Kundapra.com ಕುಂದಾಪ್ರ ಡಾಟ್ ಕಾಂ

ಕಾರಂತರು ಸಮುದ್ರದಂತೆ ಅಗೆದಷ್ಟು ಮುತ್ತು: ಪ್ರಕಾಶ್ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಕಾರಂತರು ಸಮುದ್ರದಂತೆ ಅಗೆದಷ್ಟು ಮುತ್ತು ಕಾಣಿಸುವಂತ ವ್ಯಕ್ತಿತ್ವ, ನಮ್ಮ ಊಹೆಗೆ ನಿಲುಕದಂತವರು. ಪರಿಸರವನ್ನೇ ಶಾಲೆ ಎಂದು ಪರಿಸರದ ಮಹತ್ವವನ್ನು ಸಮಾಜಕ್ಕೆ ತಿಳಿಸಿದ ಕಾರಂತರು , ಕೋಟ ಅಂತಹ ಚಿಕ್ಕ ಊರನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿ ನಮ್ಮೂರಿಗೆ ಹೆಮ್ಮೆ ತಂದ ಕಾರಂತರ ನೆನಪಿನಲ್ಲಿ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಿ ಕಾರಂತ ಥೀಮ್ ನಿರ್ಮಾಣ ಮಾಡಿರುವುದು ಶ್ಲಾಘನೀಯ ಕೆಲಸ ಎಂದು ಕಾರಂತ ಪ್ರತಿಷ್ಠಾನದ ಟ್ರಸ್ಟಿ ಪ್ರಕಾಶ್ ಭಟ್ ಹೇಳಿದರು.

ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್(ರಿ)ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17ನೇ ವರುಷದ ಸಂಭ್ರಮದ ಸಾಹ್ಯಿತ್ಯಿಕ -ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021(ಎಣೆಯಿಲ್ಲದ ಚಕಿತ) ಕಾರ್ಯಕ್ರಮದ ಏಳನೇ ದಿನದ ಕಾರಂತ ಚಿಂತನ ಹಾಗೂ ಗಮ್ಜಲ್ ಕುಂದಾಪ್ರ ಕನ್ನಡ ಹರಟೆ ತಂಡದವರಿಂದ ಹರಟೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ಪ್ರಮೋದ್ ಹಂದೆ ಅವರು ಕಾರಂತನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಾರಂತ ಥೀಮ್ ಪಾರ್ಕ್‌ನಲ್ಲಿ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಕಾರಂತರ ನೇರ ನುಡಿಗಳೇ ಕಾರಂತ ಶಕ್ತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ ವಹಿಸಿದ್ದು ವೇದಿಕೆಯಲ್ಲಿ ಸದಸ್ಯೆ ಜ್ಯೋತಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮ ಸ್ವಾಗತಿಸಿ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾಪಿಸಿ, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ಶೈಲಾ ಎಸ್ ಪೂಜಾರಿ ಅವರು ವಂದಿಸಿ ಪಂಚಾಯತ್ ಸದಸ್ಯೆ ಕುಮಾರಿ ಪೂಜಾ ಹಂದಟ್ಟು ನಿರೂಪಿಸಿದರು.

Exit mobile version