Kundapra.com ಕುಂದಾಪ್ರ ಡಾಟ್ ಕಾಂ

ಸಾಹಿತ್ಯಕ್ಕೆ ಚೌಕಟ್ಟಿನ ಹಂಗಿರಬಾರದು: ಅರ್ಚನಾ ಆರ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಸಾಹಿತ್ಯವನ್ನು ಚೌಕಟ್ಟಿನಲ್ಲಿ ಬಂಧಿಸದೇ ಸ್ವತಂತ್ರವಾಗಿ ಸಾಹಿತ್ಯ ರಚನೆಗೆ ತೊಡಗಿಸಿಕೊಂಡಾಗ ಉತ್ತಮ ಸಾಹಿತ್ಯ ಅನಾವರಣಗೊಳ್ಳಲು ಸಾಧ್ಯ, ಸಾಹಿತ್ಯ ಕೃತಿ ಸಂವಾಹನ ಕ್ರಿಯೆ ಆಗಬೇಕಾಗುತ್ತದೆ ಪರಿಸ್ಥಿತಿಗೆ ತಕ್ಕ ಸುತ್ತಲಿನ ಪರಿಸ್ಥಿತಿ ಹೇಗೆ ಇತ್ತು ಆ ಪರಿಸರ ಹೇಗೆ ಮಾರ್ಗದರ್ಶನ ನೀಡುತ್ತಿತ್ತು ಆ ಪರಿಸರದಲ್ಲಿದ್ದ ಭಾಷೆ ಸಂವಹನಕ್ಕೆ ಒಳಪಟ್ಟಗ ಯಾವ ರೀತಿ ಮಾರ್ಪಟು ಹೊಂದುತ್ತಿತ್ತು ಈ ಎಲ್ಲಾ ವಿಚಾರಗಳು ಒಂದು ಸಾಹಿತ್ಯದ ಕೃತಿಯಿಂದ ತಿಳಿಯಲ್ಪಡುತ್ತದೆ. ಲೇಖಕನ ಭಾವನೆಗಳೇ ಅಕ್ಷರ ರೂಪದ ಸಾಹಿತ್ಯ ಎಂದು ಕನ್ನಡ ಉಪನ್ಯಾಸಕಿ, ಪರ್ಯಟಕಿ ಅರ್ಚನ ಆರ್ಯ ಅವರು ಹೇಳಿದರು.

ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17ನೇ ವರುಷದ ಸಂಭ್ರಮದ ಸಾಹ್ಯಿತ್ಯಿಕ -ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021(ಎಣೆಯಿಲ್ಲದ ಚಕಿತ) ಕಾರ್ಯಕ್ರಮದ ನಾಲ್ಕನೇ ದಿನದ ನುಡಿ ಚೇತನದಲ್ಲಿ ಮಾತನಾಡಿದರು.

ಆಯಾಕಾಲದ ಪ್ರಚೋದನೆಗಳಿಗೆ ಪ್ರತಿಕ್ರೀಯೆ ಅನ್ನೋ ಹಾಗೆ ಹೊರಹೊಮ್ಮಿದ ವಿಚಾರಗಳೇ ಸಾಹಿತ್ಯ ಸಾಹಿತ್ಯಗಳು ನಮ್ಮೊಳಗಿನ ಭಾವನೆಗಳದಾಗ ಹೆಚ್ಚು ಜನರನ್ನು ತಲುಪಲು ಸಾಧ್ಯ, ಕನ್ನಡಿಯ ಪ್ರತಿಬಿಂಬದಂತೆ ಸಾಹಿತ್ಯವಿರಬೇಕು, ಅದು ಆತ್ಮ ನಿರೀಕ್ಷೆಗೆ ಒಳಡಿಸುತ್ತಿರಬೇಕು ಎಂದರು. ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ನಿರೂಸಿದರು.

Exit mobile version