ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಪೂರ್ಣಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ಕರ್ನಾಟಕದಲ್ಲಿ ಬಿಜೆಪಿ ಇಲ್ಲವೇ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆಯಾ ಅಥವಾ ಅತಂತ್ರ ಸ್ಥಿತಿಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆಯಾ ಎಂಬ ಕುತೂಹಲವನ್ನು ಚುನಾವಣೋತ್ತರ ಸಮೀಕ್ಷೆಗಳು ಹುಟ್ಟುಹಾಕಿವೆ.
ಸಿಜಿಎಸ್, ಜನ್ ಕೀ ಬಾತ್, ಸುವರ್ಣ ನ್ಯೂಸ್, ಸಮೀಕ್ಷೆಗಳ ಪ್ರಕಾರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಟೈಮ್ಸ್ ನೌ, ಎಬಿಪಿ ಹಾಗೂ ಝೀ ನ್ಯೂಸ್ ನಡೆಸಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದಿದೆ. ಆದರೆ ಸಿ-ವೋಟರ್, ಟಿವಿ 9, ಹಿಂದೂಸ್ಥಾನ್ ಟೈಮ್ಸ್ ರಿಪಬ್ಲಿಕ್ ಟಿವಿ ನಡೆಸಿರುವ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದಿದೆ. ಯಾವ ಸಮೀಕ್ಷೆ ನಿಜವಾಗಲಿದೆ ಎಂಬುದನ್ನು ಮೇ.13ರ ತನಕ ಕಾದು ನೋಡಬೇಕಿದೆ.
- ಜನ್ ಕೀ ಬಾತ್ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆಯಿದೆ. ಬಿಜೆಪಿ 94- 117 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಇನ್ನು ಕಾಂಗ್ರೆಸ್ 91 -106 ಸ್ಥಾನ, ಜೆಡಿಎಸ್ 14-24 ಹಾಗೂ ಪಕ್ಷೇತರರು 2 ಸ್ಥಾನಗಳನ್ನು ಪಡೆದುಕೊಳ್ಳಲಿದ್ದಾರೆ.
- ಟೈಮ್ಸ್ ನೌ ನಡೆಸಿರುವ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಸಷ್ಟ ಬಹುಮತ ಪಡೆಯಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಲಿದೆ ಎಂದು ಹೇಳಿದೆ. ಕಾಂಗ್ರೆಸ್ 106-120 ಸ್ಥಾನಗಳನ್ನು ಪಡೆಯಲಿದ್ರೆ, ಬಿಜೆಪಿ 78-92 ಸ್ಥಾನ ಹಾಗೂ ಜೆಡಿಎಸ್ 20-26 ಹಾಗೂ ಇತರರು 2-4 ಸ್ಥಾನಗಳನ್ನು ಪಡೆಯಲಿದ್ದಾರೆ.
- ಸಿ-ವೋಟರ್ ಸಮೀಕ್ಷೆಯಂತೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗು ಸೂಚನೆ ಇದೆ. ಬಿಜೆಪಿ 88-98, ಕಾಂಗ್ರೆಸ್ 99-109, ಜೆಡಿಎಸ್ 21-26 ಸ್ಥಾನ ಪಡೆದುಕೊಳ್ಳಲಿದ್ದಾರೆ.
- ಜೀ ನ್ಯೂಸ್ ಮ್ಯಾಟ್ರಿಜ್ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 108 ರಿಂದ 118, ಬಿಜೆಪಿ 79 – 89 ಮತ್ತು ಜೆಡಿಎಸ್ 25 – 35 ಸ್ಥಾನ ಹಾಗೂ ಇತರರು 2-6 ರಿಂದ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
- ಸಿಜಿಎಸ್ (CGS ) ಸಮೀಕ್ಷೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದಿದೆ. ಬಿಜೆಪಿ 114, ಕಾಂಗ್ರೆಸ್ 86 ಜೆಡಿಎಸ್ 21 ಹಾಗೂ ಇತರರು 3 ಸ್ಥಾನಗಳನ್ನು ಪಡೆಯಲಿದ್ದಾರೆ.
- ಎಬಿಪಿ ಸಮೀಕ್ಷೆಯಲ್ಲಿಯೂ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 100-112 ಸ್ಥಾನಗಳನ್ನು ಪಡೆಯಲಿದ್ರೆ, ಬಿಜೆಪಿ 85-95 ಸ್ಥಾನ ಹಾಗೂ ಜೆಡಿಎಸ್ 21-29 ಹಾಗೂ ಇತರರು 2-6 ಸ್ಥಾನಗಳನ್ನು ಪಡೆಯಲಿದ್ದಾರೆ.
- ರಿಪಬ್ಲಿಕ್ – ಪಿ ಮಾರ್ಕ್ ಸಮೀಕ್ಷೆಯ ಪ್ರಕಾರ ಯಾವುದೇ ಪಕ್ಷಗಳಿಗೂ ಸ್ಪಷ್ಟ ಬಹುಮತ ಸಿಗುವುದಿಲ್ಲ. ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಬಿಜೆಪಿ 85-100, ಕಾಂಗ್ರೆಸ್ 94-108 ಜೆಡಿಎಸ್ 24-32 ಹಾಗೂ ಪಕ್ಷೇತರರು 2-6 ಸ್ಥಾನಗಳನ್ನು ಪಡೆಯಲಿದ್ದಾರೆ.
- ಪೋಲ್ ಸ್ಟಾರ್ಟ್ ಸಮೀಕ್ಷೆಯಲ್ಲಿಯೂ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ. ಬಿಜೆಪಿ 88-98 ಸ್ಥಾನ, ಕಾಂಗ್ರೆಸ್ 99-109 ಸ್ಥಾನ ಹಾಗೂ ಜೆಡಿಎಸ್ 21-26 ಸ್ಥಾನಗಳನ್ನು ಪಡೆಯಲಿದೆ.
- ಟಿವಿ 9 ಸಮೀಕ್ಷೆಯ ಪ್ರಕಾರ ಬಿಜೆಪಿ 88-98. ಕಾಂಗ್ರೆಸ್ 99-100 ಸ್ಥಾನಗಳನ್ನು ಪಡೆಯಲಿದ್ರೆ ಜೆಡಿಎಸ್ 21-26, ಹಾಗೂ ಪಕ್ಷೇತರರು 2-6 ಸ್ಥಾನಗಳನ್ನು ಪಡೆದುಕೊಳ್ಳಲಿದ್ದಾರೆ.
- ಹಿಂದೂಸ್ಥಾನ್ ಟೈಮ್ಸ್ ಸಮೀಕ್ಷೆಯಲ್ಲಿ ಯಾವುದೇ ಪಕ್ಷಕ್ಕೂ ಕೂಡ ಸ್ಪಷ್ಟ ಬಹುಮತ ಲಭಿಸುವುದಿಲ್ಲ ಎಂದಿದೆ. ಬಿಜೆಪಿ 85-100, ಕಾಂಗ್ರೆಸ್ 94-108 ಹಾಗೂ ಜೆಡಿಎಸ್ 24-32 ಸ್ಥಾನ ಹಾಗೂ ಪಕ್ಷೇತರರು 2-6 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.