ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿಜಾಬ್- ಕೇಸರಿ ವಿವಾದದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ರೂಟ್ ಮಾರ್ಚ್ ನಡೆಸಿದರು.
ಗಂಗೊಳ್ಳಿ ಗ್ರಾಮದ ಮೇಲ್ ಗಂಗೊಳ್ಳಿ, ಜಾಮಿಯಾ ಮೊಹಲ್ಲಾ, ಸುಲ್ತಾನ್ ಮೊಹಲ್ಲಾ, ಚರ್ಚ್ ರೋಡ್, ಎಸ್. ವಿ ಕಾಲೇಜು ರಸ್ತೆ, ಬಂದರು ರಸ್ತೆಯಲ್ಲಿ ಶನಿವಾರ ಪೊಲೀಸ್ ಪಥ ಸಂಚಲನ ನಡೆಸಿದರು.
ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ ಗಂಗೊಳ್ಳಿ ಪಿಎಸ್ಐ ನಂಜಾ ನಾಯ್ಕ್, ಬೈಂದೂರು ಠಾಣೆ ಪಿಎಸ್ಐ ಪವನ್ ನಾಯ್ಕ್, ಕೊಲ್ಲೂರು ಠಾಣೆ ಪಿಎಸ್ಐ ಹೀರಣ್ಣ ಶಿರಗುಂಟೆ, ಟ್ರಾಫಿಕ್ ಠಾಣೆ ಪಿಎಸ್ಐ ಸುಧಾಪ್ರಭು ಸೇರಿದಂತೆ ಪೊಲೀಸ್ ಸಹಾಯಕ ಉಪನಿರೀಕ್ಷಕರುಗಳು, ಸಿಬ್ಬಂದಿಗಳು, ಕೆ.ಎಸ್.ಆರ್.ಪಿ ಮಹಿಳಾ ವಿಭಾಗದ ಪೊಲೀಸರು ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:
► ಕುಂದಾಪುರ: ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರಿಂದ ರೂಟ್ ಮಾರ್ಚ್ – https://kundapraa.com/?p=57377 .