Kundapra.com ಕುಂದಾಪ್ರ ಡಾಟ್ ಕಾಂ

ಮರೆಯಲ್ಲಿರುವ ಸಾಧಕರು ಮುಖ್ಯವಾಹಿನಿಗೆ ಬರುವಂತಾಗಲಿ – ಕೊಕೂರು ಸೀತಾರಾಮ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ನಮ್ಮ ನಡುವೆ ಹಲವಾರು ಎಲೆ ಮರೆ ಕಾಯಿಯಂತೆ ಸಾಧಕರಿದ್ದು ಅವರ ಸಾಧನೆಯ ಹೆಜ್ಜೆ ಅನಾವರಣವಾಗುವ ಕೆಲಸವಾಗಿ ಅವರು ಮುಖ್ಯ ವಾಹಿನಿಗೆ ಬರುವಂತಾಗಬೇಕು. ದತ್ತಿ ಪುರಸ್ಕಾರದ ಮೂಲಕ ಸಾಧಕರನ್ನು ಸಮಾಜದ ಗುರುತಿಸುವಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಯಕ್ಷ ನಿರ್ದೇಶಕ, ಶಿಕ್ಷಕ ಕೊಕೂರು ಸೀತರಾಮ ಶೆಟ್ಟಿ ಅವರು ಹೇಳಿದರು.

ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ|| ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಇವರ ಆಶ್ರಯದಲ್ಲಿ ನಡೆದ ಕಾರಂತರ ಇಪ್ಪತ್ತೈದನೇ ಪುಣ್ಯ ಸ್ಮರಣೆ ಅಂಗವಾಗಿ ಮಕ್ಕಳ ಸಾಂಸ್ಕೃತಿಕ -ಸಾಹಿತ್ಯಿಕ ರಸಗವಳ ಅನೂಹ್ಯ-2022 (ನಾವೀನ್ಯದ ಗೌಜಿ) ಎರಡನೇ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ದಿ.ಉಪೇಂದ್ರ ಐತಾಳ್ ಸ್ಮಾರಕ ‘ಕೃಷಿ ಪರಿಶ್ರಮ ಪುರಸ್ಕಾರಕ್ಕೆ ಸದಾಶಿವ ಐತಾಳ್, ದಿ.ರಾಘವೇಂದ್ರ ಉರಾಳ ಸ್ಮಾರಕ ‘ಸಂಶೋಧಕ ಸಾಧಕ ಪುರಸ್ಕಾರ’ ಕ್ಕೆ ಪ್ರದೀಪ್ ಬಸ್ರೂರು, ದಿ. ಡಾ. ಆನಂದ ಶೆಟ್ಟಿ ಸ್ಮಾರಕ ‘ಆದರ್ಶ ಶಿಕ್ಷಕ ಪುರಸ್ಕಾರ’ಕ್ಕೆ ಭಾಸ್ಕರ ಪೂಜಾರಿ, ದಿ ಮನೋಹರ್ ತೋಳಾರ್ ಸ್ಮಾರಕ ಕ್ರೀಡಾ ಪುರಸ್ಕಾರಕ್ಕೆ ಶಿವನಾರಾಯಣ ಐತಾಳ್ ಅವರಿಗೆ ದತ್ತಿ ಪುರಸ್ಕಾರ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಕರ್ನಾಟಕ ಬ್ಯಾಂಕ್ ಕೋಟ ಶಾಖೆಯ ಪ್ರಬಂಧಕ ಸಂತೋಷ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಪೃಗತಿಪರ ಕೃಷಿಕ ರವೀಂದ್ರ ಐತಾಳ್, ಕೋಟತಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಮ್ ಶೆಟ್ಟಿ, ಕೋಟ ಸ.ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯರಾದ ಪುಷ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಾಹಿತಿ ಮಂಜುಳ ಜಿ ತೆಕ್ಕಟ್ಟೆ ನಿರೂಪಿಸಿ, ಪ್ರತಿಷ್ಠಾನದ ಕಾರ್ಯದಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿದರು.

Exit mobile version