Kundapra.com ಕುಂದಾಪ್ರ ಡಾಟ್ ಕಾಂ

ಕಾಮನ್‌ವೆಲ್ತ್ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್: ಬೆಳ್ಳಿ ಗೆದ್ದ ಗುರುರಾಜ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಜ್ಬೇಕಿಸ್ತಾನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ವೆಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ತಾಲೂಕಿನ ವಂಡ್ಸೆ ಜೆಡ್ಡುವಿನ ಗುರುರಾಜ ಪೂಜಾರಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಗುರುರಾಜ್ ಮೊದಲ ಬಾರಿ ವೆಯ್ಟ್ ಲಿಫ್ಟಿಂಗ್‌ನಲ್ಲಿ 61 ಕೇಜಿ ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ. 117 ಸ್ನ್ಯಾಚ್, 148 ಕ್ಲೀನ್ & ಜೆರ್ಕ್ ಪಾಯಿಂಟ್ ದಾಖಲಿಸಿ ಬೆಳ್ಳಿ ಪದಕ ಗೆದ್ದುಕೊಂಡರು.

ಉಜ್ಬೇಕಿಸ್ತಾನ್‌ನ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್, 2022ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಅರ್ಹತಾ ಸುತ್ತಿನ ಆಟವಾಗಿದೆ. ಗುರುರಾಜ್ ತಾಲೂಕು ವಂಡ್ಸೆ ಗ್ರಾಮ ಜೆಡ್ಡು ಮಹಾಬಲ ಪೂಜಾರಿ ಹಾಗೂ ಪದ್ದು ಪೂಜಾರಿ ಪುತ್ರ ಗುರುರಾಜ್ ವಾಯುಸೇನೆ ಉದ್ಯೋಗಿಯಾಗಿದ್ದಾರೆ.

ಇದನ್ನೂ ಓದಿ:
► ಕುಂದಾಪುರ ಚಿತ್ತೂರಿನ ಗುರುರಾಜ್ ಪೂಜಾರಿಗೆ ಏಕಲವ್ಯ ಪ್ರಶಸ್ತಿ – https://kundapraa.com/?p=27689 .
► ಕಾಮನ್ವೆಲ್ತ್ ಗೇಮ್ಸ್: ವೆಯ್ಟ್ ಲಿಫ್ಟಿಂಗ್’ನಲ್ಲಿ ಬೆಳ್ಳಿ ಗೆದ್ದ ಕುಂದಾಪುರದ ಗುರುರಾಜ್ ಪೂಜಾರಿ – https://kundapraa.com/?p=28094 .
► ಕಾಮನ್‌ವೆಲ್ತ್ ವೇಯ್ಟ್ ಲಿಫ್ಟಿಂಗ್: ಕುಂದಾಪುರ ಗುರುರಾಜ್ ಪೂಜಾರಿಗೆ ಚಿನ್ನ – https://kundapraa.com/?p=18493 .

Exit mobile version