Kundapra.com ಕುಂದಾಪ್ರ ಡಾಟ್ ಕಾಂ

ವಕೀಲ ಸದಾನಂದ ಶೆಟ್ಟಿ ಅವರ ಬಡ್ಡಿ ವ್ಯವಹಾರ ಸುಳ್ಳು ಎಂದಾದರೆ ತನಿಕೆಯಾಗಲಿ: ಸದಾನಂದ ಉಪ್ಪಿನಕುದ್ರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಕೀಲ ಸದಾನಂದ ಶೆಟ್ಟಿ ಅವರು ಬಡ್ಡಿ ವ್ಯವಹಾರ ನಡೆಸಿರುವುದು ಸುಳ್ಳು ಎಂದಾದರೆ ತನಿಕೆ ನಡೆಯಲಿ. ಆಗಲಾದರೂ ಅವರು ನಡೆಸಿದ ಸಂಚು ಹಾಗೂ ಸತ್ಯ ಹೊರಬರಲಿದೆ ಎಂದು ಬಿಜೆಪಿ ಮುಖಂಡ ಸದಾನಂದ ಉಪ್ಪಿನಕುದ್ರು ಹೇಳಿದ್ದಾರೆ.

ವಕೀಲ ಸದಾನಂದ ಶೆಟ್ಟಿ ಅವರು ಕುಂದಾಪುರದಲ್ಲಿ ನಡೆಸಿರುವ ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಮಾಹಿತಿ ನೀಡಿದ್ದು, ತಾನು ಬಡ್ಡಿ ವ್ಯವಹಾರ ನಡೆಸಿಲ್ಲ ಎಂದಿದ್ದಾರೆ. ಆದರೆ ಅವರು ಅದೇ ವ್ಯವಹಾರದಲ್ಲಿ ತೊಡಗಿಕೊಂಡಿರುವುದಕ್ಕೆ ನನ್ನ ಬಳಿಯು ದಾಖಲೆಗಳಿವೆ. ಸುಖಾಸುಮ್ಮನೆ ಮಾತನಾಡಿಲ್ಲ ಎಂದು ಸದಾನಂದ ಉಪ್ಪಿನಕುದ್ರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಾನು ಅವರಿಂದ ಬಡ್ಡಿ ಹಣ ಪಡೆಯುವಾಗ ನನ್ನಿಂದ ಬ್ಯ್ಲಾಂಕ್ ಚೆಕ್ ತೆಗೆದುಕೊಂಡು, ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದರು. ಅವರು ಹಾಗೂ ನನ್ನ ನಡುವೆ ಯಾವುದೇ ಜಾಗದ ವ್ಯವಹಾರ ನಡೆದಿಲ್ಲ. ಖಾಲಿ ಬಾಂಡ್ ಪೇಪರ್ ಮೇಲೆ ಅವರು ಜಾಗ ಮಾರಿದ್ದಾಗಿ ಬರೆದುಕೊಂಡಿರಬಹುದು. ಆದರೆ ನಾನು ಅವರಿಗೆ ಜಾಗ ಮಾರುವ ಪ್ರಸ್ತಾಪವೇ ಮಾಡಿಲ್ಲ. ನಾನು ಹೇಳುವುದು ಸುಳ್ಳು ಎಂಬುದಾದರೆ ಅವರು ಕೊಲ್ಲೂರು ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದರು.

ಇದನ್ನೂ ಓದಿ:
► ಬೈಂದೂರು ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷ ಬಲಿಷ್ಠವಾಗಿದೆ: ದೀಪಕ್‌ ಕುಮಾರ್ ಶೆಟ್ಟಿ ಹೇಳಿಕೆ – https://kundapraa.com/?p=47156 .
► ನಾನು ಬಡ್ಡಿ ವ್ಯವಹಾರ ನಡೆಸಿಲ್ಲ. ಬ್ಲ್ಯಾಂಕ್ ಚೆಕ್ ಕೂಡ ಪಡೆದಿಲ್ಲ: ಸದಾನಂದ ಶೆಟ್ಟಿ – https://kundapraa.com/?p=47146 .
► ಸದಾನಂದ ಉಪ್ಪಿನಕುದ್ರು ಅವರ ಆರೋಪ ಸತ್ಯಕ್ಕೆ ದೂರಾವಾದದ್ದು: ಶಾಸಕ ಬಿ.‌ಎಂ. ಸುಕುಮಾರ ಶೆಟ್ಟಿ‌ ಸ್ಪಷ್ಟನೆ – https://kundapraa.com/?p=44517 .
► ಬೈಂದೂರು ಶಾಸಕ ಸುಕುಮಾರ ಶೆಟ್ಟರ ಕಿರುಕುಳದಿಂದ ಬೇಸತ್ತಿದ್ದೇನೆ: ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಆರೋಪ – https://kundapraa.com/?p=47102 .

Exit mobile version