Kundapra.com ಕುಂದಾಪ್ರ ಡಾಟ್ ಕಾಂ

ಮಾ.6ಕ್ಕೆ ‘ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್’ ಕೃತಿ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಮಾಜಿ ಸೈನಿಕ, ಲೇಖಕ ಬೈಂದೂರು ಚಂದ್ರಶೇಖರ ನಾವಡ ಅವರ ಕೃತಿ ‘ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್‘ ಬಿಡುಗಡೆ ಸಮರಂಭ ಮಾ. 6ರ ಮಧ್ಯಾಹ್ನ 3:30ಕ್ಕೆ ಉಪ್ಪುಂದದ ರೈತಸಿರಿ ಸಭಾಭವನದಲ್ಲಿ ಜರುಗಲಿದೆ.

ಭಾರತೀಯ ಸೇನೆಯನ್ನು ಸ್ವಾವಲಂಬಿ ಮತ್ತು ಶಕ್ತಿಶಾಲಿಯಾಗಿಸಲು ಸೇವಾಕಾಲದುದ್ದಕ್ಕೂ ಶ್ರಮಿಸುತ್ತಾ 2021 ಡಿ.8 ರಂದು ಹೆಲಿಕಾಪ್ಟರ್ ದುರ್ಘಟನೆಯಲ್ಲಿ ವಿಧಿವಶರಾದ ಪದ್ಮವಿಭೂಷಣ ಸಿಡಿಎಸ್ ಜ. ಬಿಪಿನ್ ರಾವತ್ ಅವರ ಪ್ರೇರಣಾದಾಯಿ ವ್ಯಕ್ತಿತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಬೈಂದೂರು ಚಂದ್ರಶೇಖರ ನಾವಡ ಅವರು ‘ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್‘ ಕೃತಿ ಬರೆದಿದ್ದು, ಮಂಗಳೂರಿನ ಅವನಿ ಪ್ರಕಾಶನ ಪ್ರಕಟಿಸಿದ್ದಾರೆ.

ಕರ್ನಲ್ (ನಿವೃತ್ತ) ನಿಟ್ಟೆಗುತ್ತು ಶರತ್ ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಖಂಬದಕೋಣೆ ರೈ ಸೇ ಸ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಕೃತಿ ಲೋಕಾರ್ಪಣೆ ಮಾಡಲಿರುವರು. ಕುಂದಾಪುರ ಕಸಾಪ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಕೃತಿ ಪರಿಚಯ ಮಾಡಲಿರುವರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಅಡಿಗರು ಅಧ್ಯಕ್ಷತೆ ವಹಿಸಿದ್ದಾರೆ, ಬೈಂದೂರು ರೋಟರಿ ಅಧ್ಯಕ್ಷ ಡಾ. ಪ್ರವೀಣ ಶೆಟ್ಟಿ, ಸಾಹಿತಿ ಪುಂಡಲೀಕ ನಾಯಕ್, ಬೈಂದೂರು ಕಸಾಪ ಅಧ್ಯಕ್ಷ ಡಾ. ರಘು ನಾಯ್ಕ್ ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದು ಲೇಖಕ ಚಂದ್ರಶೇಖರ ನಾವಡ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:
► ಬೈಂದೂರು ಚಂದ್ರಶೇಖರ ನಾವಡರ ‘ಸೇನಾನುಭವ’ ಕೃತಿ ಬಿಡುಗಡೆ – https://kundapraa.com/?p=46060 .

Exit mobile version