Kundapra.com ಕುಂದಾಪ್ರ ಡಾಟ್ ಕಾಂ

ಉಳ್ಳೂರು-74: ಪತ್ನಿಯ ವಿವಾಹೇತರ ಸಂಬಂಧ. ಮೊಸದ ಮದುವೆ ಬಗ್ಗೆ ಪತಿಯಿಂದ ದೂರು ದಾಖಲು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಧುವಿಗೆ ಇಷ್ಟವಿಲ್ಲದ ಮದುವೆಯೊಂದು 2 ತಿಂಗಳೋಳಗೆ ಮುರಿದು ಬಿದ್ದಿದೆ. ಮದುವೆಯಾಗಿ ನಾಲ್ಕೇ ದಿನ ಗಂಡನ ಮನೆಯಲ್ಲಿ ವಾಸವಿದ್ದು, ತವರು ಸೇರಿದ್ದ ಪತ್ನಿ, ಆಕೆಯ ಪೋಷಕರು ಹಾಗೂ ಪತ್ನಿ ಪ್ರಿಯಕರನ ವಿರುದ್ಧ ದೂರು ದಾಖಲಾದ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಕ್ತಿಯಲ್ಲಿ ನಡೆದಿದೆ.

ತಾಲೂಕಿನ ಉಳ್ಳೂರು-74 ಗ್ರಾಮದ ಸಂಪಿಗೇಡಿ ನಿವಾಸಿ ಸಂಕೇತ್ ಶೆಟ್ಟಿ ಎಂಬುವವರೊಂದಿಗೆ ಹಾಗೂ ವಡೇರಹೋಬಳಿಯ ಸ್ಪೂರ್ತಿ ಶೆಟ್ಟಿ ಎಂಬವವರ ವಿವಾಹ ಮೇ. 21ರಂದು ನಡೆದಿತ್ತು. ಆದರೆ ಮದುವೆಯ ಬಳಿಕ ಸ್ಪೂರ್ತಿ ಶೆಟ್ಟಿ 4 ದಿನ ಮಾತ್ರ ಗಂಡನ ಮನೆಯಲ್ಲಿ ಇದ್ದು ಬಳಿಕ ಪದೇ ಪದೇ ತವರು ಮನೆಗೆ ಹೋಗುತ್ತಿದ್ದರು. ಈ ಬಗ್ಗೆ ಪತಿ ಸಂಕೇತ್ ಶೆಟ್ಟಿ ಪತ್ನಿಯಲ್ಲಿ ವಿಚಾರಿಸಿದಾಗ ಹೊಸದಾಗಿ ಮದುವೆಯಾಗಿರುವುದರಿಂದ ಹೊಂದಾಣಿಕೆ ಮಾಡಿಕೊಳ್ಳಲು ಸ್ವಲ್ಪ ಸಮಯಬೇಕು ಎಂಬ ಉತ್ತರ ಬಂದಿದೆ. ಇದಕ್ಕೆ ಪತಿಯೂ ಒಪ್ಪಿ ಸುಮ್ಮನಾಗಿದ್ದರು. ಆದರೆ ದಿನ ಕಳೆದಂತೆ ಪತ್ನಿ ಯಾರೊಂದಿಗೋ ಮೊಬೈಲ್ನಲ್ಲಿ ಮಾತನಾಡುತ್ತಿರುವುದು, ವಾಟ್ಸಪ್ ವೀಡಿಯೋ ಕಾಲಿಂಗ್ ಮಾಡುವುದನ್ನು ಹೆಚ್ಚು ಮಾಡಿದ್ದಾಳೆ. ಈ ಬಗ್ಗೆ ಪತಿ ಸಂಕೇತ್ ಶೆಟ್ಟಿ ಮತ್ತೆ ಪ್ರಶ್ನಿಸಿದ್ದಾರೆ. ಈ ವೇಳೆ ನಿನ್ನ ಮದುವೆ ಆಗಲು ಇಷ್ಟವಿರಲಿಲ್ಲ ನಾನು ಮತ್ತು ನವೀನ್ ಎಂಬಾತ ಮದುವೆಯಾಗಲು ಬಯಸಿದ್ದೆವು. ಈ ಹಿಂದೆ ನಾವಿಬ್ಬರೂ ಒಟ್ಟಿಗೆ ಇದ್ದೆವು. ಈ ವಿಷಯ ನಮ್ಮ ಮನೆಯವರಿಗೂ ತಿಳಿದಿದೆ. ನಾನು ಮದುವೆ ಆಗಿದ್ದು ನಿನ್ನೊಂದಿಗೆ ಸಂಸಾರ ಮಾಡಲು ಅಲ್ಲ. ನಾನು ನವೀನ್ ಇವನೊಂದಿಗೆ ಹೋಗುತ್ತೇನೆ ಎಂದು ಸ್ಪೂರ್ತಿ ಶೆಟ್ಟಿ ಹೇಳಿದ್ದಾಳೆ.

ಈ ಬಗ್ಗೆ ಸಂಕೇತ್ ಶೆಟ್ಟಿ. ಪತ್ನಿಯ ತಂದೆ ತಾಯಿ ಹಾಗೂ ಅವಳ ದೊಡ್ಡಪ್ಪ ಅಶೋಕ ಶೆಟ್ಟಿ ಅವರಲ್ಲಿ ವಿಚಾರಿಸಿದಾಗ, ನವೀನ್ ಹಾಗೂ ಸ್ಪೂರ್ತಿ ಒಟ್ಟಿಗೆ ಇರುವ ವಿಷಯ ನಮಗೆ ಗೊತ್ತು. ಅವನು ನಮ್ಮ ಜಾತಿಯವನು ಅಲ್ಲ ಎಂದು ಮರ್ಯಾದೆಗೆ ಅಂಜಿ ನಾವು ನಿನಗೆ ಮದುವೆ ಮಾಡಿಕೊಟ್ಟಿದ್ದು. ನೀನು ಅವಳು ಹೇಳಿದ ಹಾಗೇ ಕೇಳಿಕೊಂಡು ಇರು. ಇಲ್ಲವಾದರೆ ನೀನು ಅವಳಿಗೆ ಹಿಂಸೆ ಕೊಟ್ಟಿದೆ ಎಂದು ಕಂಪ್ಲೇಟ್ ಮಾಡಿ ನಿನ್ನ ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿರುವುದು ತಿಳಿದುಬಂದಿದೆ.

ಆ ಬಳಿಕ ಸ್ಪೂರ್ತಿ ಶೆಟ್ಟಿ ಮದುವೆ ಸಂದರ್ಭದಲ್ಲಿ ತನಗೆ ನೀಡಿದ್ದ 10 ಲಕ್ಷ ಮೌಲ್ಯದ ಚಿನ್ನ, ವಜ್ರ ಮುಂತಾದ ಆಭರಣಗಳ ಸಮೇತ ಗಂಡನ ಮನೆ ತೊರೆದಿದ್ದಾರೆ. ಈ ಬಗ್ಗೆ ಸಂಕೇತ್ ಶೆಟ್ಟಿ ಪತ್ನಿ ಸ್ಪೂರ್ತಿ ಶೆಟ್ಟಿ, ಆಕೆಯ ತಂದೆ ಸತೀಶ್ ಶೆಟ್ಟಿ, ತಾಯಿ ಸುಜಾತ ಶೆಟ್ಟಿ ಹಾಗೂ ಸೂರ್ತಿಯ ಪ್ರಿಯಕರ ನವೀನ್ ಮೈಸೂರು ಎಂಬುವವನ ವಿರುದ್ದ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Exit mobile version