Site icon Kundapra.com ಕುಂದಾಪ್ರ ಡಾಟ್ ಕಾಂ

ಖಾಸಗಿ ಬಸ್‌ಗೆ ಕ್ಯಾಂಟರ್ ಡಿಕ್ಕಿ: 8 ಮಂದಿಗೆ ಗಾಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಖಾಸಗಿ ಬಸ್ ಹಾಗೂ ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್ ಚಾಲಕ ಸಹಿತ ಎಂಟು ಮಂದಿಗೆ ಗಂಭೀರ ಗಾಯಗೊಂಡ ಘಟನೆ ಆವರ್ಸೆ ಅಂಡರ್‌ಕಟ್ಟೆ ಎಂಬಲ್ಲಿ ನಡೆದಿದೆ.

ಆವರ್ಸೆ ಗೋಳಿಯಂಗಡಿ ರಸ್ತೆಯಲ್ಲಿ ವಿಪರೀತ ಮಳೆಯಿಂದಾಗಿ ರಸ್ತೆ ಕಾಣಿಸುತ್ತಿರಲಿಲ್ಲ ಅಲ್ಲದೇ ಅಪಘಾತದ ಸ್ಥಳದಲ್ಲಿ ರಸ್ತೆಯ ಮೇಲೆಯೇ ವಿದ್ಯುತ್ ಕಂಬ ನೆಡಲಾಗಿರುವುದರಿಂದ ಕ್ಯಾಂಟರ್ ಚಾಲಕ ತೀರಾ ಎಡಗಡೆಗೆ ಚಲಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ರಸ್ತೆ ಮೇಲೆಯೇ ಹೈ ಟೆನ್ಷನ್ ವಯರ್ ಗಳಿರುವ ವಿದ್ಯುತ್ ಕಂಬವಿರುವ ಬಗ್ಗೆ ಹಲವಾರು ಬಾರಿ ಮೆಸ್ಕಾಂ ಗಮನಕ್ಕೆ ತರಲಾಗಿದ್ದರೂ ಮೆಸ್ಕಾಂ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿರುವ ಸ್ಥಳೀಯರು ಅಪಘಾತದಲ್ಲಿ ಗಾಯಗೊಂಡವರಿಗೆ ಮೆಸ್ಕಾಂ ಇಲಾಖೆಯೇ ನೇರ ಹೊಣೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Exit mobile version