ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಜೆಸಿಐ ಉಪ್ಪುಂದ 2023ನೇ ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಕಾರ್ಯದರ್ಶಿಯಾಗಿ ಪುರಂದರ ಉಪ್ಪುಂದ ಆಯ್ಕೆಯಾಗಿದ್ದಾರೆ. ಜನವರಿ 1ರಂದು ನೂತನ ಸಮಿತಿಯ ಪದಗ್ರಹಣ ಸಮಾರಂಭ ಜರುಗಲಿದೆ.
ನೂತನ ಕಮಿಟಿಯಲ್ಲಿ ನಿಕಟಪೂರ್ವ ಅಧ್ಯಕ್ಷ ನಾಗರಾಜ ಪೂಜಾರಿ ಉಬ್ಜೇರಿ, ಉಪಾಧ್ಯಕ್ಷರಾಗಿ ಮಂಜುನಾಥ ದೇವಾಡಿಗ, ಶರತ್ ಶೆಟ್ಟಿ, ಅನುಷ್, ಸಂತೋಷ್, ಅನೂಪ್, ಖಜಾಂಚಿಯಾಗಿ ರಾಮಕೃಷ್ಣ ಖಾರ್ವಿ, ಲೇಡಿ ಜೆಸಿ ಕೋ-ಆರ್ಡಿನೇಟರಾಗಿ ರೇಖಾ, ಜೆಜೆಸಿ ವಿಂಗ್ ಅಧ್ಯಕ್ಷರಾಗಿ ನಿಶಾ ಸಂತೋಷ್ ಶೆಟ್ಟಿ, ಜಂಟಿ ಕಾರ್ಯದರ್ಶಿಯಾಗಿ ವಿಜಯ ಶೆಟ್ಟಿ, ಜೆಸಿರೇಟ್ ಕೋ-ಆರ್ಡಿನೇಟರ್ ಆಗಿ ನರಸಿಂಹ ದೇವಾಡಿಗ, ಜೆಜೆಸಿ ಕೋ-ಆರ್ಡಿನೇಟರ್ ಜಯರಾಜ ಖಾರ್ವಿ, ಬುಲೇಟಿನ್ ಎಡಿಟರ್ ಆಗಿ ಜಗದೀಶ್ ದೇವಾಡಿಗ, ಅವಿನಾಶ್, ಇವೆಂಟ್ ಅಂಬಾಸಿಡರ್ ಆಗಿ ಪ್ರಕಾಶ್ ಭಟ್, ಮೀಡಿಯಾ ಕವರೇಜ್ ಅಭಿಷೇಕ್, ಎಂಪವರಿಂಗ್ ಯುಥ್ ನಿತೀನ್ ಶೆಟ್ಟಿ, ಕಲ್ಚರಲ್ ಕೋ-ಆರ್ಡಿನೇಟರ್ ಶ್ರೀಲತಾ, ಸುಪರ್ಣ, ಜಿ&ಡಿ ಕೋ-ಆರ್ಡಿನೇಟರ್ ಪುರಂದರ ಖಾರ್ವಿ ಉಪ್ಪುಂದ, ಸ್ಪೋರ್ಟ್ಸ್ ಕೋ-ಆರ್ಡಿನೇಟರ್ ಗೌರೀಶ್ ಹುದಾರ್, ರಂಜಿತ್ ಉಪ್ಪುಂದ, ಪೋಗ್ರಾಂ ಕೋ-ಆರ್ಡಿನೇಟರ್ ಆಗಿ ಸಂದೀಪ್, ಉದಯ, ಅನುದೀಪ್ ಹಾಗೂ ಮತ್ತಿತರರು ಕಾರ್ಯನಿರ್ವಹಿಸಲಿದ್ದಾರೆ.
ಜನವರಿ 1ರ ಸಂಜೆ 6-30ಕ್ಕೆ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಮತ್ತು ತಂಡದ ಪದಪ್ರದಾನ ಸಮಾರಂಭ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಜರುಗಲಿದೆ. ಈ ವೇಳೆ ಫಲಾನುಭವಿಗಳಿಗೆ ಹಿಯರಿಂಗ್ ಎಡ್ ಹಾಗೂ ವೀಲ್ಚೇರ್ ವಿತರಣೆಯೂ ನಡೆಯಲಿದೆ.