ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಉಪ್ಪುಂದದ 19 ನೇ ವರ್ಷದ ಪದಗ್ರಹಣ ಸಮಾರಂಭ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಕಾರ್ಯದರ್ಶಿಯಾಗಿ ಪುರಂದರ್ ಉಪ್ಪುಂದ, ಲೇಡಿ ಅಧ್ಯಕ್ಷರಾಗಿ ರೇಖಾ, ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ನಿಷಾ ಶೆಟ್ಟಿ ಮತ್ತು ಅವರ ತಂಡಗಳು ಪದಗ್ರಹಣ ಸ್ವೀಕರಿಸಿದರು.
ಮುಖ್ಯ ಅತಿಥಿಗಳಾಗಿ ಜೆಸಿಐ ಭಾರತದ ಪೂರ್ವ ರಾಷ್ಟ್ರೀಯ ಕಾನೂನು ಸಲಹೆಗಾರರಾದ ಶ್ರೀಧರ್ ಪಿ ಎಸ್., ಜನ ಸೇವಾ ಟ್ರಸ್ಟ್ ಪ್ರವರ್ತಕರಾದ ವಸಂತ ಗಿಳಿಯಾರ್, ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಉಪಸ್ಥಿತರಿದ್ದರು.
ಈ ವೇಳೆ ಇಬ್ಬರು ಫಲಾನುಭವಿಗಳಿಗೆ ಶ್ರವಣ ಸಾಧನ ಹಾಗೂ ವ್ಹೀಲ್ ಚೇರ್ ಹಸ್ತಾಂತರಿಸಲಾಯಿತು.
ಸಭೆಯ ಪೂರ್ವಾರ್ಧದ ಅಧ್ಯಕ್ಷತೆ ವಹಿಸಿದ್ದ ನಾಗರಾಜ್ ಪೂಜಾರಿ ವರದಿ ವಾಚಿಸಿ, ದಿನದರ್ಶಿಕೆ ಬಿಡುಗಡೆಗೊಳಿಸಿ ಎಲ್ಲಾ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿದರು. ನೂತನ ಅಧ್ಯಕ್ಷರು ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಅತ್ಯಾಧುನಿಕ ಶ್ರವಣ ಸಾಧನ ಮತ್ತು ವೀಲ್ ಚೇರನ್ನು ವಿಶೇಷ ಚೇತನರಿಗೆ ವಿತರಿಸಿದರು. 2022ರ ನಿಕಟಪೂರ್ವ ಅಧ್ಯಕ್ಷರಾದ ಪುರುಷೋತ್ತಮದಾಸ್, ಕಾರ್ಯದರ್ಶಿ ಜಗದೀಶ್ ದೇವಾಡಿಗ, ಹಾಗೂ ಲೇಡಿ ಅಧ್ಯಕ್ಷರಾದ ಜೆಸಿ ಸುಪರ್ಣಾ ಪೂರ್ವಾರ್ಧದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಶ್ರೀಗಣೇಶ್ ವೇದಿಕೆಗೆ ಆಹ್ವಾನಿಸಿದರು. ಶರತ್ ಶೆಟ್ಟಿ ಜೆಸಿವಾಣಿ ವಾಚಿಸಿದರು, ಪೂರ್ವಾಧ್ಯಕ್ಷರಾದ ಮಂಗೇಶ್ ಶ್ಯಾನುಭಾಗ್, ಪ್ರಕಾಶ್ ಭಟ್, ಸಂದೀಪ್, ಗೌರೀಶ್ ಹುದಾರ್, ನರಸಿಂಹ ದೇವಾಡಿಗ, ಸೌಮ್ಯ ಎಸ್, ರಮಣಿ, ಸಂತೋಷ ನಾಗೂರು ಪರಿಚಯ ವಾಚಿಸಿದರು. ಜೆಸಿ ದೇವರಾಯ ದೇವಾಡಿಗ ನಿಕಟ ಪೂರ್ವಾಧ್ಯಕ್ಷರನ್ನು ಪೂರ್ವಾಧ್ಯಕ್ಷರ ಸಾಲಿಗೆ ಸೇರಿಸಿದರು. ಪುರಂದರ ಖಾರ್ವಿ ಲಕ್ಕಿ ಡ್ರಾ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಪುರಂದರ ಉಪ್ಪುಂದ ಧನ್ಯವಾದ ಸಮರ್ಪಣೆ ಮಾಡಿದರು. ಸುಬ್ರಮಣ್ಯ ಜಿ. ಉಪ್ಪುಂದ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿ ಕಾರ್ಯಕ್ರಮ ನಿರ್ವಹಿಸಿದರು.
ಇದನ್ನೂ ಓದಿ:
► ಜೆಸಿಐ ಉಪ್ಪುಂದ ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಜ.1ರಂದು ಪದಗ್ರಹಣ – https://kundapraa.com/?p=64235 .