Kundapra.com ಕುಂದಾಪ್ರ ಡಾಟ್ ಕಾಂ

ಬೈಕಿನಲ್ಲಿ ಲೇಹ್-ಲಡಾಕ್ ತೆರಳಿದ ಕೊಲ್ಲೂರಿನ ವ್ಲಾಗರ್ ಜಿತೇಂದ್ರ ಕುಮಾರ್

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ,ಜೂ.15:
ಲಾಂಗ್ ರೈಡ್‌ಗೆ ತೆರಳೋದು ಪ್ರತಿಯೊಬ್ಬ ಬೈಕರ್‌ಗಳ ಕನಸು. ಸ್ನೇಹಿತರ ಪಡೆ ಜೊತೆಯಾದರಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿರುತ್ತೆ ರೈಡಿಂಗ್ ಅನುಭವ. ಹೀಗೆ ಕುಂದಾಪುರದಿಂದ ಆರಂಭಿಸಿ ಭಾರತದ ಸ್ವರ್ಗ ಲೇಹ್ ಸೇರಿದಂತೆ ಲಡಾಕ್ ನಗರದ ವಿವಿಧ ಪ್ರವಾಸ ತಾಣಗಳ ಸುತ್ತುತ್ತಾ ಕುಂದಾಪ್ರ ಕನ್ನಡದಲ್ಲಿಯೇ ವ್ಲಾಗಿಂಗ್ (Vlogging) ಅನುಭವಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ ಕೊಲ್ಲೂರಿನ ಯುವಕ ಜಿತೇಂದ್ರ ಕುಮಾರ್.

ತನ್ನ ರಾಯಲ್ ಎನ್ಫಿಲ್ಡ್ ಹಿಮಾಲಯನ್ ಬೈಕಿನಲ್ಲಿ ಛಂಡಿಗಡ್ ಮಾರ್ಗವಾಗಿ ತೆರಳಿ ಇಂದು ಲೇಹ್ ತಲುಪಿರುವ ಜಿತೇಂದ್ರ, ಭಾರತದ ಎತ್ತರದ ಮೋಟೋರೆಬಲ್ ತಾಣವಾದ ಕಾರ್ದುಂಗ್ಲಾ ಲಾ ಹಾಗೂ ಇತರೆ ಪ್ರವಾಸಿ ತಾಣಗಳಿಗೆ ತೆರಳಿ ಬಳಿಕ ಶ್ರೀನಗರ ಮೂಲಕ ಮರಳಿ ಊರಿನ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ.

ಕುಂದಾಪ್ರ ಕನ್ನಡದ ಮೋಟೋ ವ್ಲಾಗರ್:
ಜಿತೇಂದ್ರ ಕುಮಾರ್ ವ್ಲಾಗಿಂಗ್ ಹವ್ಯಾಸ ಹೊಂದಿದ್ದು, ಆಗಾಗ್ಗೆ ಸೋಲೋ ಹಾಗೂ ಸ್ನೇಹಿತರೊಂದಿಗೆ ಮೊಟೋ ವ್ಲಾಗ್ (Youtube: Jini on Wheels) ಮಾಡುತ್ತಿರುತ್ತಾರೆ. ಅವರ ಕುಂದಾಪ್ರ ಕನ್ನಡದ ವಿವರಣೆಯುಳ್ಳ ವ್ಲಾಗಿಂಗ್ ಎಲ್ಲರ ಗಮನ ಸೆಳೆಯುತ್ತದೆ. ಲಡಾಕ್, ಶ್ರೀನಗರದ ವಿವಿಧೆಡೆಗಳಿಗೆ ತೆರಳಿರುವ ಅವರು ಕುಂದಾಪ್ರ ಕನ್ನಡದಲ್ಲಿಯೇ ವ್ಲಾಗ್ ಮಾಡುತ್ತಿದ್ದಾರೆ ಅಲ್ಲದೇ ಲೇಹ್ ನಗರದಲ್ಲಿ ʼನಮ್ಮ ಕುಂದಾಪ್ರʼ ಎಂಬ ಟೀ ಶರ್ಟು ಧರಿಸಿ ರೈಡ್ ಮಾಡಿದ್ದಾರೆ.

ಕೊಲ್ಲೂರು ನಿವಾಸಿ ಜಯಾನಂದ ಹಾಗೂ ಪ್ರೇಮ ದಂಪತಿಗಳ ಪುತ್ರನಾದ ಜಿತೇಂದ್ರ ಕುಮಾರ್, ಎಲ್.ಎಲ್.ಬಿ ಪದವಿ ಮುಗಿಸಿದ್ದಾರೆ. ವಿವಿಧ ಕಿರುಚಿತ್ರಗಳಲ್ಲಿ ನಟನೆ, ಸಂಕಲನದ ಮೂಲಕವೂ ಗುರುತಿಸಿಕೊಂಡಿದ್ದಾರೆ.

* ಬೈಕ್ ರೈಡಿಂಗ್ ನನ್ನ ಹವ್ಯಾಸವಾಗಿದ್ದು, ಮುಂದಿನ ದಿನಗಳಲ್ಲಿ ಭಾರತದ ಪ್ರತಿಯೊಂದು ರಾಜ್ಯಗಳಿಗೂ ಬೈಕ್ ರೈಡ ಮಾಡುವ ಹಾಗೂ ಅದನ್ನು ಕುಂದಾಪ್ರ ಕನ್ನಡದ ವ್ಲಾಗಿಂಗ್ ಮೂಲಕ ತೋರಿಸುವ ಆಕಾಂಕ್ಷೆ ಇದೆ. – ಜಿತೇಂದ್ರ ಕುಮಾರ್ ಕೊಲ್ಲೂರು, ಬೈಕರ್

Exit mobile version