ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರದ ನಿಧಿಸಮರ್ಪಣಾ ಕಾರ್ಯದ ಭಾಗವಾಗಿ ಭಾನುವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೋಟತಟ್ಟು ಗ್ರಾಮದ ಹಂದಟ್ಟು ಭಾಗದ ಮನೆಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಿದರು.
ಈ ಸಂದರ್ಭ ಅವರು ಮಾತನಾಡಿ ಪ್ರತಿ ಹಿಂದುಗಳ ಮನೆಯಿಂದ ಅವರು ನೀಡಿದಷ್ಟು ಹಣವನ್ನು ದೇಣಿಗೆಯಾಗಿ ಸ್ವೀಕರಿಸಲು ಪ್ರಧಾನಿಗಳು ಕರೆ ನೀಡಿದ್ದು, ಅದರಂತೆ ಎಲ್ಲೆಡೆಯೂ ನಿಧಿ ಸಮರ್ಪಣಾ ಕಾರ್ಯ ನಡೆಯುತ್ತಿದೆ. ಜನರು ಕೂಡ ಇದೊಂದು ಪುಣ್ಯದ ಕಾರ್ಯವೆಂದು ಭಾವಿಸಿ ದೇಣಿಗೆ ನೀಡುತ್ತಿರುವುದು ಸಂತಸದ ಸಂಗತಿ ಎಂದರು.