕ್ರಮದ ಬಳಿಕ ’ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನಗೊಂಡಿತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಇದನ್ನೂ ಓದಿ
► ಕುಂದಾಪ್ರ ಕನ್ನಡದ ಅಕಾಡೆಮಿ ಪ್ರಸ್ತಾಪ: ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಭರವಸೆ – https://kundapraa.com/?p=43859 .

 

Exit mobile version