Site icon Kundapra.com ಕುಂದಾಪ್ರ ಡಾಟ್ ಕಾಂ

ಕಾರಂತರ ವಿಚಾರ ಧಾರೆ ಇನ್ನೂ ಜೀವಂತ: ರವೀಂದ್ರ ಎಮ್. ಜೋಶಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಾರಂತರು ತಮ್ಮ ಸಾಹಿತ್ಯ ಭಂಡಾರದಲ್ಲಿ ಹಾಗೂ ತಮ್ಮ ಜೀವಿತ ಅವಧಿಯಲ್ಲಿ ಬಾಳಿ ಬದುಕಿದ ರೀತಿ ನಮಗೆಲ್ಲ ದಾರಿದೀಪವಾಗಿದ್ದು, ಅವರು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕಣ್ಮಣಿ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಎಮ್ ಜೋಷಿ ಅವರು ಹೇಳಿದರು.

ಅವರು ಕೋಟದ ಡಾ ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಭೇಟಿ ನೀಡಿ ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ರಂಗಮಂದಿರ, ಗ್ರಂಥಾಲಯ, ಆರ್ಟ್ ಗ್ಯಾಲರಿ, ಮಿನಿ ಸಭಾಂಗಣ, ವೀಕ್ಷಿಸಿದರು. ಥೀಮ್ ಪಾರ್ಕ್‌ನ ನಿರ್ವಹಣೆ ಕುರಿತು ಶ್ಲಾಘಿಸಿ ಇನ್ನಷ್ಟೂ ಅಭಿವೃದ್ಧಿ ಹೊಂದುವಂತಾಗಿ ಮಕ್ಕಳಿಗೆ ಚಟುವಟಿಕೆಯ ಕೇಂದ್ರವಾಗಿ ಬೆಳೆಯಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅವರ ಪತ್ನಿ, ಮಕ್ಕಳು, ಕೋಟ ಪೋಲಿಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ರಾಮ ದೇವಾಡಿಗ, ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಸಿಬ್ಬಂದಿ ಸುಜಾತ ಉಪಸ್ಥಿತರಿದ್ದರು.

Exit mobile version