Kundapra.com ಕುಂದಾಪ್ರ ಡಾಟ್ ಕಾಂ

ಕುಂಭಾಸಿಯಿಂದ ಕಾಶ್ಮೀರದ ತನಕ ಯುವತಿಯ ಸೋಲೋ ಬೈಕ್ ಟ್ರಿಪ್

7,000 ಕಿ.ಮೀ ಪಯಣ, ಮಹಿಳಾ ಸಬಲೀಕರಣ ಜಾಗೃತಿಯ ಕಂಕಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬೈಕ್ ರೈಡಿಂಗ್ ಅನ್ನೊಂದು ಒಂದು ಥ್ರಿಲ್ಲಿಂಗ್ ಅನುಭವ. ಅದ್ರಲ್ಲೂ ಇಷ್ಟವಾದ ಬೈಕ್ ಸಿಕ್ಕರಂತೂ ಲಾಂಗ್ ಟ್ರಿಪ್ ಹೋಗೋದು ಪ್ರತಿ ಬೈಕರ್’ಗಳ ಕನಸು. ಅಂತಹದ್ದೊಂದು ರೈಡಿಂಗ್ ಕನಸು ಕಂಡದ್ದು ಮಾತ್ರವಲ್ಲ, ಒಂದು ತಿಂಗಳೊಳಗೆ ಅದನ್ನು ಸಾಕಾರಗೊಳಿಸಿಕೊಳ್ಳುವ ಸಾಹಸ ಮಾಡಿದ್ದಾಳೆ ಕುಂದಾಪುರದ ಈ ಹುಡುಗಿ.

watch Video

ಕುಂದಾಪುರ ತಾಲೂಕಿನ ಕುಂಭಾಸಿಯ ಸಾಕ್ಷಿ ಹೆಗಡೆ ಅಂತಹದ್ದೊಂದು ಸಾಹಸಕ್ಕೆ ಮುಂದಾದ ಯುವತಿ. ಕುಂಭಾಸಿಯಿಂದ ಕಾಶ್ಮೀರದ ತನಕ ಒಟ್ಟು 7,000 ಕಿ.ಲೋ ಮೀಟರ್ ಪ್ರಯಾಣ, 15 ದಿನಗಳ ಗುರಿ, ಮಹಿಳಾ ಸಶಕ್ತಿಕರಣದ ಜಾಗೃತಿಯ ಸಂದೇಶದೊಂದಿಗೆ ಸಾಕ್ಷಿಯ ಏಕಾಂಗಿ ಬೈಕ್ ಯಾತ್ರೆ, ಕಾಶ್ಮೀರ ತಲುಪಿ, ಮತ್ತೆ ಅಲ್ಲಿಂದ ಗ್ವಾಲಿಯರ್ ತನಕ ಹಿಂದಿರುಗಿಯಾಗಿದೆ.

ಮೂಲತಃ ಇಡುಗುಂಜಿಯವರಾದ, ಪ್ರಸ್ತುತ ಕುಂಭಾಸಿಯಲ್ಲಿ ನೆಲೆಸಿರುವ ಶಿವರಾಮ ಹೆಗಡೆ ಹಾಗೂ ಪುಪ್ಪಾ ದಂಪತಿಗಳ ತೃತೀಯ ಪುತ್ರಿಯಾದ ಸಾಕ್ಷಿ, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತೃತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾಳೆ. ಬೈಕ್ ಬಗ್ಗೆ ಕ್ರೇಜ್ ಹೊಂದಿದ್ದ ಈಕೆ ಒಂದೂವರೆ ತಿಂಗಳ ಹಿಂದೆ ಪಲ್ಸರ್ ಎನ್.ಎಸ್ 125ಸಿಸಿ ಬೈಕ್ ಖರೀದಿಸಿದ್ದರು.

ಆರಂಭದಲ್ಲಿ ಸ್ಕೂಟಿ ರೈಡ್ ಮಾಡುತ್ತಿದ್ದ ಸಾಕ್ಷಿ, ಸ್ನೇಹಿತರ ಸಹಾಯದಿಂದ ಬೈಕ್ ಚಲಾಯಿಸೋದನ್ನೂ ಕಲಿತುಕೊಂಡಿದ್ದಳು. ರಾಣೆಬೆನ್ನೂರಿನ ಓರ್ವ ಯುವತಿ ರಸ್ತೆ ಸುರಕ್ಷತೆ ಬಗ್ಗೆ ಸೋಲೋ ಬೈಕ್ ರೈಡ್ ಮಾಡಿದ್ದು ನೋಡಿ, ಅವರನ್ನು ಇನ್ಸಿರೇಷನ್ ಆಗಿ ತೆಗೆದುಕೊಂಡು ಕಾಶ್ಮೀರ ಟ್ರಿಪ್ ಪ್ಲ್ಯಾನ್ ಮಾಡಿದ್ದಳು. ಅದಕ್ಕೆ ಮನೆಯವರ ಬೆಂಬಲ, ಸ್ನೇಹಿತರು ಹಾಗೂ ಕುಂದಾಪುರ ಹಿಂದೂ ಜಾಗರಣ ವೇದಿಕೆಯ ನೆರವು ದೊರೆಯಿತು.

ಮೇ.25 ರಂದು ಬೆಳಿಗ್ಗೆ 7.30ಕ್ಕೆ ಕುಂಭಾಸಿಯಿಂದ ಹೊರಟ ಸಾಕ್ಷಿ, ಸಂಜೆ 5 ಗಂಟೆಯ ವೇಳೆಗೆ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಸುಮಾರು 520 ಕಿ.ಮೀ ದೂರ ರೈಡ್ ಮಾಡಿದ್ದಾಳೆ. 2ನೇ ದಿನದಲ್ಲಿ 380 ಕಿ.ಮೀ ಸಂಚಾರಿಸಿ ಪನ್ವೇಲ್ ತಲುಪಿದ್ದಾಳೆ. ಈ ಮಧ್ಯೆ ಗರಿಷ್ಠ 700 ಕಿ.ಮೀ ರೈಡ್ ಮಾಡಿದ್ದೂ ಇದೆ. 6ನೇ ದಿನ ಕಾಶ್ಮಿರ ತಲುಪಿದ್ದಳು. ಅಲ್ಲಿಂದ ಛಂಡಿಘಡ್, ಹರಿಯಾಣ ರಾಜ್ಯಗಳನ್ನು ದಾಟಿ ಜೂನ್ 2ರಂದು ಗ್ವಾಲಿಯರ್ ನಗರಕ್ಕೆ ಹಿಂದಿರುಗಿದ್ದಾಳೆ. ಸೋಮವಾರ ಮರಳಿ ಕುಂಭಾಶಿ ತಲುಪಲಿದ್ದಾಳೆ.

ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಹೊರಟರೆ ಸಂಜೆ 7 ಗಂಟೆಯ ಒಳಗೆ ಯಾವುದಾದರೂ ನಗರದಲ್ಲಿ ರೂಂ ಹಿಡಿದು ಉಳಿದುಕೊಳ್ಳೋದು. ಮತ್ತೆ ರೈಡ್, ದಾರಿ ಮಧ್ಯೆ ಸಿಗುವ ಮಹಿಳೆಯೊಂದಿಗೆ ಒಂದಿಷ್ಟು ಮಾತುಕತೆ, ಪ್ರೇರಣೆ ತುಂಬುವ ಕೆಲಸ. ಉತ್ತರ ಭಾರತದ ಊಟ ತಿಂಡಿ, ಮಾರ್ಗ ಮಧ್ಯದಲ್ಲಿ ಹತ್ತಿರ ಸಿಗುವ ಪ್ರವಾಸಿ ತಾಣಗಳಿಗೂ ಭೇಟಿ. ಇದು ಸಾಕ್ಷಿಯ ಸದ್ಯದ ದಿನಚರಿ.

ಮಹಿಳಾ ಸ್ವಾಲಂಭನೆಯ ಜಾಗೃತಿಗೆ ಬೈಕ್ ಯಾತ್ರೆ:
ಮಹಿಳೆಯರೂ ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಆಕೆಯಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ ಎಂಬುದನ್ನು ಸಾರುವುದು ಸಾಕ್ಷಿಯ ಉದ್ದೇಶವಾಗಿತ್ತು. ಹಾಗಾಗಿ ಬೈಕ್ ರೈಡ್ ಮೂಲಕ ಈ ಕಾರ್ಯ ಮಾಡುತ್ತಿದ್ದಾರೆ. ಪ್ರಯಾಣದಲ್ಲಿ ಭೇಟಿಯಾಗುವ ಪ್ರತಿ ಮಹಿಳೆಯರಿಗೂ ಅವರ ಉದ್ದೇಶವನ್ನು ಹೇಳಿ ಪ್ರೇರಣೆ ನೀಡುವ ಕಾರ್ಯ ಮಾಡುತ್ತಿದ್ದಾರೆ.

ಏನು ಮಾಡಿದರೂ ವಿಭಿನ್ನವಾಗಿರಬೇಕು ಅನ್ನೋದು ನನ್ನ ಬಯಕೆಯಾಗಿತ್ತು. ಹಾಗಾಗಿ ಬೈಕ್ ರೈಡಿಂಗ್ ಕಲಿತೆ. ಬೈಕರ್ ಆದಮೇಲೆ ಯಾವುದಾದರೂ ಸಾಮಾಜಿಕ ಉದ್ದೇಶಕ್ಕಾಗಿ ರೈಡ್ ಮಾಡಬೇಕು ಅನಿಸಿತ್ತು. ಮನೆಯಲ್ಲಿ ಹೇಳಿದಾಗ ಒಪ್ಪಿಗೆ ದೊರೆಯಿತು. ಪ್ರಯಾಣದಲ್ಲಿ ಪ್ರತಿ ಊರು ತಲುಪಿದಾಗಲೂ ಹೊಸ ಜಾಗವೆಂಬ ಭಯವಿತ್ತು. ಹಾಗಾಗಿ ಅಲ್ಲಿನ ಹಿರಿಯರು, ಮಹಿಳೆರೊಂದಿಗೆ ಮಾತನಾಡುತ್ತಿದೆ. ರೈಡ್ ಎಂಜಾಯ್ ಮಾಡುತ್ತಿದ್ದೇನೆ. ಹಲವು ರಾಜ್ಯಗಳ ಜನರೊಂದಿಗೆ ಮಾತನಾಡುತ್ತಾ, ವಿಚಾರ ವಿನಿಮಯ ಮಾಡುಕೊಳ್ಳುತ್ತಾ ಸಾಗುತ್ತಿದ್ದೇನೆ. ಪ್ರಯಾಣದಲ್ಲಿ ಜೊತೆಯಾಗುತ್ತಿರುವುದು ಖುಷಿಯಾಗುತ್ತೆ. ಕುಂದಾಪುರ ಹಿಂದೂ ಜಾಗರಣ ವೇದಿಕೆಯ ಎಲ್ಲಾ ಪದಾಧಿಕಾರಿಗಳು, ರೈಡ್ ಉದ್ದಕ್ಕೂ ಸಾರ್ವಜನಿಕರು, ಪೊಲೀಸರು ನೀಡಿದ ಸಹಕಾರ ಮರೆಯಲಾರದ್ದು, ಮುಂದೆ ಸಾಧ್ಯವಾದರೆ ಕನ್ಯಾಕುಮಾರಿ ಸೋಲೋ ರೈಡ್ ಮಾಡುವ ಆಸೆ ಇದೆ. – ಸಾಕ್ಷಿ ಹೆಗಡೆ, ಬೈಕರ್

ಹಲವರ ಸಹಕಾರದಿಂದ ಕಾಶ್ಮೀರ ಪಯಣ:
ರೈಡ್ ಉದ್ದಕ್ಕೂ ಸಾರ್ವಜನಿಕರ ಸಹಕಾರ ಮರೆಯಲಾದದ್ದು ಎನ್ನುತ್ತಾಳೆ ಸಾಕ್ಷಿ. ಕುಂಭಾಸಿಯಿಂದ ಕಾಶ್ಮಿರ ತಲುಪುವ ಯೋಚನೆ ಬಂದಾಗ ಮನೆಯವರ ಒಪ್ಪಿಗೆ ದೊರೆಯಿತು. ಬೈಕ್ ಸಿದ್ದವಿತ್ತು. ರೈಡಿಗೆ ಅಗತ್ಯವಿದ್ದ ಎಲ್ಲಾ ವಸ್ತುಗಳನ್ನು ಖರೀಸಿದ್ದೆ. ಆದರೆ ಪೆಟ್ರೋಲ್, ಊಟ, ವಸತಿಯ ವೆಚ್ಚವನ್ನು ಕುಂದಾಪುರ ಹಿಂದೂ ಜಾಗರಣ ವೇದಿಕೆಯವರು ನೀಡಿ ರೈಡಿಗೆ ಸಹಕಾರಿ ನೀಡಿದ್ದಾರೆ.

Exit mobile version