Kundapra.com ಕುಂದಾಪ್ರ ಡಾಟ್ ಕಾಂ

ತಾರ್ಕಿಕ ಅಂತ್ಯಕ್ಕೆ ವಿಶಾಲ ಗಾಣಿಗ ಕೊಲೆ ಪ್ರಕರಣ? ಸುಪಾರಿ ಕೊಲೆಗೆ ಪತಿಯೇ ಸೂತ್ರದಾರ?

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ,ಜು.19: ಬ್ರಹ್ಮಾವರ ಕುಮ್ರಗೋಡುವಿನ ವಿಲನ್ ರೆಸಿಡೆಸ್ಸಿಯಲ್ಲಿ ಕಳೆದ ಸೋಮವಾರ ನಡೆದ ವಿಶಾಲ ಗಾಣಿಗ (35) ಕೊಲೆ ಪ್ರಕರಣದ ತನಿಕೆಗೆ ತಾರ್ಕಿಕ ಅಂತ್ಯ ದೊರೆಯುವ ಲಕ್ಷಣ ಕಾಣಿಸುತ್ತಿದ್ದು, ಆಕೆಯ ಪತಿಯೇ ಪ್ರಕರಣದ ಸೂತ್ರಧಾರ ಎಂಬ ಮಾತುಗಳು ಮೂಲಗಳಿಂದ ಕೇಳಿ ಬರುತ್ತಿದೆ.

ಪತ್ನಿಯ ಮೇಲಿನ ಸಂಶಯ ಕೊಲೆಗೆ ಕಾರಣವಾಯಿತೇ?
ಗುಜ್ಜಾಡಿ ನಾಯಕವಾಡಿಯ ವಿಶಾಲ ಗಾಣಿಗ, ಬಿಜೂರು ಚಾರಕೊಡ್ಲು ರಾಮಕೃಷ್ಣ ಗಾಣಿಗ ಎಂಬವವರನ್ನು ವಿವಾಹವಾಗಿ ದುಬೈನಲ್ಲಿ ನೆಲೆಸಿದ್ದರು. ಇವರಿಗೆ ಓರ್ವ 6 ವರ್ಷದ ಮಗಳಿದ್ದಾಳೆ. ಇತ್ತಿಚಿಗೆ ಊರಿಗೆ ಬಂದಿದ್ದ ಸಂದರ್ಭ ವಿಶಾಲ ಗಾಣಿಗ ಕೊಲೆಯಾಗಿದ್ದರು. ಆಸ್ತಿ ವ್ಯವಹಾರಕ್ಕಾಗಿ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿತ್ತು. ಆದರೆ ಪತ್ನಿಯ ಮೇಲಿನ ಸಂಶಯವೂ ಅಥವಾ ರಾಮಕೃಷ್ಣ ಗಾಣಿಗನಿಗೆ ಸಲ್ಲಾಪಗಳಿಗೆ ಪತ್ನಿ ಅಡ್ಡವಾಗಿದ್ದಳು ಎಂಬ ಕಾರಣವೂ, ಒಟ್ಟಿನಲ್ಲಿ ಆಕೆಯ ಕೊಲೆಯೊಂದಿಗೆ ಪತಿ ಪತ್ನಿಯರ ವಿರಸ ಮುರಿದುಬಿದ್ದಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಸುಪಾರಿ ಕೊಟ್ಟು ಕೊಲೆ?
ಪೊಲೀಸರ ಪ್ರಾಥಮಿಕ ತನಿಕೆಯಲ್ಲಿ ವಿಶಾಲ ಕೊಲೆಯಾದ ಪ್ಲ್ಯಾಟ್’ನಲ್ಲಿ ಎರಡು ಟೀ ಕುಡಿದ ಕಪ್’ಗಳು ಇರುವುದು ಪತ್ತೆಯಾಗಿದ್ದರಿಂದ ಇಬ್ಬರು ವ್ಯಕ್ತಿಗಳು ಮನೆಗೆ ಬಂದಿರಬಹುದು ಅಥವಾ ವಿಶಾಲ ಜೊತೆಗೆ ಒಬ್ಬ ವ್ಯಕ್ತಿ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ವಿಶಾಲ ಅವರು ಅಪರಿಚಿತರನ್ನು ಮನೆಯೊಳಗೆ ಸೇರಿಸುತ್ತಿರಲಿಲ್ಲ. ಗಂಡನ ಸ್ನೇಹಿತರು ಮನೆಗೆ ಬಂದರೂ ಗಂಡನಿಗೆ ವೀಡಿಯೋ ಕಾಲ್ ಮಾಡಿ ಖಚಿತಪಡಿಸಿಕೊಂಡ ಮೇಲೆ ಒಳಗೆ ಕರೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಪರಿಚಿತರಿಂದಲೇ ಈ ಕೃತ್ಯ ನಡೆದಿರಬಹುದು ಎನ್ನುವ ಸಂಶಯ ದೃಢವಾಗಿತ್ತು. ಕಳವು ಮಾಡುವ ಉದ್ದೇಶ ಹೊಂದಿದ್ದರೇ ಎಲ್ಲಾ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗುವ ಬದಲಿಗೆ ಕೆಲವನ್ನು ಮಾತ್ರ ಕದ್ದೊಯ್ದಿರುವುದು ಕೊಲೆಯ ಹಿಂದಿನ ಉದ್ದೇಶವನ್ನು ಬೇರೆಯದೇ ಇದೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿತ್ತು. ಕುಂದಾಪ್ರ ಡಾಟ್ ಕಾಂ ವರದಿ.

ಪೋಲೀಸರು ಇವರ ಕಾಲ್ ಡೀಟೈಲ್ಸ್ ತೆಗೆದಾಗ ಯಾವುದೇ ಸಂಶಯಿತ ವ್ಯಕ್ತಿಯ ಮೊಬೈಲ್ ಸಂಖ್ಯೆ ದೊರಕಿರಲಿಲ್ಲ. ಫ್ಲ್ಯಾಟ್ನಲ್ಲಿ ಸಿಸಿ ಕ್ಯಾಮರ ಕೂಡ ಇಲ್ಲವಾದ್ದರಿಂದ ಪೋಲೀಸರಿಗೆ ಈ ಮನೆಗೆ ಯಾರು ಬಂದು ಹೋದರು ಎನ್ನುವ ಮಾಹಿತಿ ಆರಂಭದಲ್ಲಿ ಲಭಿಸಿರಲಿಲ್ಲ. ಘಟನೆಗೆ ಸಂಬಂಧಿಸಿ ಬಾಡಿಗೆಗೆ ಬಂದ ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಆತ ತಾನು ಗುಜ್ಜಾಡಿಯಿಂದ ಪುನಃ ಅಪಾರ್ಟ್ಮೆಂಟ್ಗೆ ಬಿಟ್ಟು ವಾಪಾಸಾಗಿರುವುದಾಗಿ ತಿಳಿಸಿದ್ದ.

ಗಂಡನ ಆಸ್ತಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ವಿಶಾಲ ಅದೇ ವಿಚಾರಕ್ಕೆ ಕೊಲೆಯಾಗಿರಬಹುದು ಎಂಬ ಶಂಕೆ ಇತ್ತಾದರೂ ಅದರ ಬಗ್ಗೆ ಹೆಚ್ಚಿನ ಲೀಡ್ ದೊರೆತಿರಲಿಲ್ಲ. ಆಕೆಯ ಗಂಡನನ್ನೇ ವಿಚಾರಣೆಗೆ ಒಳಪಡಿಸಿದಾಗ ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬ ಅಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ. ದುಬೈನಲ್ಲಿದ್ದ ಗಂಡನೇ ಮಾಸ್ಟರ್ ಪ್ಲಾನ್ ಮಾಡಿ ಇಬ್ಬರು ವ್ಯಕ್ತಿಗಳಿಗೆ ಸುಪಾರಿ ನೀಡಿ ಕೊಲೆ ಮಾಡಿರುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ.

ಪ್ರಕರಣದ ಸೂತ್ರದಾರ ಎನ್ನಲಾಗಿರುವ ಪತಿ ರಾಮಕೃಷ್ಣ ಗಾಣಿಗ ಏನೂ ತಿಳಿಯದವನಂತೆ ನಟಿಸಿ ದುಬೈನಿಂದ ಬಂದು  ಬಿಜೂರಿನಲ್ಲಿ ಪತ್ನಿಯ ಅಂತ್ಯ ಸಂಸ್ಕಾರ ಮಾಡಿದ್ದ. ಗಂಡನ ಷಡ್ಯಂತ್ರ ಅರಿಯದ ಪತ್ನಿ ವಿಶಾಲರನ್ನು ಮರಳಿ ಬ್ರಹ್ಮಾವರಕ್ಕೆ ಬರುವಂತೆ ಮಾಡಿ ಬಾಡಿಗೆ ಕೊಲೆಗಾರರ ಮೂಲಕ ಸಲೀಸಾಗಿ ಕೆಲಸ ಮುಗಿಸಿದ್ದ ಎನ್ನಲಾಗುತ್ತಿದೆ.

ಪ್ರಕರಣದ ತನಿಖೆಗೆ ನಾಲ್ಕು ತಂಡ:
ಹಗಲಲ್ಲೇ ನಡೆದ ಈ ಕೊಲೆಯ ಬಗ್ಗೆ ಬ್ರಹ್ಮಾವರ ಪೋಲೀಸರು ಕಳೆದೊಂದು ವಾರದಿಂದ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ನಾಲ್ಕು ತಂಡ ತನಿಕೆ ಕೈಗೊಂಡಿದ್ದರು. ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ಸಿಪಿಐ ಅನಂತಪಧ್ಮನಾಭ, ಉಡುಪಿ ಸಿಪಿಐ ಮಂಜುನಾಥ್, ಮಣಿಪಾಲ ಠಾಣೆ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ. ಮತ್ತು ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತ್ರತ್ವದಲ್ಲಿ ತಂಡ ರಚನೆಯಾಗಿತ್ತು.

ಗುಜ್ಜಾಡಿ ನಾಯಕವಾಡಿಯ ವಾಸು ಗಾಣಿಗ ಅವರ ಕೊನೆಯ ಮಗಳು ವಿಶಾಲ ಗಾಣಿಗ ಅವರು ಬಿಜೂರು ಚಾರಕೊಡ್ಲು ರಾಮಕೃಷ್ಣ ಗಾಣಿಗ ಅವರನ್ನು ವಿವಾಹವಾಗಿ ದುಬೈನಲ್ಲಿ ವಾಸವಾಗಿದ್ದರು. ಊರಿಗೆ ಬಂದಾಗ ಊರಿಗೆ ಬಂದಾಗ ಉಳಿದುಕೊಳ್ಳಲು ಕರನ್ ಪ್ರಾಪರ್ಟಿಸ್ನ ವಿಲನ್ ರೆಸಿಡೆಸ್ಸಿಯಲ್ಲಿ ಫ್ಲ್ಯಾಟ್ ಖರೀದಿಸಿದ್ದಳು. ಸುಮಾರು ಮೂರು ತಿಂಗಳ ಹಿಂದೆ ಪತಿಯ ಆಸ್ತಿಯ ದಸ್ತಾವೇಜುಗಳಿಗೆ ಸಹಿ ಹಾಕಲು ವಿಶಾಲ ಅವರ ತಂದೆ ವಾಸು ಗಾಣಿಗರಿಗೆ ಅಧಿಕಾರ ಪತ್ರವನ್ನು ನೀಡಿ ರಾಮಕೃಷ್ಣ ಮತ್ತು ವಿಶಾಲ ದುಬೈಗೆ ತೆರಳಿದ್ದರು. ಮತ್ತೆ ಜೂ.29ರಂದು ಮಗಳು ಆರ್ವಿಯೊಂದಿಗೆ ದುಬೈನಿಂದ ಹೊರಟ ವಿಶಾಲಾ ಗಾಣಿಗ ಜೂ.30ಕ್ಕೆ ಕುಮ್ರಗೋಡಿಗೆ ಬಂದಿದ್ದರು. ಜು.7ರಂದು ಆಸ್ತಿಯ ಪಾಲು ಪಟ್ಟಿ ಆಗಿದ್ದು ಘಟನೆ ನಡೆದ ದಿನ ಬೆಳಿಗ್ಗೆ ಕುಮ್ರಗೋಡಿನಿಂದ ತಂದೆ ತಾಯಿ ಮತ್ತು ಮಗಳೊಂದಿಗ ರಿಕ್ಷಾದಲ್ಲಿ ಗುಜ್ಜಾಡಿಗೆ ಬಂದಿದ್ದರು. ನಂತರ ಬ್ರಹ್ಮಾವರದ ಕೆನರಾ ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿ ಗಂಡನ ಮನೆಗೆ ಕೊಟ್ಟು ಬರುತ್ತೇನೆ ಎಂದು ಅದೇ ರಿಕ್ಷಾದಲ್ಲಿ ವಾಪಾಸು ಹೋಗಿದ್ದರು. /ಕುಂದಾಪ್ರ ಡಾಟ್ ಕಾಂ ವರದಿ/

ಇದನ್ನೂ ಓದಿ:
► ಮಗಳ ಹುಟ್ಟುಹಬ್ಬ ಮಾಡಬೇಕಿದ್ದ ಮನೆಯಲ್ಲೀಗ ಸೂತಕದ ಛಾಯೆ – https://kundapraa.com/?p=50073 .

Exit mobile version