Site icon Kundapra.com ಕುಂದಾಪ್ರ ಡಾಟ್ ಕಾಂ

ಕರ್ನಾಟಕದ ಚುನಾವಣೋತ್ತರ ಸಮೀಕ್ಷೆ: ಯಾರಿಗೆ ಗದ್ದುಗೆ? ಅತಂತ್ರದ ವಿಧಾನಸಭೆಯ ಸುಳಿವು?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು:
ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಪೂರ್ಣಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ಕರ್ನಾಟಕದಲ್ಲಿ ಬಿಜೆಪಿ ಇಲ್ಲವೇ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆಯಾ ಅಥವಾ ಅತಂತ್ರ ಸ್ಥಿತಿಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆಯಾ ಎಂಬ ಕುತೂಹಲವನ್ನು ಚುನಾವಣೋತ್ತರ ಸಮೀಕ್ಷೆಗಳು ಹುಟ್ಟುಹಾಕಿವೆ.

ಸಿಜಿಎಸ್, ಜನ್ ಕೀ ಬಾತ್, ಸುವರ್ಣ ನ್ಯೂಸ್, ಸಮೀಕ್ಷೆಗಳ ಪ್ರಕಾರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಟೈಮ್ಸ್ ನೌ, ಎಬಿಪಿ ಹಾಗೂ ಝೀ ನ್ಯೂಸ್ ನಡೆಸಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದಿದೆ. ಆದರೆ ಸಿ-ವೋಟರ್, ಟಿವಿ 9, ಹಿಂದೂಸ್ಥಾನ್ ಟೈಮ್ಸ್ ರಿಪಬ್ಲಿಕ್ ಟಿವಿ ನಡೆಸಿರುವ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದಿದೆ. ಯಾವ ಸಮೀಕ್ಷೆ ನಿಜವಾಗಲಿದೆ ಎಂಬುದನ್ನು ಮೇ.13ರ ತನಕ ಕಾದು ನೋಡಬೇಕಿದೆ.

Exit mobile version