Site icon Kundapra.com ಕುಂದಾಪ್ರ ಡಾಟ್ ಕಾಂ

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಪುತ್ರಿ ಸ್ವಾತಿಗೆ ಎಂಕಾಂನಲ್ಲಿ ತೃತೀಯ ರ್ಯಾಂಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಎಂಕಾಂ ಅಂತಿಮ ಸ್ನಾತಕೋತ್ತರ ಪರೀಕ್ಷೆಯಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ತೃತೀಯ ರಾಂಕ್ ಪಡೆದ ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವಗ೯ಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಪುತ್ರಿ ಸ್ವಾತಿ ಪೂಜಾರಿ ಅವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ವಿದ್ಯಾಥಿ೯ಯ ಮನೆಗೆ ತೆರಳಿ ಸನ್ಮಾನಿಸಲಾಯಿತು.

ಸನ್ಮಾನಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸಂಟ್ ಆಳ್ವ ಮಾತನಾಡಿ, ತಂದೆ ತಾಯಿಯ ಸರಳ ಸಜ್ಜನಿಕೆ ಆಚಾರ-ವಿಚಾರಗಳಿಂದ ಪ್ರಭಾವಿತರಾಗಿ, ಯಾವತ್ತು ಸಚಿವರ ಪುತ್ರಿ ಎಂದು ಹೇಳಿಕೊಳ್ಳದೆ ಕಾಲೇಜಿಗೆ ದೊಡ್ಡ ಕೀರ್ತಿ ತಂದು ಕೊಟ್ಟು ನಮ್ಮ ಎಲ್ಲಾ ವಿಧ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ, ಮಾತನಾಡಿದ ಸ್ವಾತಿ ಪೂಜಾರಿ ಮಾತನಾಡಿ ನನ್ನ ಯಶಸ್ವಿಗೆ ಕಾರಣೀಕತ೯ರಾದ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ನನ್ನ ಎಲ್ಲಾ ಮಿತ್ರರಿಗೂ ವಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಸಿ. ಜಯರಾಮ್ ಶೆಟ್ಟಿಗಾರ ಕಾಯ೯ಕ್ರಮವನ್ನು ಸಂಯೋಜಿಸಿದ್ದರು. ಪ್ರೊ. ಸೋಫಿಯಾ ಡಯಾಸ್. ಮಹಿಳಾ ಪ್ರಕೋಷ್ಠದ ಸಂಚಾಲಕಿ ಪ್ರೊ. ರೇಶ್ಮಾ, ಸಾವ೯ಜನಿಕ ಸಂಪಕಾ೯ಧಿಕಾರಿ ಪ್ರೊ. ರವಿನಂದನ್, ಶಾಂತಾ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.

Exit mobile version