ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ಮೂಡುವಾರಣಾಸಿ ಚೇರ್ಕಾಡಿಯಲ್ಲಿ ಪ್ರೇರಣ ಸಾಂಸ್ಕೃತಿಕ ಕಲಾ ಟ್ರಸ್ಟ್ ವಾರ್ಷಿಕೋತ್ಸವ, ಪ್ರೇರಣ ಪ್ರಶಸ್ತಿ ಸೋಮವಾರ ಜರುಗಿತು.
ಬ್ರಹ್ಮಾವರ ತಾಲೂಕು ತಹಶಿಲ್ದಾರ್ ರಾಜಶೇಖರ ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮಲ್ಲಿ ಸಮೂಹ ನಾಯಕತ್ವದ ಕೊರತೆ ಇದೆ. ಅದು ಸಂಘ ಸಂಸ್ಥೆಯಾಗಿರಬಹುದು ಅಥವಾ ವ್ಯಕ್ತಿಯಲ್ಲಿ ಕೂಡಾ ಇರಬಹುದು ಸಾಮೂಹಿಕ ನಾಯಕತ್ವಕ್ಕೆ ಗ್ರಾಮೀಣ ಭಾಗದ ಇಂತಹ ಕಲಾ ಸಂಘಟನೆಯಿಂದ ಆರಂಭಗೊಂಡು ಊರಿಗೆ ದೇಶಕ್ಕೆ ಮಾದರಿಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ವಾಸ್ತು ಮತ್ತು ಜಲ ತಜ್ಞ ಡಾ ಅನಂತ ನಾಯ್ಕ್ ಮತ್ತು ಬ್ರಹ್ಮಾವರದಿಂದ ಕಾಲು ನಡಿಗೆಯಿಂದ ಜಮ್ಮು ಕಾಶ್ಮಿರಕ್ಕೆ ಹೋಗಿ ಇಲ್ಲಿನ ಜನಪದ ಕಲೆ ಹುಲಿ ಕುಣಿತವನ್ನು ನೀಡಿದ ಹರ್ಷೆಂದ್ರ ಆಚಾರ್ಯ ರನ್ನು ಪ್ರೇರಣ ಪ್ರಶಸ್ತಿ ೨೦೨೧ ನೀಡಿ ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್ ನಾಯ್ಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಚೇರ್ಕಾಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ, ಸದಸ್ಯರಾದ ಕಮಲಾಕ್ಷ ಹೆಬ್ಬಾರ, ಮಧುರ ನಾಯ್ಕ್, ಗೋಪಿ ಕೆ ನಾಯ್ಕ್, ಡಾ ರಾಮದಾಸ ಪ್ರಭು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಜಾ ಆರೂರು ಇವರಿಂದ ಸಂಗೀತ ಕಾರ್ಯಕ್ರಮ ಮತ್ತು ಗೋಳಿಗರಡಿ ಮೇಳದವರಿಂದ ಮಾಯದ ಗೆಜ್ಜೆ ಯಕ್ಷಗಾನ ಕಾರ್ಯಕ್ರಮ ಜರುಗಿತು.