Kundapra.com ಕುಂದಾಪ್ರ ಡಾಟ್ ಕಾಂ

ಕಾರಂತರ ಹೆಜ್ಜೆ ಗುರುತುಗಳು ಶಾಶ್ವತ: ಎ.ಎಸ್.ಎನ್. ಹೆಬ್ಬಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಕಾರಂತರು ಬದುಕಿದ ರೀತಿ, ಅವರು ಜೀವಿತಾವಧಿ ನಂತರ ಬಿಟ್ಟು ಹೋದ ಹೆಜ್ಜೆಗುರುತುಗಳು ಮುಂದಿನ ಜನಾಂಗಕ್ಕೆ ದಾರಿ ದೀಪವಾಗಲಿ, ಅವರ ನೆನಪು ಶಾಶ್ವತವಾಗುವ ನಿಟ್ಟಿನಲ್ಲಿ ಕೋಟದ ಕಾರಂತ ಥೀಮ್ ಪಾರ್ಕ್ ಸ್ಥಾಪನೆಯ ಉದ್ದೇಶ ಸಾಕಾರಗೊಳ್ಳುತ್ತಿರುವುದು ಸಂಭ್ರಮದ ವಿಷಯ ಎಂದು ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರು ಹೇಳಿದರು.

ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17ನೇ ವರುಷದ ಸಂಭ್ರಮದ ಸಾಹಿತ್ಯಕ -ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021(ಎಣೆಯಿಲ್ಲದ ಚಕಿತ) ಕಾರ್ಯಕ್ರಮದಲ್ಲಿ ನುಡಿ ಚೇತನದಲ್ಲಿ ಮಾತನಾಡಿದರು.

ಕಾರಂತ ಸಮಾಧಿ ನಿರ್ಮಾಣವಾಗಲಿ:
ಕಾರಂತರು ನಮ್ಮೊಳಗಿನ ಮಹಾನ್ ಚೈತನ್ಯ ಅವರ ಅಂತ್ಯ ಸಂಸ್ಕಾರವಾದ ಸ್ಥಳದಲ್ಲಿ ಸಮಾಧಿ ನಿರ್ಮಾಣವಾಗಿ ಕಾರಂತ ಅಭಿಮಾನಿ-ಸಾಹಿತ್ಯ ಪ್ರೇಮಿಗಳಿಗೆ ನೋಡುವ ಭಾಗ್ಯ ಸಿಗಲಿ ಎಂದು ಹೇಳಿದರು.

ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಅವರು ನಿರೂಪಿಸಿದರು.

Exit mobile version