Kundapra.com ಕುಂದಾಪ್ರ ಡಾಟ್ ಕಾಂ

ಆಸ್ಪತ್ರೆಯಲ್ಲಿದ್ದುಕೊಂಡೇ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ 580 ಅಂಕ ಪಡೆದ ಶ್ರಾವ್ಯಾ!

ಪ್ರಕೃತಿ ವಿಕೋಪ ಸಂತೃಸ್ತರ ನೆರವಿಗೆ ನಿಂತಿದ್ದ ಬಾಲಕಿ ಈಗ ಅಸಹಾಯಕಿ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ:
ತಾಲೂಕು ಹಕ್ಲಾಡಿ ಗ್ರಾಮದ ಬಗ್ವಾಡಿಯ ಈ ಯುವತಿ ಅನಾರೋಗ್ಯದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿ ಇದೀಗ ಪ್ರಥಮ ಶೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

ಕಳೆದ ಶೈಕ್ಷಣಿಕ ಸಾಲಿನ ಜುಲೈಯಿಂದ ಮೂರು ತಿಂಗಳು ಹಾಗೂ ಆಕ್ಟೋಬರ್‌ನಿಂದ ಮೂರು ತಿಂಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಗ್ವಾಡಿಯ ರಾಜು ಪೂಜಾರಿ ಮತ್ತು ಸುಜಾತಾ ಪೂಜಾರಿ ದಂಪತಿಗಳ ಪುತ್ರಿ ಶ್ರಾವ್ಯಾ ಆರ್. (15), ಶಾಲೆಗೆ ತೆರಳದೇ ನೋಟ್ಸ್ ಜೆರಾಕ್ಸ್ ಪ್ರತಿಯನ್ನು ಮಲಗಿಕೊಂಡೇ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.92.64 ಅಂಕಗಳಿಸಿ ಸಾಧನೆಗೈದಿದ್ದಾಳೆ.

ಶ್ರಾವ್ಯ ತಂದೆ ತಾಯಿ ಹೆಮ್ಮಾಡಿಯಲ್ಲಿ ಚಿಕ್ಕ ಫಾಸ್ಟ್ ಫುಟ್ ಅಂಗಡಿ ನಡೆಸುತ್ತಿದ್ದಾರೆ. ಅತ್ರಾಡಿ ಮಕ್ಕಳ ಕೂಟ ಶಾಲೆಗೆ ದಾಖಲಾಗಿ ಎಸ್‌ಎಸ್‌ಎಲ್‌ಸಿ ಪೂರೈಸಿದ್ದಾಳೆ. ಎಲ್ಲರಂತೆ ಚೂಟಿಯಾಗಿದ್ದ ಶ್ರಾವ್ಯ ಕರಳು ಸಂಬಂಧಿ ಅನಾರೋಗ್ಯದಿಂದ (ಐಬಿಡಿ ಕ್ರೋಮ್ಸ್) ದೇಹದ ತೂಕ ಕಳೆದುಕೊಂಡಿದ್ದಾಳೆ.

ಅತ್ರಾಡಿ ಮಕ್ಕಳ ಕೂಟ ಶಾಲಾ ಸಂಚಾಲಕ ಸುಭಾಸ್ ಶೆಟ್ಟಿ ಹಾಗೂ ದೀಪಿಕಾ ಶೆಟ್ಟಿ ಶ್ರಾವ್ಯ ದೈಹಿಕ ಅಸಮಾನತೆ ನಡೆಯೂ ಓದಿನ ತುಡಿತ ಕಂಡು ಶಾಲಾ ನೋಟ್ಸ್ ಹಾಗೂ ಅನ್‌ಲೈನ್ ಪಾಠದ ಜರಾಕ್ಸ್ ಕಾಪಿ ನೀಡುವ ಮೂಲಕ ಸಹಕರಿಸಿದ್ದಾರೆ. ಒಟ್ಟಾರೆ ಎಲ್ಲ ಸರಿಯಿದ್ದೂ ಎಲ್ಲಾ ಸೌಲತ್ತು ಸಿಕ್ಕರೂ ಶಿಕ್ಷಣ ಕಬ್ಬಣದ ಕಡಲೆ ಎನ್ನೋರಿಗೆ 580 ಅಂಕ ಗಳಿಸಿದ ಶ್ರಾವ್ಯ ಮಾದರಿ.

ಕಳೆದ ಮೂರು ವರ್ಷದಿಂದ ಆನಾರೋಗ್ಯದ ನಡುವೆಯೂ ಓದಿಗೆ ಹೆಚ್ಚು ಗಮನ ಕೊಡುತ್ತಿದ್ದ ಶ್ರಾವ್ಯಾ ೧೦ನೇ ತರಗತಿ ಬಂದ ನಂತರ ಆಸ್ಪತ್ರೆ ಮಂಚದ ಮೇಲೆ ಮಲಗಿಯೇ ಕಳೆದಿದ್ದಾಳೆ. ಅವಳ ಓದಿನ ಹಠ ನೋಡಿ ನಮ್ಮ ಕಣ್ಣುತುಂಬಿ ಬರುತ್ತಿತ್ತು. ಪರೀಕ್ಷೆ ಸಮಯದಲ್ಲಿ ರಾತ್ರಿ 3 ಗಂಟೆಗಲ್ಲಾ ಎದ್ದು ಓದುತ್ತಿದ್ದಳು. ಎಸ್ಸೆಸ್‌ಎಲ್ಸಿಯಲ್ಲಿ ಶೇ.೯೮ ಅಂಕ ನಿರೀಕ್ಷಿದ್ದು, ಅಷ್ಟು ಬರಲಿಲ್ಲ ಎಂದು ಮುಸುಕು ಹೊದ್ದು ಮಲಗಿದ ಅವಳ ಸಮಾಧಾನ ಮಾಡುವುದರಲ್ಲಿ ಸಾಕಾಯಿತು. – ಸುಶೀಲಾ ಪೂಜಾರಿ, ಶ್ರಾವ್ಯ ದೊಡ್ಡಮ್ಮ

ಪ್ರಕೃತಿ ವಿಕೋಪಕ್ಕೆ ಸ್ಪಂದಿಸಿದ ಶ್ರಾವ್ಯಾ ಅಸಹಾಯಕಿ:
ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಶ್ರಾವ್ಯಾ ಮಾನವೀಯ ಮಿಡಿದಿದ್ದಳು. ೮ನೇ ತರಗತಿ ಓದುತ್ತಿದ್ದ ಶ್ರಾವ್ಯಾ ಕೊಡಗು ಪ್ರಕೃತಿ ವಿಕೋಪ ಸಂತ್ರಸ್ತರ ಪರವಾಗಿ ಪೋಷಕರ, ಶಿಕ್ಷಣ ಪ್ರೇಮಿಗಳ ಮೂಲಕ ೬೦ ಸಾವಿರ ಹಣ ಸಂಗ್ರಹಿಸಿ ನೆರವು ನೀಡಿದ್ದ ಶ್ರಾವ್ಯ ಇಂದು ಅಸಹಾಯಕಿ. ಶ್ರಾವ್ಯ ದೈಹಿಕ ಶಕ್ತಿ ಕುಂದಿದ್ದರೂ ಓದುವ ಆಸಕ್ತಿ ಬತ್ತಿಲ್ಲ. ಪಿಯುಸಿಯಲ್ಲಿ ಪಿಸಿಎಂಬಿ ತೆಗೆದುಕೊಂಡು ಸ್ವಂತ ಕಾಲಮೇಲೆ ನಿಲ್ಲಬೇಕು ಎನ್ನುವ ಕನಸು ಕಟ್ಟಿಕೊಂಡಿದಾಳೆ. ಕುಂದಾಪುರ ಸರ್ಕಾರಿ ಆಸ್ಪತ್ರೆ ಡಾ. ನಾಗೇಶ್ ಶ್ರಾವ್ಯ ಕಾಯಿಲೆ ಗುಣಪಡಿಸಲಾಗದ್ದಲ್ಲ. ನಿಯಮಿತವಾಗಿ ಚಿಕಿತ್ಸೆ ತೆಗೆದುಕೊಂಡರೆ ಶ್ರಾವ್ಯ ಮುಂಚಿನಂತೆ ಆಗುತಾರೆ ಎನ್ನುತ್ತಾರೆ. ಶ್ರಾವ್ಯ ಶಿರಸಿ ಪ್ರಕೃತಿ ಚಿಕಿತ್ಸಾ ಕೇಂದ್ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ವಲ್ಪ ಸುಧಾರಣೆ ಕಂಡುಕೊಂಡಿದ್ದಾಳೆ. ಶ್ರಾವ್ಯ ಮುಂದೆ ಅನಾರೋಗ್ಯ ಮತ್ತು ಶಿಕ್ಷಣ ಸವಾಲಾಗಿದ್ದು, ಮಾನವೀಯತೆ ಬೆಂಬಲ ಬೇಕಾಗಿದೆ.

ಶ್ರಾವ್ಯಾ ಅನುಭವಿಸುತ್ತಿರುವ ಕಾಯಿಲೆ ಕರುಳು ಸಂಬಂಧಿಯಾಗಿದ್ದು ಹೊಟ್ಟೆ ನೋವು, ಪದೇ ಪದೇ ಮಲವಿಸರ್ಜನೆ ಆಗುತ್ತಿರುವ ಜೊತೆ ಭಾರಿ ತೂಕ ಕಡಿಮೆ ಆಗಿತ್ತದೆ. ಕರಳು ಹುಣ್ಣು, ಕರಳು ಕೆರಳುವಿಕೆ ಎಂದೂ ಇದನ್ನು ಕರೆಯಲಾಗುತ್ತದೆ. ನಿಯಮಿತವಾಗಿ ಚಿಕಿತ್ಸೆ ಪಡೆದರೆ ಕಾಯಲೆ ಸಂಪೂರ್ಣ ಗುಣ ಪಡಿಸಲಾಗುತ್ತದೆ. – ಡಾ. ನಾಗೇಶ್, ನೋಡಲ್ ಅಧಿಕಾರಿ, ತಾಲೂಕು ಸರ್ಕಾರಿ ಆಸ್ಪತ್ರೆ ಕುಂದಾಪುರ

ಶ್ರಾವ್ಯಾ – ದೂರವಾಣಿ 7022088015

Exit mobile version