Kundapra.com ಕುಂದಾಪ್ರ ಡಾಟ್ ಕಾಂ

ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೋಟ ಪಿಎಸ್‌ಐ ಸಂತೋಷ್ ಬಿ.ಪಿ ನೇತೃತ್ವದ ತಂಡ ಬಂಧಿಸಿದೆ. ಕೋಟತಟ್ಟು ಪಡುಕೆರೆಯ ಇಬ್ರಾಹಿಂ ಅಲಿಯಾಸ್ ಆಕಾಶವಾಣಿ ಇಬ್ರಾಹಿಂ (55) ಬಂಧಿತ ಆರೋಪಿ.

ಸ್ಕೂಟಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವಾಗ ಕೋಟದ ವರುಣತೀರ್ಥ ಕೆರೆ ಸಮೀಪ ಅಡ್ಡಗಟ್ಟಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ.

ಸುಮಾರು 1ಕೆ.ಜಿ 450 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು ಸ್ಥಳಕ್ಕೆ ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version