Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಯುವಾ ಬ್ರಿಗೇಡ್ ನೇತೃತ್ವದಲ್ಲಿ ಬಾರಕೂರು ಶ್ರೀ ಗೌರೀಶ್ವರ ದೇವಸ್ಥಾನ ಸ್ವಚ್ಛತಾ ಕಾರ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಬಾರಕೂರು ಚೌಳಿ ಕೆರೆಯ ಸಮೀಪದ ಶ್ರೀ ಗೌರೀಶ್ವರ ದೇವಸ್ಥಾನದ ಸ್ವಚ್ಛತಾ ಕಾರ್ಯ ಯುವಾ ಬ್ರಿಗೇಡ್ ಕುಂದಾಪುರ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಭಾನುವಾರ ನಡೆಯಿತು.

ಕ್ರಿ.ಶ.11ನೇ ಶತಮಾನದ್ದೆಂದು ಹೇಳಲಾಗುತ್ತಿರುವ ಶ್ರೀ ಗೌರೀಶ್ವರ ದೇವಸ್ಥಾನ ಹಿಂದೆ ವೈಭವದಿಂದ ಮೆರೆದ ದೇಗುಲವಾಗಿದೆ. ಇಲ್ಲಿಯ ಮಿಥುನ ನಾಗ ಶಿಲ್ಪ, ಅವಳೀ ನಾಗ ಶಿಲ್ಪ, ಬಿಳಿಯ ಶಿಲೆಯಿಂದ ಶ್ರೀ ಗೌರೀಶ್ವರ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ. ಶೈವ ಹಾಗೂ ವೈಷ್ಣವ ದೇವಾಲಯ ಇರುವ ಅಪರೂಪದ ಸಂಗಮ ಸ್ಥಳದಂತಿದೆ ಈ ದೇಗುಲ. ಶಾಸನ ಉಲ್ಲೇಖದಂತೆ ಬಾರಕನ್ಯಾಪುರವೆಂದು ಕರೆಯಲ್ಪಡುವ ಈ ಊರು ಪ್ರವಾಸಿಗರ ನೆಚ್ಚಿನ ಕೇಂದ್ರದ ಸ್ಥಳದಂತೆ ಕಾಣಲ್ಪಟ್ಟಿದೆ. ಹಾಗಾಗಿ

ಈ ಸಂದಭ೯ದಲ್ಲಿ ಯುವಾ ಬ್ರಿಗೇಡ್ ನ ನಿರಂಜನ್ ಶೆಟ್ಟಿ ತಲ್ಲೂರು, ಪ್ರಮೋದ್, ಪ್ರದೀಪ, ಶಶಿ ,ಸುಬ್ರಹ್ಮಣ್ಯ, ಇತಿಹಾಸ ಉಪನ್ಯಾಸಕರು ಆಗಿರುವ ಅರುಣ್ ಕುಮಾರ್, ಸತೀಶ್ ಗುಂಡ್ಮಿ,ಭರತ್ ಗುಡಿಗಾರ್,ಪ್ರಶಾಂತ್ ಖಾವಿ೯ ಉಪಸ್ಥಿತರಿದ್ದರು.

Exit mobile version