Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ಅಮೃತೇಶ್ವರಿ ದೇಗುಲದಲ್ಲಿ ಸಪ್ತಪದಿ ಸಾಮೂಹಿಕ ವಿವಾಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಸಚಿವಾಲಯದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಸಪ್ತಪದಿ ಸಾಮೂಹಿಕ ವಿವಾಹ ನಡೆಯಿತು.

10 ಜೋಡಿಗಳು ಹಸಮಣೆ ಏರಿದರು. ಮಧುಸೂದನ್ ಬಾಯರಿ, ರಾಜೇಂದ್ರ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ವಿಪ್ರ ಮಹಿಳೆಯರು ಸೋಭಾನಿ ಹಾಡುವುದರ ಮೂಲಕ ವಿವಾಹ ಮಹೋತ್ಸವದ ಉದ್ದಕ್ಕೂ ಗಮನ ಸೆಳೆದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ನವವಧುವರರಿಗೆ ಶುಭ ಹಾರೈಸಿದರು.

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ್ ಸಿ. ಕುಂದರ್, ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಲಲಿತಾ, ದೇವಳದ ಟ್ರಸ್ಟಿ ಸುಶೀಲಾ ಸೋಮಶೇಖರ್, ಜ್ಯೋತಿ.ಬಿ.ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಪತ್ನಿ ಶಾರದಾ ಆರತಿ ಬೆಳಗಿ ವಧುವರರನ್ನು ಶುಭಹಾರೈಸಿದರು.

ಜುಲೈವರೆಗೆ ಸಪ್ತಪದಿ:
ರಾಜ್ಯದಲ್ಲಿ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಸಪ್ತಪದಿಗೆ ಈಗ ಮತ್ತೆ ಚಾಲನೆ ನೀಡಲಾಗಿದೆ. ಹಲವು ಕಡೆ ನಡೆದ ಸಪ್ತಪದಿಯಲ್ಲಿ ನೂರಾರು ಮಂದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಮುಂದೆ ಪ್ರತಿ ತಿಂಗಳ 4,5, ಹಾಗೂ 6ರಂದು ಎಲ್ಲ ದೇವಸ್ಥಾನಗಳಲ್ಲಿ ಸಪ್ತಪದಿ ಮಾಡಲಾಗುವುದು. ಜುಲೈ ತನಕ ಇದು ನಡೆಯಲಿದೆ. ಕೋಟ ಅಮೃತೇಶ್ವರಿ ದೇವಸ್ಥಾನದಲ್ಲೂ ಮಾರ್ಚ್ 26ರಂದು 2ನೇ ಬಾರಿ ಸಪ್ತಪದಿ ನಡೆಯಲಿದೆ – ಸಚಿವ ಕೋಟ ಶ್ರೀನಿವಾಸ ಪೂಜಾರಿ

Exit mobile version