ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಡ್ತಾಡಿ ಯುವವಾಹಿನಿ ಘಟಕದಿಂದ ಆಸಾಡಿಯಂಗ್ ಒಂದ್ ದಿನ ಹಳಿ ಹಂಬ್ಲ್ ಕಾರ್ಯಕ್ರಮ ನಡೆಯಿತು.
ನಾವೆಲ್ಲ ಎಷ್ಟೆಷ್ಟೋ ಹಳೆ ನೆನಪುಗಳನ್ನು ಮರೆಯುತ್ತಾ ಕೆಲಸದ ಜಂಜಾಟದಲ್ಲಿ ಸಿಲುಕಿದ್ದೇವೆ. ಹಿರಿಯರು ಕೂಡಿ ಸಂಭ್ರಮಿಸುತ್ತಿದ್ದ ರೀತಿ ರಿವಾಜುಗಳನ್ನು ಮೂಲೆ ಗುಂಪಾಗಿರಿಸಿದ್ದೇವೆ. ನಮ್ಮ ಸಂಸ್ಕೃತಿ ಆಚರಣೆಗಳು ನಮಗೆ ತಿಳಿಯದೆ ಮೌನವಾಗಿ ಜೀವನ ಸಾಗಿಸುತ್ತಿದ್ದೆವೆ. ಈ ಬದುಕು ಅಲ್ಪ ಅನಿಸಿದರೂ ಸಂಭ್ರಮಿಸುವ ಸಂಭ್ರಮ ನಮ್ಮಲಿಲ್ಲ. ಮುಂದಿನ ಯುವ ಮನಸ್ಸುಗಳಿಗೆ ಇದನ್ನು ತಲುಪಿಸಿ ಪೂರ್ವಜರ ಆಚಾರ ವಿಚಾರಗಳನ್ನು ಕೊಡುಗೆಗಳನ್ನು ತಿಳಿಸುವ ಜವಬ್ದಾರಿ ನಮ್ಮ ಮೇಲಿರುವುದು ಸುಳ್ಳಲ್ಲ ಈ ಉದ್ದೇಶವಿಟ್ಟುಕೊಂಡು ಯುವವಾಹಿನಿ ರಿ. ಯಡ್ತಾಡಿ ಘಟಕ ಹಳೆ ಹಂಬ್ಲ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.
64ಖಾದ್ಯಗಳ ವಿಶೇಷ ತಿನಿಸು ಯುವ ವಾಹಿನಿ ಸದಸ್ಯರು ತಮ್ಮ ತಮ್ಮ ಮನೆಯಲ್ಲಿ ತಯಾರಿಸಿ ಒಟ್ಟು64 ತಿಂಡಿ-ತಿನಿಸು-ಪದಾರ್ಥಗಳು ಎಲ್ಲರ ಗಮನ ಸೆಳೆಯಿತು. ಹಳೆ ಕಾಲದಲ್ಲಿ ಮನೆಯಲ್ಲಿ ಮಾಡುತ್ತಿದ್ದ ದಾಸನ್ ಸಪ್ಪಿನ್ ಹಿಟ್, ಪತ್ರೋಡಿ,ಹೊರಳಿ ಬಜ್ಜಿ,ಕ್ಯಾನಿಗೆಂಡಿ ಹಿಟ್,ನುಗ್ಗಿ ಸೊಪಪ್ಪಿನ್ ಒಗ್ರಣಿ, ಬಾಳಿ ದಿಂಡಿನ್ ಪಲ್ಯ,ಶೂಂಠಿ ಊಂಡಿ, ಮಳಿ ಪಲ್ಯ, ಗೆಣ್ಗ ಒಗ್ಗರಿಸಿದ್, ಮೆತ್ತಿ ಗಂಜಿಹೊರಳಿ ಸಾರ್, ಹೀಗೆ ವಿವಿಧ ಬಗೆಯ ಚಟ್ನಿ, ಪಲ್ಯ, ಸಾರು, ಪಾಯಸ, ವಿವಿಧ ಕಷಾಯಗಳು, ಹೊಸ ಸಂಚಲನ ಮೂಡಿಸಿದವು.
ಆಟೋಟ ಸ್ಪರ್ಧೆ
ಮಹಿಳೆಯರಿಗೆ ಹಾಗೂ ಮಕ್ಕಳ ಸಂಭ್ರಮಕ್ಕಾಗಿ ಆಟೋಟ ಸ್ಫರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಎಲ್ಲ ಮಹಿಳೆರು ಮಕ್ಕಳು ಖುಷಿಯಾಗಿ ನಲಿದಾಡಿದರು. ಹಳೆ ಕಾಲದ ಆಟೋಟಗಳು ಅದು ಎಂಬುವುದು ಒಂದು ವಿಶೇಷ.
ಮಹಿಳೆಯರ ಸ್ವಾವಲಂಬನೆಗೆ ಅವಕಾಶ ನೀಡಿ: ಸಾಹಿತಿ ಬಾಬು ಶಿವ ಪೂಜಾರಿ
ಮಹಿಳೆಯರು ಸ್ವಾವಲಂಬನ ಜೀವನ ನಡೆಸಲು ಎಲ್ಲರೂ ಪ್ರೋತ್ಸಾಹ ಮಾಡಬೇಕು, ಅವರಲ್ಲಿರುವ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ಬರುವಂತೆ ಪ್ರೇರೆಸುವುದು ನಮ್ಮ ಕರ್ತವ್ಯ, ಸಂಘಟನೆಯ ಮೂಲ ಧ್ಯೇಯ ಒಗ್ಗಟ್ಟಾಗಿರಬೇಕು, ವೈಮನಸ್ಸು ಸಂಘಟನೆಯಲ್ಲಿಯೇ ನಿವಾರಿಸಿಕೊಂಡು ಸಂಘಟನೆಯ ಮೂಲಕ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿ ಸಾಹಿತಿ ಬಾಬು ಶಿವ ಪೂಜಾರಿ ಅವರು ಹೇಳಿದರು. ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಯುವವಾಹಿನಿ ಘಟಕದ ಅಧ್ಯಕ್ಷ ಶ್ರೀರಾಜು ಪೂಜಾರಿ, ಸಾಹಿತಿ-ಶಿಕ್ಷಕ ನರೇಂದ್ರ ಕುಮಾರ್ ಕೋಟ, ಕ.ಸಾ.ಪ ಕೋಟ ಹೋಬಳಿಯ ಅಧ್ಯಕ್ಷ ಸತೀಶ್ ವಡ್ಡರ್ಸೆ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ರಿತೇಶ್ ಕುಮಾರ್ ಕಟಪಾಡಿ ಪೂಜಾರಿ, ಶಿಕ್ಷಕ ಅಲ್ತಾರು ನಾಗರಾಜ, ಸ್ವಾಗತ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಎನ್ ಪೂಜಾರಿ, ಬಾರಕೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಜಯನಂದ ಎಮ್ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವವಾಹಿನಿ ಯಡ್ತಾಡಿ ಘಟಕದ ಕಾರ್ಯದರ್ಶಿ ಅಜಿತ್ ಕುಮಾರ್ ಸ್ವಾಗತಿಸಿ, ಮಾಜಿ ಅಧ್ಯಕ್ಷ ಅಣ್ಣಪ್ಪ ಪೂಜಾರಿ ವಂದಿಸಿ, ಪ್ರತೀಮಾ ರಮೇಶ್ ಪೂಜಾರಿ ಹಾಗೂ ಅನುಷಾ ಯಡ್ತಾಡಿ ನಿರೂಪಿಸಿದರು.